alex Certify 3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

3ನೇ ಸ್ಥಾನದಲ್ಲಿ ಶಿಯೋಮಿ, ಎರಡನೇ ಸ್ಥಾನದಲ್ಲಿ ಆಪಲ್….! ಮೊದಲ ಸ್ಥಾನ ಯಾರಿಗೆ ಗೊತ್ತಾ….?

ಸ್ಮಾರ್ಟ್ಫೋನ್ ಇಲ್ದೆ ಜೀವನ ಇಲ್ಲ ಎನ್ನುವಂತಾಗಿದೆ. ಪ್ರತಿಯೊಬ್ಬರ ಕೈನಲ್ಲೂ ಈಗ ಸ್ಮಾರ್ಟ್ಫೋನ್ ಓಡಾಡುತ್ತೆ. ಈ ಮಧ್ಯೆ, ಜಾಗತಿಕ ಸ್ಮಾರ್ಟ್ ಫೋನ್ ಸಾಗಣೆ ಕುರಿತು ಕ್ಯಾನಾಲೀಸ್ ಸಂಸ್ಥೆಯ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಶಿಯೋಮಿ ಮೂರನೇ ಸ್ಥಾನ ಪಡೆದಿದೆ. ಆಪಲ್ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನ ಸ್ಯಾಮ್‌ಸಂಗ್ ಪಾಲಾಗಿದೆ.

ವರದಿ ಪ್ರಕಾರ, ಸ್ಯಾಮ್ಸಂಗ್ ಈಗ ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿಯಾಗಿ ಮಾರ್ಪಟ್ಟಿದೆ. 2021 ರ ಮೂರನೇ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ನಂಬರ್ ಒನ್ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಜಾಗತಿಕ ಸ್ಮಾರ್ಟ್ ಫೋನ್ ಸಾಗಣೆಯಲ್ಲಿ ಶೇಕಡಾ 6 ರಷ್ಟು ಇಳಿಕೆ ಕಂಡುಬಂದಿದೆ. ಚಿಪ್ ಕೊರತೆಯಿಂದಾಗಿ ಈ ಕುಸಿತವಾಗಿದೆ. ತಯಾರಕರು ಚಿಪ್‌ಗಳ ಬೆಲೆಯನ್ನು ಹೆಚ್ಚಿಸಿದ್ದಾರೆ. ಈ ಕಾರಣದಿಂದಾಗಿ, ಮುಂಬರುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬೆಲೆಯೂ ಹೆಚ್ಚಾಗಲಿದೆ.

ಮೂರನೇ ತ್ರೈಮಾಸಿಕದಲ್ಲಿ ಸ್ಯಾಮ್ ಸಂಗ್ ನ ಸ್ಮಾರ್ಟ್ ಫೋನ್ ಮಾರುಕಟ್ಟೆಯ ಪಾಲು ಶೇಕಡಾ 23ರಷ್ಟಿದೆ. ಈ ತ್ರೈಮಾಸಿಕದಲ್ಲಿ ಆಪಲ್ ಪಾಲು ಶೇಕಡಾ 15ರಷ್ಟಿದೆ. ಶಿಯೋಮಿ ಪಾಲು ಶೇಕಡಾ 14ರಷ್ಟಿದೆ. ವಿವೋ ಶೇಕಡಾ 10ರಷ್ಟು ಪಾಲು ಪಡೆದಿದ್ದರೆ, ಒಪ್ಪೋ ಶೇಕಡಾ 10ರಷ್ಟು ಪಾಲು ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...