alex Certify ಉಕ್ರೇನ್​ ಮಹಿಳೆಯರನ್ನು ರೇಪ್​ ಮಾಡಿ ಎಂದಿದ್ದ ರಷ್ಯಾ ಸೈನಿಕನ ಪತ್ನಿ; ಅಡಿಯೋ ವೈರಲ್‌ ಬಳಿಕ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರ್ಪಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್​ ಮಹಿಳೆಯರನ್ನು ರೇಪ್​ ಮಾಡಿ ಎಂದಿದ್ದ ರಷ್ಯಾ ಸೈನಿಕನ ಪತ್ನಿ; ಅಡಿಯೋ ವೈರಲ್‌ ಬಳಿಕ ಮೋಸ್ಟ್‌ ವಾಂಟೆಡ್‌ ಪಟ್ಟಿಗೆ ಸೇರ್ಪಡೆ

ಉಕ್ರೇನ್​: ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಂತೆ ಮಹಿಳೆಯೊಬ್ಬಳು ತನ್ನ ಪತಿಗೆ ಹೇಳಿದ್ದಳು. ಇದರ ಆಡಿಯೋ ವೈರಲ್ ಆದ ನಂತರ ಹೀಗೆ ಹೇಳಿದ ರಷ್ಯಾದ ಸೈನಿಕನ ಪತ್ನಿ ಸಿಕ್ಕಿಬಿದ್ದಿದ್ದಾಳೆ. ಈಕೆಯನ್ನು ‘ಜಾಗತಿಕ ವಾಂಟೆಡ್’ ಪಟ್ಟಿಗೆ ಸೇರಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಉಕ್ರೇನಿಯನ್ ತನಿಖಾ ಸಂಸ್ಥೆಗಳಿಂದ ಓಲ್ಗಾ ಬೈಕೊವ್ಸ್ಕಯಾ ಎಂದು ಗುರುತಿಸಲ್ಪಟ್ಟ ಮಹಿಳೆಯನ್ನು ರಾಜ್ಯ, ಅಂತರ-ರಾಜ್ಯ ಮತ್ತು ಅಂತರರಾಷ್ಟ್ರೀಯ ವಾಂಟೆಡ್ ಪಟ್ಟಿಗಳಿಗೆ ಸೇರಿಸಲಾಗಿದೆ.

ರಷ್ಯಾ ಆಕ್ರಮಿತ-ಉಕ್ರೇನ್‌ನಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಆಕೆ ತನ್ನ ಪತಿಗೆ ಸೂಚಿಸುತ್ತಿದ್ದಳು ಎಂದು ತಿಳಿದುಬಂದ ನಂತರ ಉಕ್ರೇನ್ ಅಧಿಕಾರಿಗಳು ತನಿಖೆಯನ್ನು ಪ್ರಾರಂಭಿಸಿದರು.

‘ಲೀಡಿಂಗ್ ಬ್ರಿಟನ್‌’ನ ವರದಿಯ ಪ್ರಕಾರ, ಮಹಿಳೆಯ ಸಂಭಾಷಣೆಯ ತನಿಖೆ ಮಾಡಲಾಗಿದೆ. ”27 ವರ್ಷದ ಈಕೆ, ತನ್ನ ಪತಿಗೆ ಕರೆ ಮಾಡಿ, ಅಲ್ಲಿ ಉಕ್ರೇನಿಯನ್ ಮಹಿಳೆಯರು ಇದ್ದಾರೆ. ಅವರ ಮೇಲೆ ಅತ್ಯಾಚಾರ ಮಾಡಿ. ನನಗೆ ನೀವು ಏನನ್ನೂ ಹೇಳುವುದು ಬೇಡ, ನಾನು ಹೇಳುವುದನ್ನು ಅರ್ಥಮಾಡಿಕೊಳ್ಳಿ” ಎಂದು ಹೇಳಿರುವುದು ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...