alex Certify ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ: ನಿಯಮ ಉಲ್ಲಂಘಿಸಿದ ವಾಹಿನಿ ವಿರುದ್ಧ ಎಫ್ಐಆರ್ ದಾಖಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸರಿಗಮಪ’ ಗ್ರ್ಯಾಂಡ್ ಫಿನಾಲೆ: ನಿಯಮ ಉಲ್ಲಂಘಿಸಿದ ವಾಹಿನಿ ವಿರುದ್ಧ ಎಫ್ಐಆರ್ ದಾಖಲು

ಬೆಂಗಳೂರು: ಕೊರೋನಾ ನಿಯಮ ಉಲ್ಲಂಘಿಸಿ ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ ಆಯೋಜಿಸಿದ್ದ ಕಾರಣಕ್ಕೆ ಜೀ ಕನ್ನಡ ವಾಹಿನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೈಸೂರು ರಸ್ತೆಯ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಜೀ ಕನ್ನಡ ವಾಹಿನಿಯ ‘ಸರಿಗಮಪ’ ಗ್ರ್ಯಾಂಡ್ ಫಿನಾಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ 100 ಜನ ಭಾಗವಹಿಸಲು ಅನುಮತಿ ಪಡೆದುಕೊಂಡಿದ್ದು, ಅದಕ್ಕಿಂತಲೂ ಅಧಿಕ ಮಂದಿ ಭಾಗಿಯಾಗಿದ್ದರು. ಮಾಸ್ಕ್ ಧರಿಸದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...