alex Certify ಬಾಡಿಗೆಗಿರುವ ಈ ಮನೆ ಬೆಡ್ರೂಮ್‌ ಕಥೆಯನ್ನು ಕೇಳಲೇಬೇಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಡಿಗೆಗಿರುವ ಈ ಮನೆ ಬೆಡ್ರೂಮ್‌ ಕಥೆಯನ್ನು ಕೇಳಲೇಬೇಡಿ…!

ಇಂಗ್ಲೆಂಡ್ ನಲ್ಲಿರುವ ಈ ಭವ್ಯವಾದ ಮನೆಯನ್ನು ನೀವು ಕೇವಲ 60,000 ರೂ.ಗಳಿಗೆ ಬಾಡಿಗೆಗೆ ಪಡೆಯಬಹುದು. ಆದರೆ, ಅದರ ಬೆಡ್ರೂಮ್ ಮಾತ್ರ ದುಃಸ್ವಪ್ನದಂತಿದೆ.

ಇಂಗ್ಲೆಂಡ್ ನ ವಿಸ್ತಾರವಾದ ನಗರಗಳಲ್ಲಿ ಶೆಫೀಲ್ಡ್ ಕೂಡ ಒಂದು. ಇದು ದಕ್ಷಿಣ ಯಾರ್ಕ್ಶೈರ್ ಭಾಗದಲ್ಲಿದೆ. ಇತ್ತೀಚೆಗೆ ಒಂದು ಸ್ಟುಡಿಯೋ ಫ್ಲಾಟ್ ಇಲ್ಲಿ ಬಾಡಿಗೆಗೆ ಲಭ್ಯವಿತ್ತು. ಅದು ಕೈಗೆಟಕುವ ಬಾಡಿಗೆ ದರವನ್ನು ಹೊಂದಿದ್ದರಿಂದ ತುಂಬ ವೈರಲ್ ಕೂಡ ಆಗಿತ್ತು.

ಶೆಫೀಲ್ಡ್ ನಗರದ ಹೊರಭಾಗದಲ್ಲಿರುವ ಈ ಸ್ಟುಡಿಯೋ ಫ್ಲಾಟ್ ಕೇವಲ £600 ತಿಂಗಳ ಬಾಡಿಗೆಗೆ ಲಭ್ಯವಿದೆ. ಭಾರತೀಯ ಮೌಲ್ಯದಲ್ಲಿ ಅದು 60,000 ರೂ. ಆಗಿದೆ.

ಈ ಸ್ಟುಡಿಯೋ ಫ್ಲಾಟ್ನಲ್ಲಿ ಅತ್ಯಾಕರ್ಷಕ ಅಡುಗೆ ಮನೆ, ಊಟದ ಮನೆ ಮತ್ತು ಒಂದು ಪ್ರತ್ಯೇಕವಾದ ಸ್ನಾನಗೃಹವಿದೆ. ಆದರೆ, ಈ ಫ್ಲಾಟ್ ನ ಆಂತರಿಕ ವಿನ್ಯಾಸದಲ್ಲಿ ಒಂದು ದೊಡ್ಡ ದೋಷವಿದೆ. ನಿದ್ರಿಸಲು ಅನುಕೂಲವಾಗುವಂತೆ ಇದನ್ನು ವಿನ್ಯಾಸಗೊಳಿಸಿಲ್ಲ. ಹಾಸಿಗೆಯನ್ನು ಅಡುಗೆ ಮನೆಯ ಹಾಬ್ ಮತ್ತು ಕ್ಯಾಬಿನೆಟ್ಗಳ ಮೇಲೆ ನೇರವಾಗಿ ಹೊಂದಿಸಲಾಗಿದೆ. ಅಗಲ ಕಿರಿದಾಗಿರುವ ಮೆಟ್ಟಿಲುಗಳನ್ನೇರಿ ಅದನ್ನು ತಲುಪಬೇಕು.

‘ಆಸ್ತಿ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...