alex Certify ರೋಮಾಂಚಕ ರೀತಿಯಲ್ಲಿ ಪ್ರಾಣ ಉಳಿಸಿಕೊಂಡ ಪೈಲೆಟ್; ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೋಮಾಂಚಕ ರೀತಿಯಲ್ಲಿ ಪ್ರಾಣ ಉಳಿಸಿಕೊಂಡ ಪೈಲೆಟ್; ವಿಡಿಯೋ ವೈರಲ್

ಎಂಜಿನ್​ ಹಾಳಾಗಿ ಅಪಘಾತಕ್ಕೀಡಾಗುತ್ತಿದ್ದ ವಿಮಾನದಿಂದ ಪೈಲೆಟ್​ ಒಬ್ಬರು ಜಿಗಿದು ಪ್ರಾಣ ಉಳಿಸಿಕೊಂಡಿರುವ ವಿಡಿಯೋ ಒಂದು ವೈರಲ್​ ಆಗಿದೆ. ಪೈಲೆಟ್​ ಧರಿಸಿದ್ದ ಹೆಲ್ಮೆಟ್​ನಲ್ಲಿದ್ದ ಕ್ಯಾಮೆರಾದಲ್ಲಿ ಈ ಭಯಾನಕ ಘಟನೆ ಸೆರೆಯಾಗಿದೆ.

ರಷ್ಯಾದ ಫೈಟರ್ ಪೈಲೆಟ್​ ಈ ರೀತಿ ಜೀವ ಉಳಿಸಿಕೊಂಡಿದ್ದಾರೆ. ಅವರು ಚಲಾಯಿಸುತ್ತಿದ್ದ ಸುಖೋಯ್ -25 ಎಂಜಿನ್​ ಹಾಳಾಗಿ ವಿಮಾನವು ಇನ್ನೇನು ಪತನವಾಗಲಿದೆ ಎಂದಾಗ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಹಾನಿಗೊಳಗಾದ ಸುಖೋಯ್-25 ತೆರೆದ ಭೂಪ್ರದೇಶದ ಮೇಲೆ ಹಾರಾಟ ನಡೆಸುವುದು ಕಷ್ಟ ಎಂದು ತಿಳಿದಾಗ ಪರಿಸ್ಥಿತಿಯನ್ನು ನಿಭಾಯಿಸಲು ಅವರು ಹೊರಕ್ಕೆ ಹಾರಿದ್ದಾರೆ.

ಪೈಲೆಟ್​ ಇಲ್ಲದ ವಿಮಾನ ಸುಮಾರು ಒಂದು ಕಿಲೋಮೀಟರ್ ದೂರ ಹಾರಿ ನಂತರ ಹಸಿರು ಮೈದಾನವೊಂದಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಈ ತುಣುಕನ್ನು ಯೂಟ್ಯೂಬ್‌ನಲ್ಲಿ ವಾರ್‌ಲೀಕ್ಸ್ ಎಂಬ ಮಿಲಿಟರಿ ಸಾಕ್ಷ್ಯಚಿತ್ರ ಚಾನೆಲ್ ಪ್ರಕಟಿಸಿದೆ. ನಂಬಲಸಾಧ್ಯ ರೀತಿಯಲ್ಲಿ ಪೈಲೆಟ್​ ಜೀವ ಉಳಿಸಿಕೊಂಡಿರುವುದಾಗಿ ಇದರಲ್ಲಿ ವಿವರಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...