alex Certify ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನ ಮಡಿಲಲ್ಲಿ ಮಲಗಿರುವ ಸೆಲ್ಫಿ ಶೇರ್‌ ಮಾಡಿದ ಸಲ್ಮಾನ್ ಖಾನ್

ತಮ್ಮ ತಾಯಿಯ ಮಡಿಲಲ್ಲಿ ಮಲಗಿ ಸೆಲ್ಫೀ ಒಂದನ್ನು ಸೆರೆ ಹಿಡಿದಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಈ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ತಮ್ಮ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

’ತಾಯಿಯ ಮಡಿಲು…. ಸ್ವರ್ಗ’ ಎಂಬ ಅರ್ಥದ ಕ್ಯಾಪ್ಷನ್ ಕೊಟ್ಟಿರುವ ಸಲ್ಮಾನ್‌ ಖಾನ್‌ರ ಈ ಚಿತ್ರಕ್ಕೆ ಅವರ ಅನುಯಾಯಿಗಳಿಂದ ಭರ್ಜರಿ ಪ್ರತಿಕ್ರಿಯೆಗಳು ಬಂದಿವೆ.

‘ಮೈಕೆಲ್ ಮದನ ಕಾಮರಾಜನ್’ನಲ್ಲಿ ಭೀಮ್ ಬಾಯ್ ಪಾತ್ರದಲ್ಲಿ ಮಿಂಚಿದ್ದ ದಿವಂಗತ ನಟ ಪ್ರವೀಣ್ ಕುಮಾರ್ ಸೋಬ್ತಿ

ತಮ್ಮ ತಾಯಿಯೊಂದಿಗೆ ಸೆರೆ ಹಿಡಿದ ಚಿತ್ರಗಳನ್ನು ಸಲ್ಮಾನ್ ಆಗಾಗ ಶೇರ್‌ ಮಾಡುತ್ತಲೇ ಇರುತ್ತಾರೆ.

ಇತ್ತೀಚೆಗೆ ಕೊಟ್ಟ ಸಂದರ್ಶನವೊಂದರ ವೇಳೆ ತಮ್ಮ ತಾಯಿ ಸಲ್ಮಾಗೆ ಆಕೆ ಪತಿ ಸಲೀಂ ಖಾನ್ ಎರಡನೇ ಮದುವೆಯಾದ ವಿಚಾರ ಎಷ್ಟು ನೋವು ಕೊಟ್ಟಿತ್ತೆಂದು ಹೇಳಿಕೊಂಡಿದ್ದರು ಸಲ್ಮಾನ್ ಖಾನ್. ಆದರೂ ಕ್ರಮೇಣವಾಗಿ ಈ ವಾಸ್ತವವನ್ನು ಒಪ್ಪಿದ ತಮ್ಮ ತಾಯಿ ಈಗ ಸಂತಸದಿಂದ ಎಲ್ಲರ ಜೊತೆಗೆ ಬಾಳುತ್ತಿದ್ದಾರೆ ಎಂದಿದ್ದು, ತಮ್ಮ ಕುಟುಂಬ ಸಂತಸದಿಂದ ಬಾಳುತ್ತಿದೆ ಎನ್ನುತ್ತಾರೆ.

“ನನಗೆ ಆಕೆ ನೋವಿನಲ್ಲಿ ಇರುವುದನ್ನು ನೋಡಲು ಆಗುವುದಿಲ್ಲ. ನನ್ನ ತಂದೆ ಮತ್ತೊಂದು ಮದುವೆಯಾದಾಗ ಆಕೆಗೆ ಬಹಳ ನೋವಾಗಿತ್ತು, ಆತ ಮನೆಗೆ ಮರಳುವುದನ್ನು ಆಕೆ ಕಾಯುವುದನ್ನು ನೋಡಲು ನನಗೆ ನೋವಾಗುತ್ತಿತ್ತು. ನಿಧಾನವಾಗಿ ನನ್ನ ತಾಯಿ ಅದನ್ನು ಒಪ್ಪಿಕೊಳ್ಳಲು ಆರಂಭಿಸಿದರು. ನನಗೆ 10 ವರ್ಷ ವಯಸ್ಸಾಗಿದ್ದ ವೇಳೆ ನನ್ನ ತಾಯಿಯನ್ನು ತಾವು ಇನ್ನೂ ಪ್ರೀತಿಸುತ್ತಿರುವುದಾಗಿ ನನ್ನ ತಂದೆ ನಮಗೆ ವಿವರಿಸಿದರು ಹಾಗೂ ಹೆಲೆನ್ ಆಂಟಿಯನ್ನು ಒಪ್ಪಿಕೊಳ್ಳಲು ನಮಗೆ ಸ್ಪಲ್ಪ ಸಮಯ ಹಿಡಿಯಿತು ಮತ್ತು ಹೆಲೆನ್ ಆಂಟಿ ನಮ್ಮ ಕುಟುಂಬದ ಭಾಗವಾಗಿದ್ದಾರೆ,” ಎಂದು ಹೇಳಿಕೊಂಡಿದ್ದರು ಸಲ್ಮಾನ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...