alex Certify ಆತಂಕಕಾರಿ ವಿಚಾರ; ಖಾಲಿಯಾಗುತ್ತಿದೆ ಅತಿದೊಡ್ಡ ಜಲಾಶಯ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತಂಕಕಾರಿ ವಿಚಾರ; ಖಾಲಿಯಾಗುತ್ತಿದೆ ಅತಿದೊಡ್ಡ ಜಲಾಶಯ…..!

ಹವಾಮಾನ ಬಿಕ್ಕಟ್ಟು ಬೇರೆ ಬೇರೆ ರೀತಿಯಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿದೆ. ಅದು ಅರಿವಿಗೆ ಬರುವಷ್ಟರಲ್ಲಿ ಕೈಮೀರಿರುತ್ತದೆ. ನ್ಯಾಶನಲ್​ ಏರೋನಾಟಿಕ್ಸ್​ ಮತ್ತು ಸ್ಪೇಸ್​ ಅಡ್ಮಿನಿಸ್ಟ್ರೇಷನ್​ (ನಾಸಾ) ಹೊಸದಾಗಿ ಬಿಡುಗಡೆ ಮಾಡಿದ ಫೋಟೋಗಳು ಹವಾಮಾನ ಬಿಕ್ಕಟ್ಟು ಹೇಗೆ ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದೆ ಎಂಬುದರ ಕಠೋರ ಎಚ್ಚರಿಕೆಯಾಗಿದೆ ಎಂಬುದನ್ನು ನೆನಪಿಸುವಂತಿದೆ.

ನಾಸಾದ ಉಪಗ್ರಹ ಚಿತ್ರಗಳು ಅಮೆರಿಕಾದ ಅತಿದೊಡ್ಡ ಜಲಾಶಯವಾದ ಹೂವರ್​ ಅಣೆಕಟ್ಟಿನಲ್ಲಿರುವ ಲೇಕ್​ ಮೀಡ್​ ಕಳೆದ ಎರಡು ದಶಕಗಳಲ್ಲಿ ಎಷ್ಟು ಕುಗ್ಗಿದೆ ಎಂಬುದನ್ನು ತೋರಿಸುತ್ತದೆ. ಫೋಟೋಗಳು ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಚಿತ್ರಗಳಾಗಿದ್ದು, 2000 ರಿಂದ ಹೇಗೆ ಗಾತ್ರದಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂಬುದನ್ನು ತೋರಿಸಿದೆ.

ನಾಸಾ ಪ್ರಕಾರ 22 ವರ್ಷಗಳಲ್ಲಿ ಈಗ ಲೇಕ್​ ಮೀಡ್​ನಲ್ಲಿ ನೀರಿನ ಮಟ್ಟವು ಅತ್ಯಂತ ಕಡಿಮೆ ಏಪ್ರಿಲ್​ ಜುಲೈ 18, 2022ರ ವೇಳೆಗೆ “ಲೇಕ್​ ಮೀಡ್​ ಒಟ್ಟು ಸಾಮರ್ಥ್ಯದ ಕೇವಲ 27 ಪ್ರತಿಶತದಷ್ಟು ಮಾತ್ರ ತುಂಬಿದೆ.

ಇದೀಗ ಬಿಡುಗಡೆ ಮಾಡಿದ ಚಿತ್ರಗಳನ್ನು ಜುಲೈ 6, 2000 ಮತ್ತು ಜುಲೈ 3, 2022 ರಂದು ಲ್ಯಾಂಡ್​ಸ್ಯಾಟ್​ 7 ಮತ್ತು ಲ್ಯಾಂಡ್​ಸ್ಯಾಟ್​ 8ರಿಂದ ಪಡೆದುಕೊಳ್ಳಲಾಗಿದೆ. ( https://earthobservatory.nasa.gov/images/150111/lake-mead-keeps-dropping )

ದೇಶದ ಅತಿದೊಡ್ಡ ನೀರಿನ ಜಲಾಶಯವಾಗಿರುವುದರಿಂದ, ಲೇಕ್​ ಮೀಡ್​ ಏಳು ರಾಜ್ಯಗಳು, ಬುಡಕಟ್ಟು ಪ್ರದೇಶಗಳು ಮತ್ತು ಉತ್ತರ ಮೆಕ್ಸಿಕೋದಾದ್ಯಂತ ಜನರಿಗೆ ನೀರನ್ನು ಪೂರೈಸುತ್ತದೆ. ಈ ನಡುವೆ ನೀರಿನ ಮಟ್ಟವು ಅಪಾಯಕಾರಿ ಸಾಮರ್ಥ್ಯಕ್ಕೆ ಇಳಿಯುವುದರಿಂದ ಹವಾಮಾನ ಬದಲಾವಣೆಯ ಎಚ್ಚರಿಕೆ ಮತ್ತು ದೀರ್ಘ ಬರಗಾಲ ಬರುವ ಮುನ್ಸೂಚನೆ ಎಂದು ಅಂದಾಜಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...