alex Certify ಈ ಕಟ್ಟಡದಿಂದ ನಟ ಸಲ್ಮಾನ್‌ ಗೆ ಪ್ರತಿ ತಿಂಗಳು ಸಿಗುತ್ತೆ ಕೋಟಿ ರೂಪಾಯಿ ಬಾಡಿಗೆ​ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಟ್ಟಡದಿಂದ ನಟ ಸಲ್ಮಾನ್‌ ಗೆ ಪ್ರತಿ ತಿಂಗಳು ಸಿಗುತ್ತೆ ಕೋಟಿ ರೂಪಾಯಿ ಬಾಡಿಗೆ​ !

ಬಾಲಿವುಡ್​ ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪೈಕಿ ಸಲ್ಮಾನ್​ ಖಾನ್​ ಕೂಡ ಒಬ್ಬರು. ನಟನೆಯ ಜೊತೆಯಲ್ಲಿ ನಿರೂಪಣೆ ಮಾಡುವ ಮೂಲಕವೂ ಸಲ್ಮಾನ್​ ಖಾನ್​ ಕೋಟ್ಯಂತರ ಹಣ ಸಂಪಾದನೆ ಮಾಡ್ತಾರೆ.

ಮುಂಬೈನ ಐಷಾರಾಮಿ ಬಡಾವಣೆಗಳ ಪೈಕಿ ಒಂದಾದ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್​ಮೆಂಟ್​ನಲ್ಲಿ ಸಲ್ಮಾನ್​ ಖಾನ್​ ನೆಲೆಸಿದ್ದಾರೆ ಎಂಬುದು ಎಲ್ರಿಗೂ ತಿಳಿದಿರೋ ವಿಚಾರ, ನಟ ಸಲ್ಮಾನ್​ ಖಾನ್​ ಸಾಂತಾಕ್ರೂಸ್​ನಲ್ಲಿರುವ ತಮ್ಮ ಕಮರ್ಷಿಯಲ್​ ಪ್ರಾಪರ್ಟಿಯನ್ನು ಮುಂದಿನ ಐದು ವರ್ಷಗಳಿಗೆ ಬಾಡಿಗೆ ನೀಡಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಸಲ್ಮಾನ್​ ಖಾನ್​ 1 ಕೋಟಿ ರೂಪಾಯಿ, ಬಾಡಿಗೆ ಹಣದ ರೂಪದಲ್ಲಿ ಪಡೆಯಲಿದ್ದಾರೆ.

ಮುಂದಿನ 60 ತಿಂಗಳುಗಳಿಗೆ ಸಾಂತಾಕ್ರಾಸ್​ನಲ್ಲಿರುವ ತಮ್ಮ ವಾಣಿಜ್ಯ ಆಸ್ತಿಯನ್ನು ಸಲ್ಮಾನ್​ ಖಾನ್​ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಆಗಸ್ಟ್​ ತಿಂಗಳಲ್ಲಿ ಈ ಅಗ್ರಿಮಂಟ್​ ಆರಂಭಗೊಂಡಿದೆ.

2140 .71 ಚದರ ಮೀಟರ್​ ಆಸ್ತಿಯನ್ನು ಸಲ್ಮಾನ್​ ಖಾನ್​ ಲ್ಯಾಂಡ್​ಕ್ರಾಫ್ಟ್​ ಪ್ರೈವೇಟ್​​ ಲಿಮಿಟೆಡ್​ಗೆ ಬಾಡಿಗೆ ರೂಪದಲ್ಲಿ ನೀಡಿದ್ದಾರೆ. ಈ ಜಾಗವನ್ನು ಬಾಡಿಗೆಗೆ ಪಡೆಯಲು ಈ ಕಂಪನಿಯು 5 .4 ಕೋಟಿ ರೂಪಾಯಿ ಡೆಪಾಸಿಟ್​ ನೀಡಿದೆ.

ಇನ್ನೊಂದು ಕುತೂಹಲಕಾರಿ ವಿಚಾರ ಏನಂದ್ರೆ, ಮೊದಲ ವರ್ಷ ಸಲ್ಮಾನ್​ ಖಾನ್​ರಿಗೆ 90 ಲಕ್ಷ ರೂಪಾಯಿ ಬಾಡಿಗೆ ರೂಪದಲ್ಲಿ ಹಣ ಸಿಗಲಿದೆ. ಎರಡನೇ ವರ್ಷದಿಂದ ಸಲ್ಮಾನ್​ ಖಾನ್​ರಿಗೆ ಪ್ರತಿ ತಿಂಗಳು 1 ಕೋಟಿ ರೂಪಾಯಿ ಸಿಗಲಿದೆ. ಪ್ರತಿ ವರ್ಷ ಐದು ಲಕ್ಷ ಬಾಡಿಗೆ ಮೊತ್ತ ಹೆಚ್ಚಲಿದೆ ಎಂದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...