alex Certify ನವ ವಧುವಿನಂತೆ ಸಿಂಗಾರಗೊಂಡು ವಿಜಯ್​ದೇವರಕೊಂಡ ಜೊತೆ ಕಾಣಿಸಿಕೊಂಡ ನಟಿ ಸಮಂತಾ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನವ ವಧುವಿನಂತೆ ಸಿಂಗಾರಗೊಂಡು ವಿಜಯ್​ದೇವರಕೊಂಡ ಜೊತೆ ಕಾಣಿಸಿಕೊಂಡ ನಟಿ ಸಮಂತಾ: ವಿಡಿಯೋ ವೈರಲ್

ಖ್ಯಾತ ನಟಿ ಸಮಂತಾ ರುತ್​ ಪ್ರಭು ವಧುವಿನಂತೆ ಸಿಂಗಾರಗೊಂಡಿದ್ದು ಅವರ ಪಕ್ಕದಲ್ಲಿ ವಿಜಯ್​ ದೇವರಕೊಂಡ ನಿಂತಿರುವ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗ್ತಿದೆ. ಪ್ರಸ್ತುತ ಈ ಜೋಡಿ ಕುಶಿ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಮಂಗಳವಾರದಂದು ಆಂಧ್ರಪ್ರದೇಶದ ದ್ರಾಕ್ಷಾರಾಮದಲ್ಲಿರುವ ದೇವಸ್ಥಾನದಲ್ಲಿ ಪೂಜೆಯ ಶೂಟಿಂಗ್​ ನಡೆದಿದೆ. ಈ ವೇಳೆ ಸಮಂತಾ ಸರಳವಾದ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

ಸಮಂತಾ ಜೊತೆಯಲ್ಲಿ ನಟ ವಿಜಯ್​ ದೇವರಕೊಂಡ ಕೂಡ ಕಾಣಿಸಿಕೊಂಡಿದ್ದಾರೆ. ವಿಜಯ್​ ದೇವರಕೊಂಡ ಸಾಂಪ್ರದಾಯಿಕ ಉಡುಗೆಯಲ್ಲಿ ಗಮನ ಸೆಳೆದಿದ್ದಾರೆ. ಸಮಂತಾ ಹಾಗೂ ವಿಜಯ್​ ತಮ್ಮ ಸಹನಟರೊಂದಿಗೆ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳನ್ನು ನೋಡುತ್ತಿದ್ದಂತೆಯೇ ಅವರೆಡೆಗೆ ತಿರುಗಿ ನಮಸ್ಕರಿಸಿದ್ದಾರೆ.

ಸಮಂತಾ ಹಾಗೂ ವಿಜಯ್​ ಸದ್ಯ ಕುಶಿ ಚಿತ್ರದ ಶೂಟಿಂಗ್​​ನಲ್ಲಿ ಬ್ಯುಸಿ ಆಗಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಸಿನಿಮಾ ರೊಮ್ಯಾಂಟಿಕ್​ ಕತೆಯನ್ನು ಹೊಂದಿದ್ದು ಈ ಜೋಡಿಯ ಎರಡನೇ ಸಿನಿಮಾ ಇದಾಗಿದೆ. ಈ ಹಿಂದೆ 2018ರಲ್ಲಿ ಮಹಾನಟಿ ಸಿನಿಮಾದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...