alex Certify ಈ ಗಿಳಿ ಹುಡುಕಿಕೊಟ್ಟವರಿಗೆ ಸಿಗುತ್ತೆ 50 ಸಾವಿರ ರೂ. ಬಹುಮಾನ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಗಿಳಿ ಹುಡುಕಿಕೊಟ್ಟವರಿಗೆ ಸಿಗುತ್ತೆ 50 ಸಾವಿರ ರೂ. ಬಹುಮಾನ !

ಗಿಳಿಯೊಂದು ನಾಪತ್ತೆಯಾಗಿದ್ದು, ಅದರ ಪೋಷಕರು ಈಗ ಕಂಗಾಲಾಗಿ ಅದರ ಪತ್ತೆಗೆ ಹರಸಾಹಸ ಪಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ಆಫ್ರಿಕನ್​ ಗಿಳಿಗಳಾದ ರಿಯೊ ಮತ್ತು ರುಸ್ತುಮಾ ತುಮಕೂರಿನಲ್ಲಿ ನೆಲೆ ಕಂಡುಕೊಂಡವು. ಅರ್ಜುನ್​ ಎಂಬುವರು ಗಿಳಿಗಳನ್ನು ಕುಟುಂಬದ ಭಾಗದಂತೆ ನೋಡಿಕೊಂಡಿದ್ದರು.

ಆದರೆ, ಮೂರು ದಿನಗಳ ಹಿಂದೆ ರುಸ್ತುಮಾ ನಾಪತ್ತೆಯಾಗಿದ್ದು, ರಿಯೊ, ರುಸ್ತುಮಾ ಬರುವಿಕೆಗಾಗಿ ಕಿಟಕಿಯ ಅಂಚಲ್ಲಿ ಕಾಯುತ್ತಾ ಕುಳಿತಿದೆ. ಗಿಳಿಯನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ. ರೂಪಾಯಿ ಬಹುಮಾನ ನೀಡುವುದಾಗಿ ಅರ್ಜುನ್​ ಘೋಷಿಸಿದ್ದಾರೆ. ಪಟ್ಟಣದಾದ್ಯಂತ ಗಿಳಿಯ ಭಾವಚಿತ್ರವಿರುವ ಪೋಸ್ಟರ್​ಗಳನ್ನು ಹಾಕಲಾಗಿದ್ದು, ಗಿಳಿಗಾಗಿ ಬೀದಿ ಬೀದಿ ಅಲೆದಿದ್ದಾರೆ.

ನಮ್ಮ ನೆಚ್ಚಿನ ಕುಟುಂಬದ ಸದಸ್ಯರಲ್ಲಿ ಒಬ್ಬರಾದ ಬೂದು ಬಣ್ಣದ ಗಿಳಿ 16/7/2022 ರಿಂದ ತುಮಕೂರಿನ ಜಯನಗರದಿಂದ ಕಾಣೆಯಾಗಿದೆ. ಯಾರಾದರೂ ನಮ್ಮ ಪ್ರೀತಿಯ ಗಿಳಿಯನ್ನು ಕಂಡುಕೊಂಡರೆ, ದಯವಿಟ್ಟು ನಮ್ಮನ್ನು ಸಂಪಕಿರ್ಸಿ ಮತ್ತು ನಿಮಗೆ 50,000 ರೂಪಾಯಿ ಬಹುಮಾನವಾಗಿ ನೀಡಲಾಗುವುದು ಎಂದು ಪೋಸ್ಟರ್​ ಅಂಟಿಸಲಾಗಿದೆ.

ನಮ್ಮ ಸ್ಥಳದ ಸುತ್ತ ಎಲ್ಲೋ ಇದೆ. ಎಲ್ಲಿಯೂ ದೂರ ಹೋಗುತ್ತಿರಲಿಲ್ಲ. ಗಿಣಿಯನ್ನು ಹುಡುಕಲು ನಾವು ವಿನಂತಿಸುತ್ತೇವೆ. ಇದು ನಿಮ್ಮ ಟೆರೇಸ್​, ಮರದ ಮೇಲೆ ಕಂಡುಬಂದರೆ, ಹಾರುತ್ತಿರುವುದನ್ನು ಗಮನಿಸಿದರೆ, ನಮಗೆ ತಿಳಿಸಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, ನಾವು ಆ ಗಿಣಿಗೆ ಹೊಂದಿಕೊಂಡಿದ್ದೇವೆ. ನೋವು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

— Rohini Swamy (@Rohini_Swamy) July 19, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...