alex Certify ಶಬರಿಮಲೆಯಲ್ಲಿ 10 ದಿನದಲ್ಲೇ 52 ಕೋಟಿ ರೂ. ಆದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಬರಿಮಲೆಯಲ್ಲಿ 10 ದಿನದಲ್ಲೇ 52 ಕೋಟಿ ರೂ. ಆದಾಯ

ಶಬರಿಮಲೆ: ಶಬರಿಮಲೆಯಲ್ಲಿ ನವೆಂಬರ್ 16 ರಿಂದ 25ರವರೆಗೆ ಒಟ್ಟು 52 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ. ಅನಂತಗೋಪನ್ ತಿಳಿಸಿದ್ದಾರೆ.

ಕಳೆದು 10 ದಿನದಲ್ಲಿ 12.73 ಕೋಟಿ ರೂ ಕಾಣಿಕೆ ರೂಪದಲ್ಲಿ ಲಭಿಸಿದೆ. ಅಪ್ಪಂ 2.58 ಕೋಟಿ ರೂ., ಅರವಣ 23.57 ಕೋಟಿ ರೂ., ತುಪ್ಪಾಭಿಷೇಕ 31 ಲಕ್ಷ ರೂ., ಅತಿಥಿಗೃಹಗಳ ಬಾಡಿಗೆ 48.84 ಲಕ್ಷ ರೂ. ಬಂದಿದೆ.

ಕಳೆದ ವರ್ಷ ಈ ಅವಧಿಯಲ್ಲಿ 9.92 ಆದಾಯ ಸಂಗ್ರಹವಾಗಿತ್ತು. ಅರವಣ ಪ್ರಸಾದ ಟಿನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. 1.30 ಕೋಟಿ ಟಿನ್ ಅರವಣ ಪ್ರಸಾದ ಪೂರೈಕೆಗೆ ಒಪ್ಪಂದವಾಗಿದ್ದರೂ, ಇದುವರೆಗೆ ಕೇವಲ 17 ಲಕ್ಷ ಟಿನ್ ಪೂರೈಕೆ ಮಾಡಿದ್ದ ಪ್ರಸಾದ ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಕಂಪನಿಗೆ ನೋಟಿಸ್ ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...