alex Certify ಆನೆ ನಡೆದಾಗ ನಾಯಿ ಬೊಗಳೋದು ಸಹಜ: ಟ್ವಿಟರ್​ನಲ್ಲಿ ನಟ ಜಗ್ಗೇಶ್​ ಪರೋಕ್ಷ ಟಾಂಗ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನೆ ನಡೆದಾಗ ನಾಯಿ ಬೊಗಳೋದು ಸಹಜ: ಟ್ವಿಟರ್​ನಲ್ಲಿ ನಟ ಜಗ್ಗೇಶ್​ ಪರೋಕ್ಷ ಟಾಂಗ್​

ಶಾಲಾ ಮಕ್ಕಳ ಸ್ವೆಟರ್​ ಹಂಚಿಕೆಯಲ್ಲಿ ಸ್ಯಾಂಡಲ್​ವುಡ್​ ನಟ ಕೋಮಲ್​ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪ ಎದುರಾಗಿದೆ. ಈಗಾಗಲೇ ಈ ಗೋಲ್​ಮಾಲ್​ಗೂ ನನಗೂ ಯಾವುದೇ ರೀತಿಯ ಸಂಬಂಧ ಇಲ್ಲ. ನನ್ನ ಹೆಸರು ವಿನಾಕಾರಣ ಎಳೆ ತರಬೇಡಿ ಎಂದು ನಟ ಕೋಮಲ್ ಹೇಳಿಕೆ ನೀಡಿದ್ದಾರೆ.

ಈ ನಡುವೆ ತಮ್ಮನ ಮೇಲೆ ಬಂದಿರುವ ಆರೋಪದ ವಿಚಾರವಾಗಿ ನಟ ಜಗ್ಗೇಶ್​ ಗರಂ ಆಗಿದ್ದಾರೆ ಎನ್ನಲಾಗಿದೆ. ಟ್ವೀಟ್​ ಮೂಲಕ ಜಗ್ಗೇಶ್​ ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.

ಸ್ವೆಟರ್​ ಗೋಲ್​ಮಾಲ್​ ಸುದ್ದಿ ಚರ್ಚೆಗೆ ಬರುತ್ತಿದ್ದಂತೆಯೇ ನಟ ಜಗ್ಗೇಶ್​ ಇಂದು ಪರೋಕ್ಷ ಟಾಂಗ್​ ನೀಡುವಂತೆ ಟ್ವೀಟಾಯಿಸಿದ್ದಾರೆ. ನಾನು ಉತ್ತಮ ಎಂದು ಅಧಮರಿಗೆ ಎದೆಬಗೆದು ವ್ಯರ್ಥ ತೋರಿಕೆ ಏಕೆ ಬೇಕು..? ಆನೆ ರಾಜಮಾರ್ಗದಲ್ಲಿ ಆಗಲಿ , ಗಲ್ಲಿಯಲ್ಲಾಗಲಿ ನಡೆಯುವಾಗ ನಾಯಿ ಬೊಗಳುವುದು ಸಹಜ..! ನಮ್ಮ ಗುಣ ಆನೆಯಂತೆ ಇದ್ದಾಗ, ಬೊಗಳುವ ನಾಯಿಯ ಸಮಕ್ಕೆ ನಾವು ಇಳಿಯಬಾರದು. ಆಕಸ್ಮಿಕ ಸಿಟ್ಟಿಗೆ ಇಳಿದರೆ ಆನೆಯ ಸ್ಥಾನ ನಾಯಿಗೆ ಸಮ ಆಗುತ್ತದೆ. ನಾನು ಕಲಿತ ನೀತಿಪಾಠ ಇಂದಿನ ಸಮಾಜದ ನಡೆಗೆ ಎಂದು ಟ್ವೀಟಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...