alex Certify ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುರುವಾಗುತ್ತಾ 3ನೇ ಮಹಾಯುದ್ಧ; ಉಕ್ರೇನ್ ಗಡಿ ಬಳಿ ಮತ್ತಷ್ಟು ಪಡೆಗಳನ್ನು ನಿಯೋಜಿಸಿ ಆತಂಕ ಹೆಚ್ಚಿಸಿದ ರಷ್ಯಾ

Russia continues to add troops near Ukraine border as West imposes sanctions | Satellite pics - World News

ಯುಎಸ್, ಯುರೋಪಿಯನ್ ಯೂನಿಯನ್ ದೇಶಗಳು ಮತ್ತು ಬ್ರಿಟನ್ ರಷ್ಯಾದ ಮೇಲೆ ನಿರ್ಬಂಧಗಳನ್ನು ಘೋಷಿಸಿದ ಮೇಲೆ ಮತ್ತಷ್ಟು ಆಕ್ರೋಶಗೊಂಡಿರುವ ರಷ್ಯಾ, ಉಕ್ರೇನ್ ಗಡಿ‌ ಬಳಿ ಮತ್ತಷ್ಟು ಸೇನಾಪಡೆಯನ್ನು ಜಮಾವಣೆ ಮಾಡಿದೆ.‌ ರಷ್ಯಾದ ಪಡೆಗಳ ಹಲವಾರು ಘಟಕಗಳು ಮಂಗಳವಾರ ಬೆಲಾರಸ್ ಮತ್ತು ಪಶ್ಚಿಮ ರಷ್ಯಾದಲ್ಲಿ ಉಕ್ರೇನ್ ಗಡಿಯ ಸಮೀಪ ಹೊಸ ಮೈದಾನಗಳನ್ನು ಆಕ್ರಮಿಸಿಕೊಂಡಿವೆ.

ಕೆಲವು ಸ್ಥಳಗಳಲ್ಲಿ ಹೊಸ ಪಡೆಗಳ ನಿಯೋಜನೆ ಕಂಡುಬಂದರೆ, ಕೆಲವು ಸ್ಥಳಗಳಲ್ಲಿ ಹೊಸ ಪಡೆಗಳ ಆಗಮನದ ಸಿದ್ಧತೆಗಳು ಸಹ ನಡೆಯುತ್ತಿವೆ ಎಂದು ದೃಶ್ಯ ಸಾಕ್ಷ್ಯಗಳಿಂದ ತಿಳಿದುಬಂದಿದೆ‌.‌‌ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ಮ್ಯಾಕ್ಸರ್ ಟೆಕ್ನಾಲಜೀಸ್ ಒದಗಿಸಿದ ಇತ್ತೀಚಿನ ಉಪಗ್ರಹ ಚಿತ್ರಗಳಲ್ಲಿ, ಕಳೆದ 24 ಗಂಟೆಗಳಲ್ಲಿ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಲಾಜಿಸ್ಟಿಕ್ಸ್ ಮತ್ತು ಸರಬರಾಜುಗಳ ಹೊಸ ಸ್ಥಾನಗಳು ಮತ್ತು ಚಲನೆಯನ್ನು ತೋರಿಸುತ್ತವೆ.

ಗಮನಿಸಿ: ಕೇಂದ್ರ ಸರ್ಕಾರದ ಯೋಜನೆಯಡಿ ಈ ಮಕ್ಕಳಿಗೆ ಸಿಗಲಿದೆ 10 ಲಕ್ಷ ರೂಪಾಯಿ

ಇನ್ನು ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಲಾಗಿದ್ದು, ಉಕ್ರೇನ್ ಗಡಿ ಬಳಿ 100 ಕ್ಕೂ ಹೆಚ್ಚು ವಾಹನಗಳು ಮತ್ತು ದಕ್ಷಿಣ ಬೆಲಾರಸ್‌ನ ಮೊಝೈರ್ ಬಳಿಯ ಸಣ್ಣ ಏರ್‌ಫೀಲ್ಡ್‌ನಲ್ಲಿ ಡಜನ್‌ಗಟ್ಟಲೆ ಸೈನಿಕರ ಟೆಂಟ್‌ಗಳನ್ನು ನಿರ್ಮಿಸಲಾಗಿದೆ. ಉಕ್ರೇನ್ ಗಡಿಯಿಂದ ಏರ್‌ಫೀಲ್ಡ್ 40 ಕಿಲೋಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ.

