alex Certify ಹಾಡಿನ ಮೂಲಕ ʼಕೆಕೆʼ ಗೆ ಶ್ರದ್ಧಾಂಜಲಿ ಸಲ್ಲಿಸಿದ ಸೈನಾ ಪತಿ ಪರುಪಲ್ಲಿ ಕಶ್ಯಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಡಿನ ಮೂಲಕ ʼಕೆಕೆʼ ಗೆ ಶ್ರದ್ಧಾಂಜಲಿ ಸಲ್ಲಿಸಿದ ಸೈನಾ ಪತಿ ಪರುಪಲ್ಲಿ ಕಶ್ಯಪ್

ಖ್ಯಾತ ಗಾಯಕ ಕೆಕೆ ತಮ್ಮ ಗಾಯನದ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನೇ ಹೊಂದಿದ್ದರು. ಆದರೆ, ವಿಧಿ ಅವರನ್ನು ಬಹುಬೇಗನೇ ತನ್ನತ್ತ ಸೆಳೆದುಕೊಂಡಿತು. ಮೇ 31 ರಂದು ಕೋಲ್ಕತ್ತಾದಲ್ಲಿ ನಿಧನರಾದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದವರಿಗೆ ಲೆಕ್ಕವೇ ಇಲ್ಲ.

ಕೆಕೆಯವರ ಕಟ್ಟಾ ಅಭಿಮಾನಿಗಳಲ್ಲಿ ದೇಶದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮತ್ತು ಅವರ ಪತಿ ಪರುಪಲ್ಲಿ ಕಶ್ಯಪ್ ಅವರೂ ಇದ್ದಾರೆ. ತಮ್ಮ ನೆಚ್ಚಿನ ಗಾಯಕನಿಗೆ ಕಶ್ಯಪ್ ಅವರು, ಕೆಕೆ ಹಾಡಿದ ʼದಿಲ್ ಇಬಾದತ್ʼ ಹಾಡನ್ನು ಹಾಡುವ ಮೂಲಕ ಗಾನ ನಮನ ಸಲ್ಲಿಸಿದ್ದಾರೆ.

ಅವರು ಹಾಡಿದ ಹಾಡಿನ ವಿಡಿಯೋವನ್ನು ಸೈನಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಕೆಕೆಯವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. #fantasticsong #kk’’ ಎಂದು ಸೈನಾ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಸೈನಾ, ಕೆಕೆ ಅವರ ಫೋಟೋವನ್ನು ಪೋಸ್ಟ್ ಮಾಡಿ, ಯಾವಾಗಲೂ ನಿಮ್ಮ ನೆನಪು ಕಾಡುತ್ತದೆ ಎಂದು ಹೇಳಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...