alex Certify ಪ್ರಾಣಿಗಳ ನಡುವೆಯೂ ಇರುತ್ತಾ ವೈಷಮ್ಯ..? ಶ್ವಾನದ ಮೇಲೆ ಕೋತಿಗಳಿರುವ ದ್ವೇಷದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿಗಳ ನಡುವೆಯೂ ಇರುತ್ತಾ ವೈಷಮ್ಯ..? ಶ್ವಾನದ ಮೇಲೆ ಕೋತಿಗಳಿರುವ ದ್ವೇಷದ ಬಗ್ಗೆ ಕೇಳಿದ್ರೆ ಶಾಕ್​ ಆಗ್ತೀರಾ..!

ಮನುಷ್ಯ ಮನುಷ್ಯರ ನಡುವೆ ದ್ವೇಷ ಇದೆ ಅನ್ನೋದನ್ನು ಕೇಳಿದ್ದೇವೆ ನೋಡಿಯೂ ಇದ್ದೇವೆ. ಆದರೆ ಪ್ರಾಣಿಗಳ ನಡುವೆಯೂ ದ್ವೇಷ ಹಾಗೂ ಸೇಡು ಇರುತ್ತೆ ಎಂಬ ವಿಚಾರವು ಮಹಾರಾಷ್ಟ್ರದ ಬೀಡ್​ ಜಿಲ್ಲೆಯಲ್ಲಿ ನಡೆದ ಘಟನೆಯೊಂದು ಸಾಬೀತುಪಡಿಸಿದೆ.

ಕೆಲ ಸಮಯದ ಹಿಂದೆ ಶ್ವಾನಗಳ ಗುಂಪು ಕೋತಿ ಮರಿಯೊಂದನ್ನು ಸಾಯಿಸಿತ್ತು. ಇದೇ ದ್ವೇಷವನ್ನು ಇಟ್ಟುಕೊಂಡಿರುವ ಮಂಗಗಳು ಕಂಡಕಂಡಲ್ಲಿ ನಾಯಿ ಮರಿಗಳನ್ನು ಕೊಂದು ಹಾಕುತ್ತಿವೆಯಂತೆ. ಮೇಲಿನಿಂದ ಕೆಳಗೆ ಬಿಸಾಡುವ ಮೂಲಕ ಕೋತಿಗಳು ಕಳೆದ 1 ತಿಂಗಳಿನಿಂದ ಏನಿಲ್ಲ ಅಂದರೂ 250 ನಾಯಿ ಮರಿಗಳನ್ನು ಸಾಯಿಸಿವೆಯಂತೆ…!

ಈ ವಿಚಿತ್ರ ಘಟನೆಯು ಬೀಡ್​ ಜಿಲ್ಲೆಯ ಮಜಲ್​ಗಾಂವ್​ ಎಂಬಲ್ಲಿ ನಡೆದಿದೆ. ಈ ಗ್ರಾಮದಲ್ಲಿರುವ ಕೋತಿಗಳು ಎಲ್ಲಿಯಾದರೂ ನಾಯಿ ಮರಿಗಳನ್ನು ನೋಡಿದರೆ ಅಂದರೆ ಸಾಕು ಅವನ್ನು ಎತ್ತಿಕೊಂಡು ಎತ್ತರದ ಸ್ಥಳಕ್ಕೆ ತೆರಳಿ ಅಲ್ಲಿಂದ ಬಿಸಾಡಿ ಸಾಯಿಸುತ್ತಿವೆ.

ಮಜಲ್​ಗಾಂವ್​​ನಿಂದ ಸುಮಾರು 10 ಕಿಲೋಮೀಟರ್​ ದೂರದಲ್ಲಿರುವ ಲಾವೂಲ್​ ಎಂಬ ಗ್ರಾಮದಲ್ಲಿ ಸುಮಾರು 5000 ಜನರು ವಾಸವಿದ್ದಾರೆ. ಈ ಗ್ರಾಮದಲ್ಲಿ ಒಂದೇ ಒಂದು ನಾಯಿಮರಿ ಉಳಿದಿಲ್ಲ. ಗ್ರಾಮಸ್ಥರು ಕೋತಿಗಳನ್ನು ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಆದರೆ ಅರಣ್ಯ ಇಲಾಖೆಗೆ ಒಂದೇ ಒಂದು ಕೋತಿಯನ್ನು ಹಿಡಿಯಲು ಸಾಧ್ಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...