alex Certify ಜಿಯೋದ ಅಗ್ಗದ ಪ್ಲಾನ್..! ಕೇವಲ 899 ರೂ.ಗೆ ಪಡೆಯಿರಿ 336 ದಿನಗಳ ಸಿಂಧುತ್ವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋದ ಅಗ್ಗದ ಪ್ಲಾನ್..! ಕೇವಲ 899 ರೂ.ಗೆ ಪಡೆಯಿರಿ 336 ದಿನಗಳ ಸಿಂಧುತ್ವ

ರಿಲಾಯನ್ಸ್ ಜಿಯೋ ಅಗ್ಗದ ಯೋಜನೆಗಳಿಗೆ ಹೆಸರು ವಾಸಿಯಾಗಿದೆ. ಆದ್ರೆ ಇತ್ತೀಚೆಗೆ ಜಿಯೋ ತನ್ನ ಯೋಜನೆಗಳ ಬೆಲೆಯನ್ನು ಏರಿಕೆ ಮಾಡಿದೆ. ಜಿಯೋ ಫೋನ್ ಗ್ರಾಹಕರಿಗೆ ಪ್ರತಿ ತಿಂಗಳು ರಿಚಾರ್ಜ್ ಮಾಡುವುದು ದುಬಾರಿಯಾಗ್ತಿದ್ದರೆ ಅಗ್ಗದ ಪ್ಲಾನ್ ವಿವರವೊಂದು ಇಲ್ಲಿದೆ.

ಜಿಯೋ ಫೋನ್ ಆಲ್ ಇನ್ ಒನ್ ಪ್ಲಾನ್‌ಗಳ ಪಟ್ಟಿಯಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುವ ಅಗ್ಗದ ಪ್ಲಾನ್ ಅಂದ್ರೆ 91 ರೂಪಾಯಿ ಪ್ಲಾನ್. ಆದ್ರೆ ಈ ಪ್ಲಾನ್ ಪ್ರತಿ ತಿಂಗಳು ರಿಚಾರ್ಜ್ ಮಾಡಿದ್ರೆ 1092 ರೂಪಾಯಿ ಖರ್ಚು ಬರುತ್ತದೆ. ಇದಕ್ಕಿಂತ ಅಗ್ಗದ ಪ್ಲಾನ್ ಅಂದ್ರೆ 899 ರೂಪಾಯಿ ಯೋಜನೆ. ಈ ಯೋಜನೆಯಲ್ಲಿ ಕಂಪನಿ ತನ್ನ ಬಳಕೆದಾರರಿಗೆ 336 ದಿನಗಳ ಮಾನ್ಯತೆ ನೀಡುತ್ತದೆ.

ಈ ಯೋಜನೆ ಜೊತೆ ಕಂಪನಿ 2ಜಿಬಿ ಡೇಟಾವನ್ನು ಪ್ರತಿ ತಿಂಗಳು ನೀಡುತ್ತದೆ. ಅಂದ್ರೆ ಈ ಯೋಜನೆಯಲ್ಲಿ ಗ್ರಾಹಕರಿಗೆ ಒಟ್ಟು 24 ಜಿಬಿ ಡೇಟಾ ಸಿಗುತ್ತದೆ. ಯಾವುದೇ ನೆಟ್ವರ್ಕ್ ಗೆ ಅನಿಯಮಿತ ಧ್ವನಿ ಕರೆ ಸೌಲಭ್ಯ ಇದ್ರಲ್ಲಿ ಲಭ್ಯವಿದೆ. ಪ್ರತಿ ತಿಂಗಳು 50 ಎಸ್ಎಂಎಸ್ ಲಭ್ಯವಿದೆ. ಈ ಯೋಜನೆ ಜೊತೆ ಬಳಕೆದಾರರಿಗೆ ಜಿಯೋ ಸಿನಿಮಾ, ಜಿಯೋ ಟಿವಿ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್‌ನಂತಹ ಅಪ್ಲಿಕೇಷನ್ ಗಳನ್ನು ಉಚಿತವಾಗಿ ನೀಡ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...