alex Certify ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್​.ಸಿ ಮಳಿಗೆ; ಸೋಶಿಯಲ್​ ಮೀಡಿಯಾದಲ್ಲಿ #RejectKFC ಟ್ರೆಂಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನ್ನಡಕ್ಕೆ ಅಗೌರವ ತೋರಿದ ಕೆ.ಎಫ್​.ಸಿ ಮಳಿಗೆ; ಸೋಶಿಯಲ್​ ಮೀಡಿಯಾದಲ್ಲಿ #RejectKFC ಟ್ರೆಂಡ್

ತಮಿಳರ ಜೊತೆ ಜೊಮ್ಯಾಟೋ ವಿವಾದದ ಬಳಿಕ ಇದೀಗ ಕನ್ನಡಿಗರ ಜೊತೆಯಲ್ಲಿ ಕೆ.ಎಫ್.​ಸಿ ವಿವಾದವು ದೊಡ್ಡ ಮಟ್ಟದಲ್ಲಿ ಸುದ್ದಿಯಾಗ್ತಿದೆ. ಕರ್ನಾಟಕದ ಕೆ.ಎಫ್.​ಸಿ ಮಳಿಗೆಯೊಂದರಲ್ಲಿ ಗ್ರಾಹಕರ ಕನ್ನಡ ಹಾಡಿನ ಕೋರಿಕೆಗೆ ಒಪ್ಪದ ಕಾರಣ ಕೆ.ಎಫ್.​ಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಇದಾದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ಕೆ.ಎಫ್.​ಸಿ ವಿರುದ್ಧ ಸಾಕಷ್ಟು ಪೋಸ್ಟ್​ಗಳು ಹರಿದಾಡಲು ಆರಂಭಿಸಿದೆ. ಕರ್ನಾಟಕದಲ್ಲಿರುವ ಮಳಿಗೆಯಲ್ಲಿ ಕನ್ನಡ ಹಾಡುಗಳನ್ನು ಹಾಕಲು ಒಪ್ಪದ ಕೆ.ಎಫ್.ಸಿ.ಯನ್ನು ