alex Certify ʼಬೋಟ್​ʼ ಕಂಪನಿಯ ಹೆಡ್​ ಫೋನ್​ ಧರಿಸಿದ ರಿಷಿ ಸುನಕ್​ : ಅಮನ್ ​ಗುಪ್ತಾ ಫುಲ್​ ಖುಷ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಬೋಟ್​ʼ ಕಂಪನಿಯ ಹೆಡ್​ ಫೋನ್​ ಧರಿಸಿದ ರಿಷಿ ಸುನಕ್​ : ಅಮನ್ ​ಗುಪ್ತಾ ಫುಲ್​ ಖುಷ್​

ಜಿ 20 ಶೃಂಗಸಭೆಯಲ್ಲಿ ಭಾಗಿಯಾಗುವ ಸಲುವಾಗಿ ರಿಷಿ ಸುನಕ್​ ದೆಹಲಿಗೆ ಆಗಮಿಸಿದ್ದು ಎಲ್ರಿಗೂ ತಿಳಿದಿರೋ ವಿಚಾರ. ಈಗಾಗಲೇ ಯುಕೆ ಪ್ರಧಾನಿ ಹಾಗೂ ಕರ್ನಾಟಕದ ಅಳಿಯ ರಿಷಿ ಸುನಕ್​ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಈ ಎಲ್ಲದರ ನಡುವೆ ಬೋಟ್​ ಕಂಪನಿ ಸಿಇಓ ಹಾಗೂ ಸಹ ಸಂಸ್ಥಾಪಕ ಅಮನ್​ ಗುಪ್ತಾ ಇನ್​ಸ್ಟಾಗ್ರಾಂನಲ್ಲಿ ರಿಷಿ ಸುನಕ್​ರ ಫೋಟೋ ಶೇರ್​ ಮಾಡಿದ್ದಾರೆ. ಇದರಲ್ಲಿ ರಿಷಿ ಸುನಕ್​ ಬೋಟ್​ ಕಂಪನಿಯ ಹೆಡ್​ಫೋನ್​ ಧರಿಸಿರೋದನ್ನ ಕಾಣಬಹುದಾಗಿದೆ. ಈ ಫೋಟೋದಲ್ಲಿ ರಿಷಿ ಸುನಕ್​ ಭಾರತೀಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ಈ ಫೋಟೋವನ್ನು ಮೊದಲು ರಿಷಿ ಸುನಕ್​ ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಅಮನ್​ಗುಪ್ತಾ ಕೂಡ ತಮ್ಮ ಖಾತೆಯಲ್ಲಿ ಈ ಫೋಟೋ ಶೇರ್​ ಮಾಡಿದ್ದಾರೆ. ಈ ಫೋಟೋಗೆ ಅಮನ್​ ಗುಪ್ತಾ, ಭಾರತ್ ಮೇ ಆಪ್‌ ಕಾ ಬೋಟ್​ ಬೋಟ್​ ಸ್ವಾಗತ್​ (ಭಾರತಕ್ಕೆ ನಿಮಗೆ ಸ್ವಾಗತ) ಎಂದು ಬರೆದಿದ್ದಾರೆ.

ಈ ಫೋಟೋ ನೋಡಿದ ನೆಟ್ಟಿಗರು ಬೋಟ್​ ಕಂಪನಿಗೆ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪುಕ್ಸಟ್ಟೆ ಪ್ರಮೋಷನ್​ ಕೊಟ್ಟರು ಎಂದು ನಕ್ಕಿದ್ದಾರೆ. ಇನ್ನು ರಿಷಿ ಸುನಕ್​ ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ ಶುಕ್ರವಾರ ಸರಳವಾದ ಭೋಜನಕೂಟದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...