alex Certify ನಗು ತರಿಸುತ್ತೆ ಸಾನಿಯಾ ಮಿರ್ಜಾ ಶೇ‌ರ್‌ ಮಾಡಿರುವ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ತರಿಸುತ್ತೆ ಸಾನಿಯಾ ಮಿರ್ಜಾ ಶೇ‌ರ್‌ ಮಾಡಿರುವ ಈ ವಿಡಿಯೋ

ಅಮೆರಿಕನ್ ರಿಯಾಲಿಟಿ ಷೋನಲ್ಲಿ ಕೇಳಿದ ಪ್ರಶ್ನೆಯೊಂದು ಇದೀಗ ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ. ಇದರ ವಿಡಿಯೋ ಅನ್ನು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಶೇರ್‌ ಮಾಡಿಕೊಂಡಾಗಿನಿಂದ ಇದು ಭಾರಿ ವೈರಲ್‌ ಆಗಿದ್ದು, ಜನರು ಬಿದ್ದೂ ಬಿದ್ದೂ ನಗುತ್ತಿದ್ದಾರೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಮೊದಲನೆಯ ಪ್ರಶ್ನೆಯಲ್ಲಿ ಹಾಟ್‌ಸೀಟ್‌ನಲ್ಲಿ ಕುಳಿತವರಿಗೆ ಎದುರಾದ ಪ್ರಶ್ನೆ ನೀವು ಯಾರನ್ನು ಮಿಲೇನಿಯರ್‌ ಆಗಿ ನೋಡಬಯಸುತ್ತೀರಿ ಎನ್ನುವುದು. ಅದರಲ್ಲಿ ನಾಲ್ಕು ಮಂದಿ ಕ್ರೀಡಾ ತಾರೆಯರ ಹೆಸರು ಇತ್ತು. ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಇಲ್ಲಿಯವರೆಗೆ ಆಟ ಚೆನ್ನಾಗಿತ್ತು. ನಂತರದ ಪ್ರಶ್ನೆಯೇ ನಗೆ ತರಿಸುವಂಥದ್ದು.

ಅದೇನೆಂದರೆ, “ಸರಿಸುಮಾರು ಎಂಟು ವಾರಗಳ ಗರ್ಭಿಣಿಯಾಗಿದ್ದಾಗ ಈ ಟೆನಿಸ್ ಶ್ರೇಷ್ಠರಲ್ಲಿ ಯಾರು ಒಮ್ಮೆ ಆಸ್ಟ್ರೇಲಿಯನ್ ಓಪನ್ ಗೆದ್ದರು?” ಎಂದು ಪ್ರಶ್ನೆ ಕೇಳಲಾಗಿತ್ತು. ಇದರಲ್ಲಿ ಕೊಟ್ಟ ನಾಲ್ಕು ಆಯ್ಕೆಯಲ್ಲಿ ಆಂಡಿ ಮುರ್ರೆ, ಸೆರೆನಾ ವಿಲಿಯಮ್ಸ್, ರೋಜರ್ ಫೆಡರರ್ ಮತ್ತು ಜಾನ್ ಮೆಕೆನ್ರೋ ಇದ್ದರು. ಇಲ್ಲೇ ಇರುವುದು ಸ್ವಾರಸ್ಯ. ಅದೇನೆಂದರೆ ಕೇಳಿರುವ ಪ್ರಶ್ನೆ ಯಾರು ಗರ್ಭಿಣಿ ಎಂದು. ಆದರೆ ಈ ನಾಲ್ಕು ಆಯ್ಕೆಯಲ್ಲಿ ಸೆರೆನಾ ವಿಲಿಯಮ್ಸ್ ಬಿಟ್ಟರೆ ಎಲ್ಲರೂ ಪುರುಷರು.

ಇದನ್ನು ಸಾನಿಯಾ ಮಿರ್ಜಾ ಶೇರ್‌ ಮಾಡಿಕೊಂಡಿದ್ದು, ಇದಕ್ಕೆ ಥಹರೇವಾರಿ ಹಾಸ್ಯದ ಕಮೆಂಟ್‌ಗಳು ಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...