alex Certify ಸೆಕ್ಸಿ ಔಟ್​ಫಿಟ್​ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ನಟಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಕ್ಸಿ ಔಟ್​ಫಿಟ್​ ಧರಿಸಿ ಟ್ರೋಲಿಗರ ಬಾಯಿಗೆ ಆಹಾರವಾದ ನಟಿ…!

ಹಿಂದಿ ಕಿರುತೆರೆ ನಟಿ ಹಾಗೂ ಬಿಗ್​ಬಾಸ್​ ಒಟಿಟಿಯ ಸ್ಪರ್ಧಿ ಉರ್ಫಿ ಜಾವೇದ್​​ ತಮ್ಮ ಉಡುಪಿನ ಕಾರಣಕ್ಕಾಗಿ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಸದಾ ಬೋಲ್ಡ್​, ಸೆಕ್ಸಿಯಾಗಿ ಕಾಣುವಂತಹ ಉಡುಪನ್ನೇ ಧರಿಸುವ ಉರ್ಫಿ ಈ ಬಾರಿ ಅತ್ಯಂತ ಕೆಟ್ಟದಾಗಿ ಟ್ರೋಲ್​ಗೆ ಒಳಗಾಗಿದ್ದಾರೆ.

ಇನ್​ಸ್ಟಾಗ್ರಾಂ ಖಾತೆಯಲ್ಲಿ ಉರ್ಫಿ ಸೋಮವಾರದಂದು ನಾಲ್ಕು ಫೋಟೋಗಳನ್ನು ಶೇರ್​ ಮಾಡಿದ್ದರು. ಈ ಫೋಟೋದಲ್ಲಿ ನಟಿ ಉರ್ಫಿ ತಿಳಿ ಗುಲಾಬಿ ಬಣ್ಣದ ಬಟ್ಟೆಯನ್ನು ಧರಿಸಿದ್ದರು. ಈ ಫೋಟೋಗಳನ್ನು ಶೇರ್​ ಮಾಡಿದ್ದು ಉರ್ಫಿ ಈಗ ಸಮಯವೆಷ್ಟು ಎಂದು ಶೀರ್ಷಿಕೆ ನೀಡಿದ್ದರು. ಇಂತದ್ದೊಂದು ಬೋಲ್ಡ್​ ಡ್ರೆಸ್​ನಲ್ಲಿ ನಟಿ ಉರ್ಫಿಯನ್ನು ನೋಡಿದ ನೆಟ್ಟಿಗರು ಮನಬಂದಂತೆ ಟ್ರೋಲ್​ ಮಾಡಿದ್ದಾರೆ.

ನೀನು ಒಳ ಉಡುಪುಗಳನ್ನೇ ಧರಿಸಿಲ್ಲ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದರೆ ಇನ್ನೊಬ್ಬರು ಈ ಡ್ರೆಸ್​ ಅತ್ಯಂತ ಹೊಲಸಾಗಿದೆ ಎಂದು ಜರಿದಿದ್ದಾರೆ. ಇನ್ನೊಬ್ಬರು ಇದಕ್ಕಿಂತ ನೀನು ಬೆತ್ತಲಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದೂ ಬರೆದಿದ್ದಾರೆ.

ಅಂದಹಾಗೆ ತಮ್ಮ ಉಡುಪಿನ ಕಾರಣಕ್ಕೆ ಈ ರೀತಿ ನೆಟ್ಟಿಗರ ಬಳಿ ಹೇಳಿಸಿಕೊಳ್ಳುವುದು ಉರ್ಫಿಗೆ ಹೊಸದೇನಲ್ಲ. ಕೆಲವು ದಿನಗಳ ಹಿಂದೆ ನಟಿ ಉರ್ಫಿ ಬಿಕಿನಿ ಧರಿಸಿದ ಫೋಟೋವನ್ನು ಪೋಸ್ಟ್​ ಮಾಡಿದ್ದರು. ಈ ಫೋಟೋಗೂ ಸಹ ನೆಟ್ಟಿಗರು ಅತ್ಯಂತ ಕೆಟ್ಟದಾಗಿ ಕಮೆಂಟ್​ ಮಾಡಿದ್ದರು.

Bina kapdon ke ghum le': Urfi Javed gets brutally trolled for wearing  revealing slit skirt

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...