ಪಶ್ಚಿಮ ರಷ್ಯಾದಲ್ಲಿ ಪೊಚೆಪ್ ಬಳಿ ಹೆಚ್ಚುವರಿ ನಿಯೋಜನೆಗಾಗಿ ದೊಡ್ಡ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ. ಬೆಲ್ಗೊರೊಡ್‌ನ ಪಶ್ಚಿಮ ಹೊರವಲಯದಲ್ಲಿರುವ ಮಿಲಿಟರಿ ಗ್ಯಾರಿಸನ್‌ನಲ್ಲಿ ಹೊಸ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ. ಉಕ್ರೇನ್ ಗಡಿಯಿಂದ 20 ಕಿಲೋಮೀಟರ್‌ಗಿಂತ ಕಡಿಮೆ ದೂರದಲ್ಲಿರುವ ಬೆಲ್ಗೊರೊಡ್‌ನ ನೈಋತ್ಯದ ಗ್ರಾಮೀಣ ಪ್ರದೇಶಗಳಲ್ಲಿ ಸೇನಾಪಡೆಗಳು ಮತ್ತು ಯದ್ಧೋಪಕರಣಗಳನ್ನು ನಿಯೋಜಿಸಲಾಗಿದೆ.

ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ದೊಡ್ಡ ಯುದ್ಧೋಪಕರಣಗಳನ್ನು ಸಾಗಿಸಲು ಬಳಸಲಾಗುವ ದೊಡ್ಡ ಸಲಕರಣೆ ಟ್ರಾನ್ಸ್‌ಪೋರ್ಟರ್‌ (ಎಚ್‌ಇಟಿಗಳು) ಉಕ್ರೇನ್‌ನ ಗಡಿಯ ಪೂರ್ವಕ್ಕೆ ಸುಮಾರು 40 ಕಿಲೋಮೀಟರ್ ದೂರದಲ್ಲಿ ಕಂಡುಬಂದಿವೆ.

ಇತ್ತೀಚೆಗೆ ರಷ್ಯಾ, ಉಕ್ರೇನ್‌ ಗಡಿಯ ಬಳಿ 1,50,000 ಕ್ಕೂ ಹೆಚ್ಚು ಸೈನಿಕರ ಜಮಾವಣೆ ಮಾಡಿದೆ ಎಂದು ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಅಂದಾಜಿಸಿದ್ದು, ಅಮೆರಿಕದ ಪ್ರತಿದಾಳಿಯು ಸನ್ನಿಹಿತವಾಗಿದೆ ಎಂದು ಎಚ್ಚರಿಸಿದೆ. ಇತ್ತ ಇದಕ್ಕೆ ಪ್ರತಿಯಾಗಿ, ಅಮೆರಿಕ ತನ್ನ ಸೈನ್ಯವನ್ನು ಪೂರ್ವ ಯುರೋಪಿನ ನ್ಯಾಟೋ ಸದಸ್ಯ ರಾಷ್ಟ್ರಗಳಿಗೆ ಕಳುಹಿಸುತ್ತಿದೆ. ಇದರ ನಡುವೆ ಪಾಶ್ಚಿಮಾತ್ಯ ದೇಶಗಳು ರಷ್ಯಾದ ಮೇಲೆ ಹಲವು ನಿರ್ಬಂದಗಳನ್ನು ಏರಿದ ಮೇಲೆ ಗಡಿ ಭಾಗದಲ್ಲಿ ಹೆಚ್ಚು ಸಕ್ರಿಯತೆ ಕಂಡು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...