alex Certify ಜಿಯೋ ಫೋನ್​​ ನೆಕ್ಸ್ಟ್​​ 5ಜಿ ಬಿಡುಗಡೆಗೆ ಮುಹೂರ್ತ ಫಿಕ್ಸ್: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧಿಕೃತ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಫೋನ್​​ ನೆಕ್ಸ್ಟ್​​ 5ಜಿ ಬಿಡುಗಡೆಗೆ ಮುಹೂರ್ತ ಫಿಕ್ಸ್: ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಧಿಕೃತ ಘೋಷಣೆ

ರಿಲಯನ್ಸ್​ ಇಂಡಸ್ಟ್ರೀಸ್ ಲಿಮಿಟೆಡ್​ 44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಜಿಯೋ ಫೋನ್ ನೆಕ್ಸ್ಟ್​ 5ಜಿ ಫೋನ್​ನ್ನು ಅಧಿಕೃತವಾಗಿ ಪರಿಚಯಿಸಿದೆ. ಟೆಲಿಕಾಂ ದೈತ್ಯ ಕಂಪನಿಯು ಟೆಕ್​ ದೈತ್ಯ ಗೂಗಲ್​ ಜೊತೆ ಸೇರಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ 5 ಜಿ ಫೋನ್​ಗಳನ್ನ ಮಾರುಕಟ್ಟೆಗೆ ತರುವ ಬಗ್ಗೆ ಮಾಹಿತಿ ನೀಡಿದೆ.

ಈ ಹೊಸ ಸಾಧನದಲ್ಲಿ ವಾಯ್ಸ್​ ಅಸಿಸ್ಟಂಟ್​, ಭಾಷಾ ಅನುವಾದ, ಸ್ಮಾರ್ಟ್ ಕ್ಯಾಮರಾ ಸೇರಿದಂತೆ ಇನ್ನೂ ಹಲವು ಬಗೆಯ ಸೌಲಭ್ಯಗಳು ಇರಲಿವೆ ಎನ್ನಲಾಗಿದೆ. ಈ ಹೊಸ ಸ್ಮಾರ್ಟ್​ ಫೋನ್​ಗಳು ಈ ವರ್ಷದ ಗಣೇಶ ಚತುರ್ಥಿ ಅಂದರೆ ಸೆಪ್ಟೆಂಬರ್​ 10ನೇ ತಾರೀಖಿನಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಕಂಪನಿ ಹೇಳಿದೆ.

ಗೂಗಲ್​ ಸಂಸ್ಥೆಯು ಕಳೆದ ವರ್ಷ ಎಂಜಿಎಂ ಕಾರ್ಯಕ್ರಮದಲ್ಲಿ ಜಿಯೋಗೆ 337 ಕೋಟಿ ರೂಪಾಯಿ ಹೂಡಿಕೆ ಮಾಡುವ ನಿರ್ಧಾರದ ಬಗ್ಗೆ ಘೋಷಣೆ ಮಾಡಿತ್ತು. ಇದರ ಮುಂದುವರಿದ ಭಾಗವಾಗಿ ಇದೀಗ 5ಜಿ ಫೋನ್​ ಅಭಿವೃದ್ಧಿಯಾಗುತ್ತಿದೆ.

44ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಮುಕೇಶ್​ ಅಂಬಾನಿ, ಚಿಲ್ಲರೆ ವ್ಯಾಪಾರ, ತೈಲೋದ್ಯಮ ಸೇರಿದಂತೆ ಎಲ್ಲಾ ವ್ಯವಹಾರಗಳ ಬಗ್ಗೆ ಮೊದಲು ಮಾಹಿತಿ ನೀಡಿದ್ರು. ಇದೇ ವೇಳೆ ಗೂಗಲ್​ ಹಾಗೂ ರಿಲಯನ್ಸ್​ ಜಿಯೋ ಜಂಟಿಯಾಗಿ ಅಭಿವೃದ್ಧಿ ಪಡಿಸುತ್ತಿರುವ ಸ್ಮಾರ್ಟ್​ಫೋನ್​ ಬಿಡುಗಡೆಯ ಬಗ್ಗೆಯೂ ಘೋಷಣೆ ಮಾಡಿದ್ರು.

ಗೂಗಲ್​ ಹಾಗೂ ಜಿಯೋ ಕಂಪನಿಯು ಜಂಟಿಯಾಗಿ ಜಿಯೋಫೋನ್​ ನೆಕ್ಸ್ಟ್​​ ಎಂಬ ಸ್ಮಾರ್ಟ್​ ಫೋನ್​​ ಮಾರುಕಟ್ಟೆಗೆ ಬರುತ್ತಿರೋದರ ಬಗ್ಗೆ ಘೋಷಣೆ ಮಾಡಲು ಹೆಮ್ಮೆ ಎನಿಸುತ್ತಿದೆ. ಇದೊಂದು ಎಲ್ಲಾ ಸೌಲಭ್ಯಗಳನ್ನ ಹೊಂದಿರುವ ಸ್ಮಾರ್ಟ್ ಫೋನ್​​ ಆಗಿದ್ದು ಗೂಗಲ್​ ಹಾಗೂ ಜಿಯೋ ಎರಡಕ್ಕೂ ಸೇರಿದ ಅಪ್ಲಿಕೇಶನ್​ಗಳು ಇದರಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಮಾಹಿತಿ ನೀಡಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...