alex Certify ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಇನ್ಮುಂದೆ ವೀಕೆಂಡ್ ನಲ್ಲೂ ಸಿಗಲಿದೆ ಸಂಬಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ ಗುಡ್‌ ನ್ಯೂಸ್: ಇನ್ಮುಂದೆ ವೀಕೆಂಡ್ ನಲ್ಲೂ ಸಿಗಲಿದೆ ಸಂಬಳ

अब Weekend पर भी आ जाएगी Salary, NACH की सुविधाएं पूरे हफ्ते मिलेंगी, 1 अगस्त से लागू

ಇನ್ಮುಂದೆ ಸಂಬಳ ಪಡೆಯಲು ಶನಿವಾರ-ಭಾನುವಾರ ಅಡ್ಡಿಯಾಗುವುದಿಲ್ಲ. ಆರ್‌ಬಿಐ ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ ನಿಯಮಗಳನ್ನು ಬದಲಾಯಿಸಿದೆ. ಆಗಸ್ಟ್ 1 ರಿಂದ ವಾರದ ಏಳು ದಿನ ನ್ಯಾಚ್ ಸೌಲಭ್ಯಗಳು ಲಭ್ಯವಿರುತ್ತದೆ. ಸದ್ಯ  ಬ್ಯಾಂಕುಗಳು ಬಾಗಿಲು ತೆರೆದಾಗ ಮಾತ್ರ ಇದರ ಸೌಲಭ್ಯಗಳು ಲಭ್ಯವಿದ್ದವು. ಸೋಮವಾರದಿಂದ ಶುಕ್ರವಾರದವರೆಗೆ ನ್ಯಾಚ್ ಸೌಲಭ್ಯಗಳು ಲಭ್ಯವಿದ್ದವು.

ಅನೇಕ ಬಾರಿ ತಿಂಗಳ ಮೊದಲ ದಿನ ವಾರಾಂತ್ಯದಲ್ಲಿ ಬರುತ್ತದೆ. ಆಗ ಸಂಬಳ ಕ್ರೆಡಿಟ್ ಆಗಲು ಸೋಮವಾರದವರೆಗೆ ಕಾಯಬೇಕಾಗುತ್ತದೆ. ಗ್ರಾಹಕರ ಅನುಕೂಲವನ್ನು ಮತ್ತಷ್ಟು ಹೆಚ್ಚಿಸಲು ಮತ್ತು ಆರ್ಟಿಜಿಎಸ್ ಸೌಲಭ್ಯವನ್ನು ಪಡೆಯಲು, ವಾರದ 7 ದಿನ ನ್ಯಾಚ್ ಕೆಲಸ ಮಾಡುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಆಗಸ್ಟ್ 1 ರಿಂದ ಇದು ಜಾರಿಗೆ ಬರುವುದಾಗಿ ಅವರು ತಿಳಿಸಿದ್ದಾರೆ.

ನ್ಯಾಚ್ ಬೃಹತ್ ಪಾವತಿ ವ್ಯವಸ್ಥೆಯಾಗಿದೆ. ಇದನ್ನು ಭಾರತ ಪಾವತಿ ನಿಗಮ ನಿರ್ವಹಿಸುತ್ತದೆ. ಲಾಭಾಂಶ, ಬಡ್ಡಿ, ಸಂಬಳ ಮತ್ತು ಪಿಂಚಣಿಯಂತಹ ವಿವಿಧ ರೀತಿಯ ಸಾಲ ವರ್ಗಾವಣೆಗೆ ಇದು ಅನುಕೂಲಕರವಾಗಿದೆ. ಇದಲ್ಲದೆ ವಿದ್ಯುತ್ ಬಿಲ್, ಗ್ಯಾಸ್, ಟೆಲಿಫೋನ್, ನೀರು, ಸಾಲದ ಇಎಂಐ, ಮ್ಯೂಚುವಲ್ ಫಂಡ್ ಹೂಡಿಕೆ ಮತ್ತು ವಿಮಾ ಪ್ರೀಮಿಯಂ ಪಾವತಿ ಸೌಲಭ್ಯವನ್ನು ಸಹ ಒದಗಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...