alex Certify ʼಹಾರರ್‌ʼ ಮನೆಯಲ್ಲಿ ವಾಸ್ತವ್ಯ ಹೂಡಲು ಧೈರ್ಯಶಾಲಿಗಳಿಗೆ ಸಿಗ್ತಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಾರರ್‌ʼ ಮನೆಯಲ್ಲಿ ವಾಸ್ತವ್ಯ ಹೂಡಲು ಧೈರ್ಯಶಾಲಿಗಳಿಗೆ ಸಿಗ್ತಿದೆ ಅವಕಾಶ

ನಮ್ಮಲ್ಲಿ ಅನೇಕರಿಗೆ ಹಾರರ್‌ ಮೂವಿಗಳನ್ನು ನೋಡುವುದು ಭಾರೀ ಇಷ್ಟವಾಗುತ್ತದೆ ಅಲ್ಲವೇ ? 2013ರಲ್ಲಿ ಬಿಡುಗಡೆಯಾದ ’ದಿ ಕಂಜೂರಿಂಗ್’ ಅಂಥದ್ದೇ ಒಂದು ಚಿತ್ರ.

ಈ ಚಿತ್ರವನ್ನು ಶೂಟ್ ಮಾಡಲಾದ ರೋಡ್ ಐಲ್ಯಾಂಡ್‌ನ ಮನೆಯಲ್ಲಿ ಹಾರರ್‌ ಮೂವಿ ಅಭಿಮಾನಿಗಳಿಗೆ ಕ್ಯಾಂಪಿಂಗ್ ಅವಕಾಶ ನೀಡಲಾಗಿದೆ. ಜಿಹ್ಯಾಂಪಿಂಗ್ ಎಂಬ ಹೆಸರಿನ ಅನುಭವದಡಿ ಈ ಕ್ಯಾಂಪಿಂಗ್ ಅನುಭವ ಪಡೆಯಬಹುದಾಗಿದ್ದು, ’ಗ್ಹೋಸ್ಟ್‌ (ದೆವ್ವ) ಹಾಗೂ ಕ್ಯಾಂಪಿಂಗ್’ ಶಬ್ದಗಳನ್ನು ಒಗ್ಗೂಡಿಸಿ ಜಿಹ್ಯಾಂಪಿಂಗ್ ಎಂಬ ಶಬ್ದದ ಅನ್ವೇಷಣೆ ಮಾಡಲಾಗಿದೆ.

14 ಕೋಣೆಯ ಈ ಫಾರ್ಮ್‌ಹೌಸ್‌ನಲ್ಲಿ ಸೂಪರ್‌ ಹಿಟ್ ಹಾರರ್‌ ಮೂವಿಯ ಬಹುತೇಕ ಭಾಗಗಳ ಚಿತ್ರೀಕರಣ ಮಾಡಲಾಗಿದೆ. ಪ್ಯಾಟ್ರಿಕ್ ವಿಲ್ಸನ್ ಹಾಗೂ ವೆರಾ ಫಾಮಿಗಾ ಮುಂಚೂಣಿ ಪಾತ್ರದಲ್ಲಿರುವ ಈ ಚಿತ್ರದಲ್ಲಿ, 1971ರಲ್ಲಿ ಜೋಡಿಯೊಂದು ತನ್ನ ಕುಟುಂಬವನ್ನು ದೆವ್ವಗಳಿಂದ ರಕ್ಷಿಸುವ ಕಥಾ ಹಂದರವಿದೆ.

ಜೂನ್‌ನಿಂದ ಅಕ್ಟೋಬರ್‌ ಒಳಗೆ 20 ದಿನಗಳಲ್ಲಿ ಹೀಗೆ ಕ್ಯಾಂಪಿಂಗ್‌ಗೆ ಅವಕಾಶ ನೀಡುವುದಾಗಿ ಪ್ರಾಯೋಜಕರು ತಿಳಿಸಿದ್ದಾರೆ. 3-4 ಟೆಂಟ್‌ಗಳನ್ನು ಹಾಕಿಕೊಂಡು ಈ ಬಂಗಲೆಯಲ್ಲಿ ಕ್ಯಾಂಪಿಂಗ್ ಮಾಡಬಹುದಾಗಿದೆ.

ಟೆಂಟ್ ಅಥವಾ ಕ್ಯಾರಾವಾನ್‌ನಲ್ಲಿ ಉಳಿಯುವ ಆಯ್ಕೆಗನುಗುಣವಾಗಿ ಇಲ್ಲಿ ಒಂದು ರಾತ್ರಿ ಕಳೆಯಲು $300 (Rs 24,769) ರಿಂದ $400 (Rs 33,025)ವರೆಗೆ ಬೆಲೆ ನಿಗದಿ ಪಡಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...