alex Certify ಮರದ ಮೇಲಿಂದ ಹಣ ಎಸೆದ ಮಂಗ..! ಮುಗಿಬಿದ್ದು ಆಯ್ದುಕೊಂಡ ಜನ..!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರದ ಮೇಲಿಂದ ಹಣ ಎಸೆದ ಮಂಗ..! ಮುಗಿಬಿದ್ದು ಆಯ್ದುಕೊಂಡ ಜನ..!!

ಉತ್ತರಪ್ರದೇಶದ ಸೀತಾಪುರದಲ್ಲಿ ಮಂಗವೊಂದು 4 ಲಕ್ಷ ರೂಪಾಯಿ ಹಣದ ಬ್ಯಾಗ್ ಎತ್ತಿಕೊಂಡು ಮರವೇರಿದೆ. ಮರವೇರಿದ ನಂತರ ಹಣ ಎಸೆದ ಪರಿಣಾಮ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

ಸೀತಾಪುರದ ಸಬ್ ರಿಜಿಸ್ಟ್ರಾರ್ ಕಚೇರಿ ಹೊರಗೆ ಘಟನೆ ನಡೆದಿದೆ. ವೃದ್ಧರೊಬ್ಬರ ಕೈಯಲ್ಲಿದ್ದ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಮಂಗ ಮರವೇರಿದೆ. ಬಳಿಕ ಅದರಲ್ಲಿದ್ದ ನೋಟುಗಳನ್ನು ತೆಗೆದು ಕೆಳಗೆ ಎಸೆದಿದೆ. ಇದರಿಂದಾಗಿ ಅಲ್ಲಿದ್ದವರು ಮುಗಿಬಿದ್ದು ನೋಟು ಆರಿಸಿಕೊಂಡಿದ್ದಾರೆ. ಕೆಲ ಸಮಯದ ನಂತರ ಬ್ಯಾಗ್ ಕೆಳಗೆ ಬಿದ್ದಿದ್ದು, ಅದನ್ನು ವೃದ್ಧರಿಗೆ ತಲುಪಿಸಲಾಗಿದೆ. ಅಲ್ಪಸ್ವಲ್ಪ ಹಣ ಜನರ ಜೇಬು ಸೇರಿದೆ. ಸೀತಾಪುರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...