alex Certify ಸಸಿಗಳ ಬೆಳವಣಿಗೆಯನ್ನೇ ಹೈಜಾಕ್ ಮಾಡುವ ಪರಾವಲಂಬಿಗಳ ರಹಸ್ಯ ಬೇಧಿಸಿದ ವಿಜ್ಞಾನಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಸಿಗಳ ಬೆಳವಣಿಗೆಯನ್ನೇ ಹೈಜಾಕ್ ಮಾಡುವ ಪರಾವಲಂಬಿಗಳ ರಹಸ್ಯ ಬೇಧಿಸಿದ ವಿಜ್ಞಾನಿಗಳು

ಬ್ಯಾಕ್ಟೀರಿಯಲ್ ಪ್ಯಾರಾಸೈಟ್‌ಗಳ ಮೂಲಕ ವಯಸ್ಸಾಗುವ ಪ್ರಕ್ರಿಯೆಯನ್ನು ನಿಧಾನವಾಗಿಸುವ ವಿಧಾನದ ಹಿಂದಿನ ರಹಸ್ಯವನ್ನು ಬ್ರಿಟನ್‌ನ ಜಾನ್ಸ್ ಇನ್ನೆಸ್ ಕೇಂದ್ರದ ಸಂಶೋಧಕರು ಪತ್ತೆ ಮಾಡಿದ್ದಾರೆ. ನಾರ್ವಿಚ್‌‌ನ ಸೈನ್ಸ್‌ಬರಿ ಪ್ರಯೋಗಾಲಯ, ವಜೆನಿಂಗೆನ್ ವಿವಿ ಮತ್ತು ತಾಯ್ವಾನ್‌ನ ಅಕಾಡೆಮಿಯಾ ಸಿನಿಸಾ ಹಾಗೂ ನೆದರ್ಲೆಂಡ್ಸ್‌ನ ಸಂಶೋಧನಾ ಕೇಂದ್ರಗಳು ಈ ಪ್ರಯೋಗದಲ್ಲಿ ಕೈಜೋಡಿಸಿವೆ.

ಸಸ್ಯಗಳಲ್ಲೇ ಜೀವಿಸುವ ಪರಾವಲಂಬಿ ಜೀವಿಗಳು ಸಸ್ಯಗಳು ಉತ್ಪಾದಿಸುವ ಪೋಷಕಾಂಶಗಳು ಹಾಗೂ ಪ್ರೊಟೀನ್‌ಗಳನ್ನು ಅವಲಂಬಿಸಿರುತ್ತವೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಸಸಿಗಳು ಈ ಪರಾವಲಂಬಿ ಜೀವಿಗಳ ಕಾರಣದಿಂದ ಜ಼ೊಂಬಿಗಳಾಗುತ್ತವೆ. ಒಂದು ಹಂತದಿಂದ ಸಸಿಗಳು ಕೇವಲ ಈ ಪರಾವಲಂಬಿ ಜೀವಿಗಳಿಗೆ ಎರವಾಗುತ್ತಾ, ಸಂತಾನೋತ್ಪತ್ತಿಯನ್ನೇ ನಿಲ್ಲಿಸಿಬಿಡುತ್ತವೆ.

ಈ ಮುನ್ನ ಸಸಿಗಳು ಒಮ್ಮೆಲೇ ಬೆಳವಣಿಗೆ ನಿಲ್ಲಿಸುವುದು ಏಕೆ ಎಂದು ಅರಿಯಲು ಭಾರೀ ಪ್ರಯತ್ನದಲ್ಲಿದ್ದರು. ತಮ್ಮನ್ನು ಸಲಹಲು ಮಾತ್ರವೇ ಸಸಿಗಳು ಬದುಕುವಂತೆ ಮಾಡಬಲ್ಲಷ್ಟು ನಿಷ್ಣಾತ ಪರಾವಲಂಬಿಗಳು ಇವಾಗಿವೆ.

ಎಸ್‌ಎಪಿ05 ಹೆಸರಿನ ಪ್ರೊಟೀನ್‌‌ ಉತ್ಪತ್ತಿ ಮಾಡುವ ಈ ಪ್ಯಾರಾಸೈಟ್‌ಗಳು ಸಸಿಗಳ ಅಭಿವೃದ್ಧಿಯನ್ನೇ ತಮಗೆ ಬೇಕಾದಂತೆ ನಿರ್ದೇಶಿಸಬಲ್ಲಷ್ಟು ನೊಟೋರಿಸಯಸ್‌ ಪೈಕಿಯ ಬ್ಯಾಕ್ಟೀರಿಯಾಗಳಾಗಿವೆ.

ಒಮ್ಮೆ ಅತಿಥಿ ಜೀವಿಯ ದೇಹದೊಳಗೆ ಪ್ರವೇಶಿಸುತ್ತಲೇ, ಈ ಸೂಕ್ಷ್ಮಜೀವಿಗಳು ಪ್ರೋಟೀನ್‌ ರಚನೆಗಳನ್ನು ಮುರಿದು ಸಸಿಗಳ ಬೆಳವಣಿಗೆಗೆ ಕಾರಣವಾಗುವ ಅಂಶಗಳನ್ನೇ ನಿಯಂತ್ರಣಕ್ಕೆ ತೆಗೆದುಕೊಂಡು ಕೊಂಬೆಯಂಥ ರಚನೆಗಳಾ ’ವಿಚಸ್’ ಚಿಗುರಲು ಕಾರಣವಾಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...