alex Certify ಆರ್‌ಆರ್‌ಆರ್ ಟ್ವಿಟ್ಟರ್ ವಿಮರ್ಶೆ: “ಮಾಸ್ಟರ್ ಪೀಸ್” ಎಂದ ನೆಟಿಜನ್‌, ‘ಬಾಹುಬಲಿ’ಗಿಂತಲೂ ಬೆಸ್ಟಂತೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರ್‌ಆರ್‌ಆರ್ ಟ್ವಿಟ್ಟರ್ ವಿಮರ್ಶೆ: “ಮಾಸ್ಟರ್ ಪೀಸ್” ಎಂದ ನೆಟಿಜನ್‌, ‘ಬಾಹುಬಲಿ’ಗಿಂತಲೂ ಬೆಸ್ಟಂತೆ….!

ಎಸ್‌.ಎಸ್ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಲನಚಿತ್ರ ‘ಆರ್‌ಆರ್‌ಆರ್’ ಶುಕ್ರವಾರ ಬೆಳ್ಳಿತೆರೆ ಮೇಲೆ ಅಪ್ಪಳಿಸಿದ್ದು, ಚಿತ್ರ ನೋಡಿ ಬಂದವರು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

ನಟರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ, ಕೋವಿಡ್ ಸೇರಿ ವಿವಿಧ ಕಾರಣಗಳಿಂದ ಬಿಡುಗಡೆ ವಿಳಂಬಗೊಂಡು ನಂತರ ಅಂತಿಮವಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬಾಲಿವುಡ್ ನಟರಾದ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಕೂಡ ನಟಿಸಿದ್ದಾರೆ.

ಮನೆ ಮುಂದೆ ನಿರ್ಮಾಣವಾಗಿದೆ ದೈತ್ಯ ಕನ್ನಡಿ…!

ಏತನ್ಮಧ್ಯೆ, ಟ್ವಿಟರ್‌ನಲ್ಲಿ ಆರ್‌ಆರ್‌ಆರ್ ಕುರಿತು ಆರಂಭಿಕ ವಿಮರ್ಶೆಗಳು ಅಬ್ಬರಿಸಿದೆ. ಗುರುವಾರ, ಸಿನಿಪ್ರಿಯರ ಒಂದು ವರ್ಗ ಚಿತ್ರದ ಪ್ರೀಮಿಯರ್ ಅನ್ನು ನೋಡಿ ಆನಂದಿಸಿದೆ ತಮ್ಮ ಅಭಿಪ್ರಾಯವನ್ನು ಮೈಕ್ರೋ ಬ್ಲಾಗಿಂಗ್‌ನಲ್ಲಿ ಹಂಚಿಕೊಂಡಿದೆ.

ನೆಟ್ಟಿಗರು ಈ ಚಿತ್ರವನ್ನು ‘ಮಾಸ್ಟರ್ ಪೀಸ್’ ಎಂದು ಕೊಂಡಾಡಿದ್ದಾರೆ. ರಾಜಮೌಳಿ ಅವರ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ‘ಬಾಹುಬಲಿ’ಗಿಂತ ಈ ಚಿತ್ರ ಬೆಸ್ಟ್ ಎಂದು ಕೆಲವರು ವರ್ಣಿಸಿದ್ದಾರೆ.

ಟಾಲಿವುಡ್‌ನಲ್ಲಿ ಇದುವರೆಗಿನ ಅತ್ಯುತ್ತಮ ಚಲನಚಿತ್ರಗಳಲ್ಲಿ ಇದು ಮಾಸ್ಟರ್‌ಪೀಸ್. ಕಠಿಣ ಪರಿಶ್ರಮಕ್ಕಾಗಿ ಇಡೀ ತಂಡಕ್ಕೆ ಅಭಿನಂದನೆಗಳು. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರೂ ಚಲನಚಿತ್ರದಲ್ಲಿ ದೊಡ್ಡ ಪ್ರಭಾವವನ್ನು ಸೃಷ್ಟಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಒಬ್ಬರು ಬರೆದುಕೊಂಡಿದ್ದಾರೆ.

“ಮೈಂಡ್ ಬ್ಲೋಯಿಂಗ್” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. 5/5 ನಾನು ಹಿಂದಿ ಪ್ರೀಮಿಯರ್ ನೋಡಿದೆ. ಓ‌ಮೈಗಾಡ್ ಬಾಹುಬಲಿಗಿಂತ 10 ಪಟ್ಟು ಉತ್ತಮವಾಗಿದೆ ಎಂದು ಮಗದೊಬ್ಬರು ಟ್ವೀಟ್ ಮಾಡಿದ್ದಾರೆ.

ನೀವು ನೋಡಿ ಬನ್ನಿ, ನಿಮ್ಮದೂ ಒಂದು ಅಭಿಪ್ರಾಯ ಕೊಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...