alex Certify SPECIAL: ಹೇಗಿರಬೇಕು ನಿಮ್ಮ ಪಾಸ್ ವರ್ಡ್…? ಇಲ್ಲಿದೆ ಇಂಟರ್ನೆಟ್ ಬಳಕೆದಾರರಿಗೆ ಬಲು ಉಪಯುಕ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SPECIAL: ಹೇಗಿರಬೇಕು ನಿಮ್ಮ ಪಾಸ್ ವರ್ಡ್…? ಇಲ್ಲಿದೆ ಇಂಟರ್ನೆಟ್ ಬಳಕೆದಾರರಿಗೆ ಬಲು ಉಪಯುಕ್ತ ಮಾಹಿತಿ

ಭಾರತ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್​ನಲ್ಲಿ ಸಿಕ್ಕಾಪಟ್ಟೆ ಸುಧಾರಣೆ ಕಂಡಿದೆ. ಹಿಂದಿನ ವರ್ಷ ಅಂದರೆ 2020ರಲ್ಲಿ ಇಂಟರ್ನೆಟ್​ ಬಳಕೆದಾರರ ಸಂಖ್ಯೆ ಸರಿ ಸುಮಾರು 70 ಕೋಟಿ ಆಸುಪಾಸಿಗೆ ಬಂದು ತಲುಪಿದೆ.

ಕೇವಲ ಭಾರತ ಮಾತ್ರವಲ್ಲದೇ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಇಂಟರ್ನೆಟ್​ ಬಳಕೆದಾರರಿಗೆ ಬರಗಾಲವೇ ಇಲ್ಲ. ಒಮ್ಮೆ ಯೋಚಿಸಿ. ಇಂಟರ್ನೆಟ್​ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ ಹ್ಯಾಕರ್ಸ್​ ಸಂಖ್ಯೆಯೂ ಹೆಚ್ಚಾಗುತ್ತಿದೆ.

ಹೀಗಾಗಿ ಇಂಟರ್ನೆಟ್​​ ಬಳಕೆ ಮಾಡುವ ನಾವು ಪಾಸ್​ವರ್ಡ್​ಗಳ ವಿಚಾರದಲ್ಲಿ ಎಷ್ಟು ಜಾಗರೂಕರಾಗಿ ಇದ್ದರೂ ಸಹ ಕಡಿಮೆಯೇ. ನಿಮ್ಮ ಪಾಸ್​ವರ್ಡ್​ ಎಷ್ಟು ದುರ್ಬಲವಾಗಿ ಇರುತ್ತದೋ ಹ್ಯಾಕರ್ಸ್​ಗೆ ನಿಮ್ಮ ಮೇಲೆ ಸೈಬರ್​ ದಾಳಿ ನಡೆಸೋದು ಅಷ್ಟೇ ಸುಲಭದ ಕೆಲಸವಾಗಿ ಪರಿಣಮಿಸುತ್ತೆ.

ಈ ಬಗೆಗಿನ ಜಾಗೃತಿಗಾಗಿ ಇಂದಿನ ದಿನವನ್ನ ಸೇಫರ್​ ಇಂಟರ್ನೆಟ್​ ಡೇ ಇಂದು ವಿಶ್ವಾದ್ಯಂತ ಆಚರಿಸಲಾಗುತ್ತೆ. ಸೇಫರ್​ ಇಂಟರ್ನೆಟ್​ ಡೇ ವಿಶೇಷವಾಗಿ ಪಾಸ್​ವರ್ಡ್​ಗಳ ವಿಚಾರದಲ್ಲಿ ಕೆಲವೊಂದು ಸಲಹೆ ಇಲ್ಲಿದೆ ನೋಡಿ.

