alex Certify ‘ಡ್ಯಾನ್ಸ್ ದಿವಾನೆ-3’ಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ನಿರ್ದೇಶಕ ರೋಹಿತ್ ಶೆಟ್ಟಿ: ಕಾರಣವೇನು ಗೊತ್ತಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡ್ಯಾನ್ಸ್ ದಿವಾನೆ-3’ಯಲ್ಲಿ ಭಾವುಕರಾಗಿ ಕಣ್ಣೀರಿಟ್ಟ ನಿರ್ದೇಶಕ ರೋಹಿತ್ ಶೆಟ್ಟಿ: ಕಾರಣವೇನು ಗೊತ್ತಾ….?

ವಾರಾಂತ್ಯ ಬಂದಾಗ ಬಹುತೇಕ ಎಲ್ಲಾ ಟಿವಿ ಚಾನೆಲ್ ಗಳಲ್ಲಿಯೂ ರಿಯಾಲಿಟಿ ಶೋಗಳದ್ದೇ ಸದ್ದು ಕಂಡು ಬರುವುದು ಸಾಮಾನ್ಯ. ಬಹುತೇಕ ಮಂದಿ ಕೂಡ ತಮ್ಮ ಸ್ನೇಹಿತರು, ಕುಟುಂಬದೊಂದಿಗೆ ಕೂತು ರಿಯಾಲಿಟಿ ಶೋಗಳನ್ನು ವೀಕ್ಷಿಸುತ್ತಾರೆ.

ಇದರಲ್ಲಿ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ‘ಡ್ಯಾನ್ಸ್ ದಿವಾನೆ-3’ ಕೂಡ ಒಂದು. ಇದರಲ್ಲಿ ಸ್ಪರ್ಧಿಗಳ ಪ್ರದರ್ಶನ ಕಂಡ ರೋಹಿತ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ.

BIG NEWS: ಐವರು ಸಾವಿಗೀಡಾದ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ; ಕಂತೆ ಕಂತೆ ನೋಟು ಪತ್ತೆ…!

ಈ ರಿಯಾಲಿಟಿ ಶೋನಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಸ್ಪರ್ಧಿಗಳ ಸ್ಟಂಟ್ ಪ್ರದರ್ಶನವು ಎಲ್ಲರ ಗಮನ ಸೆಳೆಯಿತು. ಈ ವೇಳೆ ಸ್ಪರ್ಧಿಗಳ ಪ್ರದರ್ಶನ ಕಂಡ ರೋಹಿತ್ ಶೆಟ್ಟಿ ಭಾವುಕರಾಗಿ, ಗಳಗಳನೇ ಅತ್ತಿದ್ದಾರೆ. ರೋಹಿತ್ ಶೆಟ್ಟಿ ತಂದೆ ಎಂ.ಬಿ.ಶೆಟ್ಟಿ ಅವರು ಕೂಡ ಸ್ಟಂಟ್ ಮ್ಯಾನ್ ಆಗಿದ್ದರು. ಈ ಬಗ್ಗೆ ಮಾತನಾಡಿದ ರೋಹಿತ್, “ನಾನು ಇದನ್ನು ಬಾಲ್ಯದಿಂದ ನೋಡುತ್ತಾ ಬೆಳೆದಿದ್ದೇನೆ. ನನ್ನ ತಂದೆ ಕೂಡ ಸ್ಟಂಟ್ ಮಾಡುತ್ತಿದ್ದರು. ಆದರೆ ಈ ಕೆಲಸವನ್ನು ಯಾರೂ ಕೂಡ ಗೌರವಿಸುವುದಿಲ್ಲ” ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...