alex Certify ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೇದಿಕೆ ಮೇಲೆ ನರ್ತಿಸುತ್ತಾ ಗಾಳಿಯಲ್ಲಿ ತೇಲಾಡಿದ ನರ್ತಕಿಯರು: ಕುತೂಹಲದ ನೃತ್ಯವಿದು

ನೃತ್ಯದಲ್ಲಿ ಎಷ್ಟೊಂದು ಬಗೆಗಳಿವೆ. ಇದರ ಹೊರತಾಗಿಯೂ ಅಸಾಮಾನ್ಯ ಎನ್ನುವ ನೃತ್ಯ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನೃತ್ಯ ಇದೀಗ ವೈರಲ್​ ಆಗಿದೆ.

ಮಹಿಳೆಯರು ವೇದಿಕೆಯ ಮೇಲೆ ಗಾಳಿಯಲ್ಲಿ ತೇಲುವಂತೆ ನೃತ್ಯ ಮಾಡಿದ್ದು, ಬಹಳ ಕುತೂಹಲ ಮೂಡಿಸಿದೆ. ಗೊಂಬೆಗಳಂತೆ ನಿಂತಿರುವ ಮಹಿಳೆಯರು ವೇದಿಕೆ ಮೇಲೆ ಗಾಳಿಯಲ್ಲಿ ತೇಲಿದಂತೆ ನರ್ತಿಸುತ್ತಿದ್ದಾರೆ. ಇದರ ವಿಡಿಯೋ ವೈರಲ್​ ಆಗಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದು ಬಂದಿದೆ.

ಬೆರೆಜ್ಕಾ ಡ್ಯಾನ್ಸ್ ಎನ್ಸೆಂಬಲ್ ಎಂದು ಕರೆಯಲ್ಪಡುವ ಮಹಿಳಾ ನೃತ್ಯ ಗುಂಪಿನ ಪ್ರದರ್ಶನ ಇದಾಗಿದೆ. ಇದು ರಷ್ಯಾದಲ್ಲಿ ನಡೆದಿದ್ದು, ಎಲ್ಲರೂ ರಷಿಯನ್​ ನರ್ತಕಿಯರು. ಈ ಕಲಾ ಪ್ರಕಾರವನ್ನು ಪ್ರದರ್ಶಿಸುವಾಗ, ಮಹಿಳೆಯರು ತುಂಬಾ ಚಿಕ್ಕ ಹೆಜ್ಜೆಗಳನ್ನು ಇಡುತ್ತಾರೆ, ಇದು ಗಾಳಿಯಲ್ಲಿ ತೇಲುತ್ತಿರುವಂತೆ ಭ್ರಮೆಯನ್ನು ಉಂಟುಮಾಡುತ್ತದೆ.

ಇದು ನೃತ್ಯ ಸಂಯೋಜಕ ನಾಡೆಝ್ಡಾ ನಡೆಝ್ಡಿನಾ ಅವರ ಕಲ್ಪನೆಯ ಕೂಸು. ವೇದಿಕೆ ಮೇಲೆ ಮಾಡಿರುವ ಈ ನೃತ್ಯವನ್ನು “ತೇಲುವ ಹೆಜ್ಜೆ” ಎಂದು ಕರೆಯಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...