alex Certify ವಿಧಾನಸಭೆಯಲ್ಲಿ 9ನೇ ಬಾರಿ ಗೆದ್ದ ಏಕೈಕ ಶಾಸಕರಾದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಧಾನಸಭೆಯಲ್ಲಿ 9ನೇ ಬಾರಿ ಗೆದ್ದ ಏಕೈಕ ಶಾಸಕರಾದ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಹಳಿಯಾಳ ವಿಧಾನಸಭೆ ಕ್ಷೇತ್ರದಿಂದ ಆರ್.ವಿ. ದೇಶಪಾಂಡೆ ಮತ್ತೊಮ್ಮೆ ಜಯಗಳಿಸಿದ್ದು, ಅವರು 9ನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾದಂತಾಗಿದೆ.

ಹೊಸದಾಗಿ ರಚನೆಯಾಗುವ ವಿಧಾನಸಭೆಯಲ್ಲಿ 9 ಬಾರಿ ಗೆದ್ದ ಏಕೈಕ ಸದಸ್ಯ ಅವರಾಗಲಿದ್ದಾರೆ. 1983 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಆರ್.ವಿ. ದೇಶಪಾಂಡೆ 1985, 1989, 1994, 1999, 2004ರಲ್ಲಿ ಜಯಗಳಿಸಿ 2001ರಲ್ಲಿ ಸೋಲು ಕಂಡಿದ್ದರು. 2013, 2018ರಲ್ಲಿ ಪುನರಾಯ್ಕೆಯಾಗಿದ್ದ ಅವರು ಈಗ ಮತ್ತೊಂದು ಸಲ ಜಯಗಳಿಸಿದ್ದಾರೆ.

ಈ ವಿಧಾನ ಸಭೆಯ ಸೀನಿಯರ್ ಶಾಸಕ ಅವರಾಗಿದ್ದಾರೆ. ಡಿ.ಕೆ. ಶಿವಕುಮಾರ್, ರಾಮಲಿಂಗಾರೆಡ್ಡಿ, ಸಿದ್ದರಾಮಯ್ಯ 8ನೇ ಬಾರಿಗೆ ವಿಧಾನಸಭೆಗೆ ಪ್ರವೇಶಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...