alex Certify ಸಪ್ನಾ ಚೌಧರಿ `ಪಾನಿ ಛಲ್ಕೆ` ನೃತ್ಯಕ್ಕೆ ಅಭಿಮಾನಿಗಳು ಫಿದಾ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಪ್ನಾ ಚೌಧರಿ `ಪಾನಿ ಛಲ್ಕೆ` ನೃತ್ಯಕ್ಕೆ ಅಭಿಮಾನಿಗಳು ಫಿದಾ: ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ

ಸಪ್ನಾ ಚೌಧರಿ, ಹಿಂದಿ ಬಿಗ್ಬಾಗ್ ಖ್ಯಾತಿಯ ಮತ್ತು ಹರಿಯಾಣದ ಪ್ರಸಿದ್ಧ ನೃತ್ಯಗಾರ್ತಿ. ಇನ್ಸ್ಟಾಗ್ರಾಮ್​ನಲ್ಲಿ ಏನಿಲ್ಲ ಅಂದರೂ 5 ಮಿಲಿಯನ್ ಫಾಲೋವರ್ಸ್​ಗಳನ್ನ ಹೊಂದಿದ್ದಾರೆ. ಆಗಾಗ ಸುದ್ದಿಯಲ್ಲಿರುವ ಸಪ್ನಾ, ತಮ್ಮ ಡಾನ್ಸ್​​ಗೆನೇ ಫೇಮಸ್ ಆದವರು. ಒಂದು ಬಾರಿ ಸ್ಟೇಜ್ ಹತ್ತಿ ಸ್ಟೆಪ್ ಹಾಕೋದಕ್ಕೆ ಶುರು ಮಾಡಿದ್ರೆ ಸಾಕು ಸಪ್ನಾ ಚೌಧರಿಗೆ ಫಿದಾ ಆಗದವರೇ ಯಾರೂ ಇಲ್ಲ.

ನೋಡ್ಬೇಕು ಕಣ್ರೀ, ಸಪ್ನಾ ಚೌಧರಿ ಮಾಡೋ ಡಾನ್ಸ್​​ನ್ನ , ಹರಿಯಾಣ ಜನರ ಪಾಲಿಗೆ ಈಕೆನೇ ಸ್ವರ್ಗದಿಂದ ಧರೆಗಿಳಿದ ರಂಭೆ, ಊರ್ವಶಿ, ಮೇನಕೆ. ಇದೇ ಸಪ್ನಾ ಚೌಧರಿ ಇತ್ತಿಚೆಗೆ ಕಾರ್ಯಕ್ರಮವೊಂದಲ್ಲಿ `ಪಾನಿ ಛಲ್ಕೆ` ( ನೀರು ಚಿಮ್ಮಿದ್ದಾಗ) ಅನ್ನೊ ಹಾಡಿಗೆ ಡಾನ್ಸ್ ಮಾಡಿದ್ದಾರೆ.

ಈ ಹಾಡನ್ನ ಗಾಯಕ ಮನಿಶ್ ಶರ್ಮಾ ಅವರು ಹಾಡಿದ್ಧಾರೆ. ಪಟಿಯಾಲಾ ಸೂಟ್ ಹಾಕಿಕೊಂಡು, ತಲೆ ಮೇಲೆ ಸೆರಗನ್ನ ಹೊದ್ದಿಕೊಂಡು ಪಕ್ಕಾ ಹರಿಯಾಣಾ ಸ್ಟೈಲ್​ನಲ್ಲಿ ಸೊಂಟ ಬಳಕಿಸಿ ಕುಣಿಯೋದನ್ನ ನೋಡಬಹುದು.

ಅದೇ ಕಾರ್ಯಕ್ರಮದಲ್ಲಿ ಇದ್ದ ಅಭಿಮಾನಿಯೊಬ್ಬ ಸಪ್ನಾ ಚೌಧರಿ ಈ ಡಾನ್ಸ್​​ನ ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗೆ ಅಪ್ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನ 77 ಲಕ್ಷ ಜನ ನೋಡಿ ಇಷ್ಟಪಟ್ಟಿದ್ದಾರೆ. ಅಷ್ಟೆ ಅಲ್ಲ 54 ಲಕ್ಷ ಜನ ಈ ವಿಡಿಯೋವನ್ನ ಇಷ್ಟ ಪಟ್ಟಿದ್ದಾರೆ. ಇದಿಷ್ಟು ಸಾಕನಿಸುತ್ತೆ ಸಪ್ನಾ ಚೌಧರಿಯ ಗುಂಗು ಇಲ್ಲಿನ ಜನರಿಗೆ ಯಾವ ಮಟ್ಟದಲ್ಲಿ ಇದೆ. ಅಂತ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...