alex Certify ‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ದಿಲ್ ​ಭರ್​, ದಿಲ್​ ಭರ್’ ಹಾಡಿಗೆ ಟೆರೇಸ್​ ಮೇಲೆ ಸೊಂಟ ಬಳುಕಿಸಿದ ಮಹಿಳೆ…!

ಸೀರೆಯುಟ್ಟ ಮಹಿಳೆಯೊಬ್ಬರು ನೋರಾ ಫತೇಹಿ ಅವರ ಸೂಪರ್‌ ಹಿಟ್ ಐಟಂ ಸಾಂಗ್ ‘ದಿಲ್​ಭರ್​, ದಿಲ್​ಭರ್’ ಗೆ ​ಸೊಂಟ ಬಳುಕಿಸಿ ವೈರಲ್​ ಆಗಿದ್ದಾರೆ. ಕಪ್ಪು ಮತ್ತು ಮೆಜೆಂಟಾ ಸೀರೆಯನ್ನು ಧರಿಸಿದ್ದ ಮಹಿಳೆ ಅಲ್ಕಾ ಯಾಗ್ನಿಕ್ ಹಾಡಿದ ಹಿಟ್ ಹಾಡಿಗೆ ಸೊಂಟ ಬಳುಕಿಸಿದ್ದಾಳೆ.

ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ ಕೂದಲಿನ ಹಾರಾಟ ಹಾಗೂ ಆ ವಾತಾವಣದಲ್ಲಿ ಸೊಂಟ ಬಳುಕಿಸಿದ ರೀತಿ ನೋಡಿ ಕೆಲವು ಯುವಕರು ಫಿದಾ ಆಗಿದ್ದಾರೆ. ಕಟ್ಟಡದ ಟೆರೇಸ್​ನಲ್ಲಿ ಮಹಿಳೆ ಈ ನೃತ್ಯ ಮಾಡಿದ್ದಾರೆ.

ಕ್ಲಿಪ್ ಅನ್ನು ‘durgajha576’ ಬಳಕೆದಾರರು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಸುಂದರವಾದ ಬೆಲ್ಲಿ ಡಾನ್ಸ್​ ಎಂದು ಹೇಳಿದ್ದಾರೆ. ಇದು 60 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. ಆದರೆ ಹಲವರು ಇದು ಬೆಲ್ಲಿ ಡಾನ್ಸ್​ ಅಲ್ಲ, ಮಹಿಳೆ ಸಾಧಾರಣವಾಗಿ ಸೊಂಟ ಬಳುಕಿಸಿದ್ದಾಳಷ್ಟೇ. ಬೆಲ್ಲಿ ಡಾನ್ಸ್​ಗೆ ಅದರದ್ದೇ ಆದ ಮಹತ್ವವಿದೆ ಎಂದಿದ್ದಾರೆ. ಇನ್ನು ಕೆಲವರು ಬೆಲ್ಲಿ ಡಾನ್ಸ್​ಗೆ ತಜ್ಞತೆ ಬೇಕು, ಅದಕ್ಕೆ ಅಪಾರ ಪರಿಶ್ರಮ ಬೇಕು. ಇದು ಬೆಲ್ಲಿನೃತ್ಯ ಅಲ್ಲ ಎಂದಿದ್ದಾರೆ. ಆದರೆ ಇನ್ನು ಕೆಲವರು ಮಾತ್ರ ಈಕೆಯ ನೃತ್ಯಕ್ಕೆ ಮನಸೋತಿರುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...