alex Certify ಕಾರ್‌ ನ ಹಿಂಬದಿ ಪ್ರಯಾಣಿಕರು ಸೀಟ್​ ಬೆಲ್ಟ್​ ಧರಿಸದಿದ್ದರೆ ತೆರಬೇಕಾಗಬಹುದು ದಂಡ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್‌ ನ ಹಿಂಬದಿ ಪ್ರಯಾಣಿಕರು ಸೀಟ್​ ಬೆಲ್ಟ್​ ಧರಿಸದಿದ್ದರೆ ತೆರಬೇಕಾಗಬಹುದು ದಂಡ….!

ಕಾರುಗಳ ಹಿಂಬದಿಯ ಸೀಟಿನಲ್ಲಿ ಕುಳಿತುಕೊಳ್ಳಲು ಹಿಂದಿನ ಸೀಟಿನಲ್ಲಿರುವ ಪ್ರಯಾಣಿಕರು ಸಹ ಸೀಟ್​ ಬೆಲ್ಟ್​ ಧರಿಸದಿದ್ದರೆ ದಂಡ ತೆರಬೇಕಾಗಬಹುದು.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್​ ಗಡ್ಕರಿ ಅವರು ಮಂಗಳವಾರ ಈ ವಿಷಯ ಘೋಷಿಸಿದ್ದು, ಮುಂದಿನ ಮೂರು ದಿನಗಳಲ್ಲಿ ಅಧಿಸೂಚನೆ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ಕಾರಿನ ಹಿಂಭಾಗದಲ್ಲಿ ಸೀಟ್​ ಬೆಲ್ಟ್​ಗಳನ್ನು ಬಳಸುವ ಅಗತ್ಯತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಕ್ರಿಕೆಟಿಗರು ಮತ್ತು ಬಾಲಿವುಡ್​ ನಟರನ್ನು ಸಹ ಬಳಸಿಕೊಳ್ಳಲಿದೆ.

ಸೆೈರಸ್​ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತರಾದ ಬಳಿಕ ಸಚಿವರು ಈ ರೀತಿ ಕಾಮೆಂಟ್​ ನೀಡಿರುವುದು ಮಹತ್ವ ಪಡೆದುಕೊಂಡಿದೆ.

ಭಾನುವಾರ ಮುಂಬೈ- ಅಹಮದಾಬಾದ್​ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ನಿಧನರಾದ ಟಾಟಾ ಸನ್ಸ್​ ಮಾಜಿ ಅಧ್ಯಕ್ಷ ಸೈರಸ್​ ಕಾರಿನ ಹಿಂಭಾಗದಲ್ಲಿದ್ದರು, ಸೀಟ್​ ಬೆಲ್ಟ್​ ಧರಿಸಿರಲಿಲ್ಲ.

ಡ್ರೈವರ್​ ಸೀಟಿಗೆ ಇರುವಂತಹ ಬೆಲ್ಟ್​ ಹಿಂಬದಿ ಸೀಟಿಗೂ ಇರಬೇಕೆಂಬ ಕುರಿತು ಅನುಷ್ಠಾನದ ಬಗ್ಗೆ ಸಚಿವಾಲಯವು ಕೆಲಸ ಮಾಡುತ್ತಿದೆ ಎಂದು ಸಚಿವ ಗಡ್ಕರಿ ಹೇಳಿದ್ದಾರೆ. ಹಾಗೆ ಎಲ್ಲಾ ಪ್ರಯಾಣಿಕರಿಗೆ ಸುರಕ್ಷಿತವಾಗಿಸಲು ಎಲ್ಲಾ ಕಾರುಗಳಲ್ಲಿ ಆರು ಏರ್​ಬ್ಯಾಗ್​ಗಳನ್ನು ಕಡ್ಡಾಯಗೊಳಿಸುವುದು ಎಂದಿದ್ದಾರೆ.

ಮುಖ್ಯಮಂತ್ರಿಗಳು ಕಾರು ಬೆಲ್ಟ್​ ಧರಿಸದೇ ಇದ್ದದ್ದು, ತಮ್ಮ ಕಾರಿನಲ್ಲಿ ಸೀಟ್​ ಬೆಲ್ಟ್​ ಅಲರಾಂ ಆಫ್ ಮಾಡಿದ್ದ ಸಂಗತಿಯನ್ನೂ ಅವರು ನೆನಪಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...