alex Certify ಮನೆ ಮುಂದೆ ನಿರ್ಮಾಣವಾಗಿದೆ ದೈತ್ಯ ಕನ್ನಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಮುಂದೆ ನಿರ್ಮಾಣವಾಗಿದೆ ದೈತ್ಯ ಕನ್ನಡಿ…!

ಲಂಡನ್: ಮನೆಯೊಂದರ ಮುಂಭಾಗದಲ್ಲಿ ದೈತ್ಯ ಕನ್ನಡಿ ಇರುವ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಈ ಫೋಟೋವನ್ನು ನೋಡಿದ ಬಹುತೇಕರು ಇದು ಲಂಡನ್​​ನ ಅದೃಶ್ಯದ ಮನೆ ಎಂದು ಕರೆಯುತ್ತಿದ್ದಾರೆ. 2019ರಿಂದ ಈ ಮನೆಯಲ್ಲಿ ಕುಟುಂಬವೊಂದು ವಾಸವಿದೆ. ತಾನು ಈ ಮನೆಯ ಮುಂದೆ ಅನೇಕ ಬಾರಿ ಪ್ರಯಾಣಿಸಿದ್ದೇನೆ. ಕಳೆದ 10 ವರ್ಷಗಳಿಂದ ಈ ಪ್ರದೇಶದಲ್ಲಿ ವಾಸವಿದ್ದೆ. ಆದರೆ, ಇಲ್ಲೊಂದು ಮನೆ ಇದೆ ಎಂಬುದು ಗೊತ್ತಿರಲಿಲ್ಲ ಅಂತಾ ರೆಡಿಟ್​ ಬಳಕೆದಾರರು ಹೇಳಿದ್ದಾರೆ.

ಈ ಅದೃಶ್ಯದ ಮನೆಯನ್ನು ವಾಸ್ತುಶಿಲ್ಪಿ ಮತ್ತು ಕಲಾವಿದ ಅಲೆಕ್ಸ್ ಹಾವ್ ಅವರು 2015 ರಲ್ಲಿ ಮರುವಿನ್ಯಾಸಗೊಳಿಸಿದ್ದಾರೆ. ಕುಟುಂಬವು 2019 ರ ಕೊನೆಯಲ್ಲಿ ಈ ಮನೆಗೆ ಸ್ಥಳಾಂತರಗೊಂಡಿದೆ. ಮನೆಯ ಹಿಂಭಾಗವು ಮೂಲ ವಿಕ್ಟೋರಿಯನ್ ಕೋಚ್ ಹೌಸ್ ಆರ್ಕಿಟೆಕ್ಚರ್ ಅನ್ನು ಉಳಿಸಿಕೊಂಡಿದೆ.

ಬೃಹತ್ ಕನ್ನಡಿಯ ಮುಂದೆ ಹಲವಾರು ಮಂದಿ ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸಿದ್ದಾರೆ. ಒಂದು ವೇಳೆ ಮನೆಯೊಳಗಿಂದ ಮಾಲೀಕರು ನೋಡಿಬಿಟ್ರೆ ಅನ್ನೋ ಭಯ ಅವರನ್ನು ಕಾಡಿದೆ. ಅಲ್ಲದೆ, ಕೆಲವರು ತಮ್ಮ ತಲೆಗೂದಲನ್ನು ಸರಿಪಡಿಸಿಕೊಳ್ಳೋದು ಮುಂತಾದವುಗಳು ಮಾಡೋದನ್ನು ಮನೆ ಮಾಲೀಕರು ನೋಡಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...