alex Certify ರಿಲಯನ್ಸ್ ಜಿಯೋ ಧಮಾಕಾ..! ಈ ಯೋಜನೆ ಜೊತೆ ಸಿಗ್ತಿದೆ ಉಚಿತ ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಿಲಯನ್ಸ್ ಜಿಯೋ ಧಮಾಕಾ..! ಈ ಯೋಜನೆ ಜೊತೆ ಸಿಗ್ತಿದೆ ಉಚಿತ ಫೋನ್

ರಿಲಯನ್ಸ್ ಜಿಯೋ ಗ್ರಾಹಕರಿಗೆ ಅನುಕೂಲಕರ ಯೋಜನೆಗಳನ್ನು ನೀಡ್ತಿದೆ. ಇದೇ ಕಾರಣಕ್ಕೆ  ಟೆಲಿಕಾಂ ಬಳಕೆದಾರರು ತಮ್ಮ ಸಿಮ್, ಜಿಯೋಗೆ ಪೋರ್ಟ್ ಮಾಡ್ತಿದ್ದಾರೆ. ತನ್ನ ಧಮಾಕಾ ಯೋಜನೆಗಳಿಂದಾಗಿ ಜಿಯೋ, ಚಂದಾದಾರರನ್ನು ನಿರಂತರವಾಗಿ ಹೆಚ್ಚಿಸಿಕೊಳ್ತಿದೆ. ಈಗ ಜಿಯೋ ಮತ್ತೊಂದು ಉತ್ತಮ ಕೊಡುಗೆಯನ್ನು ನೀಡಿದೆ. ಗ್ರಾಹಕರು ಜಿಯೋ ಫೋನ್ ಉಚಿತವಾಗಿ ಪಡೆಯಬಹುದಾಗಿದೆ. ಪದೇ ಪದೇ ರಿಚಾರ್ಜ್ ಮಾಡಲು ಸಾಧ್ಯವಾಗದವರು ಈ ಯೋಜನೆ ಲಾಭ ಪಡೆಯಬಹುದು.

ಜಿಯೋ ಬಳಕೆದಾರರು, 1499 ರೂಪಾಯಿಗಳ ಪ್ಲಾನ್ ತೆಗೆದುಕೊಂಡರೆ, ಅನಿಯಮಿತ ಕರೆ, 24 ಜಿಬಿ ಡೇಟಾ ಮತ್ತು ಜಿಯೋದ ಎಲ್ಲಾ ಅಪ್ಲಿಕೇಷನ್ ಪಡೆಯಬಹುದು. ಈ ಯೋಜನೆಯೊಂದಿಗೆ ಜಿಯೋ ಫೋನ್ ಉಚಿತವಾಗಿ ಸಿಗಲಿದೆ. ಈ ಯೋಜನೆಯ ಸಿಂಧುತ್ವ ಒಂದು ವರ್ಷ.

ಅಪ್ರಾಪ್ತರ ಸುರಕ್ಷತೆಗೆ ಮತ್ತೊಂದು ಹೊಸ ನೀತಿ ಘೋಷಿಸಿದ ʼಗೂಗಲ್ʼ

ಜಿಯೋದ 1999 ರೂಪಾಯಿ ಯೋಜನೆಯನ್ನು ತೆಗೆದುಕೊಂಡರೆ, ಉಚಿತ ಜಿಯೋ ಫೋನ್ ಸಿಗಲಿದೆ. ಅನಿಯಮಿತ ಕರೆ ಮತ್ತು 48 ಜಿಬಿ ಡೇಟಾ ಎರಡು ವರ್ಷಗಳವರೆಗೆ ಲಭ್ಯವಿರುತ್ತದೆ. ಈ ಯೋಜನೆಯ ವ್ಯಾಲಿಡಿಟಿ 2 ವರ್ಷಗಳು. ಈ ಯೋಜನೆಯಲ್ಲಿ ಜಿಯೋ ಅಪ್ಲಿಕೇಷನ್ ಗಳ ಚಂದಾದಾರಿಕೆ ಸಿಗಲಿದೆ.

ಜಿಯೋ ಫೋನ್ ಒಂದು ಫೀಚರ್ ಫೋನ್ ಆಗಿದ್ದು, ಇದು 2.4 ಇಂಚಿನ ಕ್ಯೂವಿಜಿಎ ಡಿಸ್‌ಪ್ಲೇ ಹೊಂದಿದೆ. ಈ ಫೋನ್ 1500ಎಂಎಎಚ್ ಬ್ಯಾಟರಿಯನ್ನು ಹೊಂದಿದೆ. ಇದು 9 ಗಂಟೆಗಳ ಟಾಕ್ ಟೈಮ್ ನೀಡುತ್ತದೆ. ಫೋನ್‌ನ ಸ್ಟೋರೇಜ್ ಹೆಚ್ಚಿಸಲು 128ಜಿಬಿವರೆಗಿನ ಮೈಕ್ರೋ ಎಸ್ಡಿ ಕಾರ್ಡ್ ಬೆಂಬಲ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...