alex Certify ಸೇನೆ ಸೇರುವ ಕನಸಿಗೆ ಮತ್ತಷ್ಟು ಬಲ; ಮಧ್ಯರಾತ್ರಿ 10 ಕಿ.ಮೀ. ಓಡುತ್ತಿದ್ದ ಯುವಕನಿಗೆ ಸಿಕ್ಕಿದೆ ಸಹಾಯಹಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೇನೆ ಸೇರುವ ಕನಸಿಗೆ ಮತ್ತಷ್ಟು ಬಲ; ಮಧ್ಯರಾತ್ರಿ 10 ಕಿ.ಮೀ. ಓಡುತ್ತಿದ್ದ ಯುವಕನಿಗೆ ಸಿಕ್ಕಿದೆ ಸಹಾಯಹಸ್ತ

ಉತ್ತರಾಖಂಡ್​ನ ಅಲ್ಮೋರಾದ ನಿವಾಸಿ ಪ್ರದೀಪ್​ ಮೆಹ್ರಾ ರಾತ್ರೋ ರಾತ್ರಿ ಇಂಟರ್ನೆಟ್​ನಲ್ಲಿ ಸ್ಟಾರ್​ ಆಗಿದ್ದಾರೆ. ಸೇನೆಗೆ ಸೇರೆಬೇಕೆಂದು ಕನಸು ಹೊತ್ತಿರುವ ಈ ಯುವಕ ಮಧ್ಯರಾತ್ರಿ 10 ಕಿಮೀ ದೂರ ಓಡುವ ಮೂಲಕ ತನ್ನ ಕನಸನ್ನು ನನಸು ಮಾಡಿಕೊಳ್ಳುವತ್ತ ಮುಂದಡಿ ಇಡುತ್ತಿದ್ದಾರೆ ಎಂಬ ವಿಚಾರ ಇಂಟರ್ನೆಟ್​​ನಲ್ಲಿ ಕಾಡ್ಗಿಚ್ಚಿನಲ್ಲಿ ಹರಡುತ್ತಿದ್ದಂತೆಯೇ ಇದೀಗ ಪ್ರದೀಪ್​​ಗೆ ಸಹಾಯ ಹಸ್ತವೊಂದು ಕೈ ಚಾಚಿದೆ.

ನಿವೃತ್ತ ಲೆ. ಜನರಲ್​ ಸತೀಶ್​ ದುವಾ ಈ ಯುವಕನ ವಿಡಿಯೋವನ್ನು ಟ್ವೀಟ್​ ಮಾಡುವ ಮೂಲಕ ತಾನು ಈತನ ಕನಸನ್ನು ನನಸು ಮಾಡಲು ಸಹಾಯ ನೀಡುತ್ತೇನೆ ಎಂದು ಹೇಳಿದ್ದಾರೆ.

ಪ್ರಶಸ್ತಿ ವಿಜೇತ ಫಿಲಂ ಮೇಕರ್​ ವಿನೋದ್​ ಕಪ್ರಿ ಸೋಶಿಯಲ್​ ಮೀಡಿಯಾದಲ್ಲಿ ಈ ಯುವಕನ ವಿಡಿಯೋವನ್ನು ಶೇರ್​ ಮಾಡಿದ್ದರು. ಇದರಲ್ಲಿ ಯುವಕ ತಾನು ಪ್ರತಿದಿನ ರಾತ್ರಿ ನೋಯ್ಡಾ ಸೆಕ್ಟರ್​ 16 ರಿಂದ ಬರೋಲಾದವರೆಗೆ ಓಡಿಕೊಂಡೇ ಸಾಗುವುದಾಗಿ ಹೇಳಿದ್ದ. ಸೇನೆಗೆ ಸೇರುವ ಸಲುವಾಗಿ ತಾನು ಪ್ರತಿದಿನ ಈ ರೀತಿ ಅಭ್ಯಾಸ ಮಾಡುತ್ತಿರೋದಾಗಿ ಹೇಳಿಕೊಂಡಿದ್ದ.

— Lt Gen Satish Dua🇮🇳 (@TheSatishDua) March 21, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...