ಒಂದು ವೇಳೆ  ನೀವು ಸ್ಟ್ರಾಂಗ್​ ಪಾಸ್​ವರ್ಡ್ ಇಡಬೇಕು ಎಂದು ಬಯಸಿದ್ದರೆ ಕಡಿಮೆ ಎಂದರೂ 8 ಅಕ್ಷರಗಳನ್ನ ನಮೂದಿಸಿ. ಇದರಲ್ಲಿ ಕ್ಯಾಪಿಟಲ್​, ಸ್ಮಾಲ್​ ಅಕ್ಷರಗಳು, ಸಂಖ್ಯೆ ಹಾಗೂ ಚಿಹ್ನೆಗಳನ್ನ ಬಳಕೆ ಮಾಡಿ. ನೀವಿಡುವ ಪಾಸ್​ವರ್ಡ್​ನ್ನು ಯಾರಿಂದಲೂ ಊಹೆ ಮಾಡೋಕೂ ಸಾಧ್ಯವಾಗದಂತಿರಲಿ.

ನಿಮ್ಮ ಪಾಸ್​ವರ್ಡ್​ನಲ್ಲಿ  ಹೆಸರು, ಜನ್ಮದಿನಾಂಕ, ಮೊಬೈಲ್​ ಸಂಖ್ಯೆ, ಇಮೇಲ್​ ಈ ರೀತಿ ಯಾವುದೇ ನಿಮ್ಮ ವೈಯಕ್ತಿಕ ಮಾಹಿತಿ ಹಾಕಬೇಡಿ. ಅಲ್ಲದೇ ಯಾರೊಂದಿಗಾದರೂ ನೀವು ಪಾಸ್​ವರ್ಡ್ ಶೇರ್​ ಮಾಡಲೇಬೇಕಾದ ಅನಿವಾರ್ಯತೆ ಬಂತು ಅಂದರೆ ಕೂಡಲೇ ಅದನ್ನ ಬದಲಾಯಿಸಿಬಿಡಿ.

ಪಾಸ್​ವರ್ಡ್​ ನೆನಪಿನಲ್ಲಿ ಇರೋದಿಲ್ಲ ಅಂತಾ ಅನೇಕರು ಮೊಬೈಲ್​, ಜನ್ಮ ದಿನಾಂಕ ಹಾಗೂ ತಮ್ಮ ಹೆಸರನ್ನೇ ಪಾಸ್​ವರ್ಡ್ ಆಗಿ ಮಾಡಿಕೊಂಡಿರ್ತಾರೆ. ಈ ರೀತಿ ಮಾಡೋದ್ರಿಂದ ನೀವು ಹ್ಯಾಕರ್ಸ್​ಗೆ ಕೆಲಸವನ್ನ ಇನ್ನಷ್ಟು ಸುಲಭ ಮಾಡಿಕೊಟ್ಟಂತಾಗುತ್ತೆ. ಯಾರದ್ದೇ ಪಾಸ್​ವರ್ಡ್​ನ್ನು ಹ್ಯಾಕ್​ ಮಾಡುವ ಮುನ್ನ ಹ್ಯಾಕರ್ಸ್​ ಮೊದಲು ಇಂತಹ ಪಾಸ್​ವರ್ಡ್​ಗಳನ್ನೇ ಬಳಕೆ ಮಾಡ್ತಾರೆ. ಹೀಗಾಗಿ ಯಾವಾಗಲು ವಿಭಿನ್ನವಾದ ಪಾಸ್​ವರ್ಡ್​ಗಳನ್ನೇ ಆಯ್ಕೆ ಮಾಡಿ.

ಕೆಲವೊಮ್ಮೆ ನಾವು ನಮ್ಮ ಎಲ್ಲಾ ಸಾಮಾಜಿಕ ಜಾಲತಾಣದ ವೇದಿಕೆಗೆ ಒಂದೇ ಪಾಸ್​ವರ್ಡ್​ ಇಟ್ಟುಬಿಡ್ತೇವೆ. ಹೀಗಾಗಿ ಒಂದು ಪಾಸ್​ವರ್ಡ್​ನ ಸುಳಿವು ಹ್ಯಾಕರ್ಸ್​ಗೆ ಗೊತ್ತಾಯ್ತು ಅಂದರೆ ನಿಮ್ಮೆಲ್ಲ ಖಾತೆಗಳನ್ನ ಹ್ಯಾಕ್​ ಮಾಡಲಾಗುತ್ತೆ. ಹೀಗಾಗಿ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಿಗೆ ಬೇರೆ ಬೇರೆ ಪಾಸ್​ವರ್ಡ್​ಗಳನ್ನ ಇಡೋದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...