alex Certify ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ʼಹಂಟರ್ 350ʼ ಫೋಟೋ ಲೀಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಡುಗಡೆಗೂ ಮುನ್ನವೇ ರಾಯಲ್ ಎನ್‌ಫೀಲ್ಡ್ ʼಹಂಟರ್ 350ʼ ಫೋಟೋ ಲೀಕ್

ಹೊಸ 350 ಸಿಸಿ ಬೈಕ್‌ ಮೂಲಕ ಮಾರುಕಟ್ಟೆಯಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡಲು ರಾಯಲ್ ಎನ್‌ಫೀಲ್ಡ್ ಸಿದ್ಧತೆಯಲ್ಲಿದೆ. ಹೊಸ ವಾಹನ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಕಂಪನಿಯು ಇನ್ನೂ ವಾಹನದ ಬಗ್ಗೆ ಅಧಿಕೃತವಾಗಿ ಯಾವುದೇ ವಿವರ ಬಹಿರಂಗಪಡಿಸದಿದ್ದರೂ ಇದನ್ನು ರಾಯಲ್ ಎನ್‌ಫೀಲ್ಡ್ ಹಂಟರ್ 350 ಎಂದು ಕರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಪರೀಕ್ಷೆಯ ಸಮಯದಲ್ಲಿ ಹಲವಾರು ಬಾರಿ ಗುರುತಿಸಲಾಗಿದೆ ಮತ್ತು ಈಗ ಬೈಕ್‌ ವೇಲ್ ಮೋಟಾರ್‌ಸೈಕಲ್‌ನ ಉತ್ಪಾದನಾ ಎಡಿಷನ್ ಹೊಸ ಫೋಟೋ ಹಂಚಿಕೊಂಡಿದೆ. ಈ ಚಿತ್ರಗಳೊಂದಿಗೆ ರಾಯಲ್ ಎನ್‌ಫೀಲ್ಡ್ ಬೈಕಿನ ಬಿಡುಗಡೆಯು ಸನ್ನಿಹಿತವಾಗಿದೆ ಎಂದು ತೋರುತ್ತದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ಜೆ- ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ಇದನ್ನು ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ರೂಪದಲ್ಲೂ ಕಾಣಬಹುದು.

ಈ ಹೊಸ ಬೈಕ್ ದುಂಡಾದ ಇಂಡಿಕೇಟರ್ ಮತ್ತು ಹ್ಯಾಲೊಜೆನ್ ಹೆಡ್‌ಲ್ಯಾಂಪ್‌ನೊಂದಿಗೆ ನಿಯೋ- ರೆಟ್ರೊ ವಿನ್ಯಾಸದ ಥೀಮ್ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಬ್ಲ್ಯಾಕ್ಡ್- ಔಟ್ ಥೀಮ್ ಹೊಂದಿದೆ. ಖಂಡಿತವಾಗಿಯೂ ಇದು ಅಗ್ರೆಸಿವ್ ಲುಕ್ ನೀಡುತ್ತದೆ.

ರಾಯಲ್ ಎನ್‌ಫೀಲ್ಡ್ ಹಂಟರ್ 350 ವಿಶೇಷತೆಯ ಫೋಟೋ ಲೀಕ್ ಆಗಿದ್ದು, ಬೈಕ್ ಪ್ರೇಮಿಗಳ ಕುತೂಹಲ‌ ಹೆಚ್ಚುವಂತೆ ಮಾಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...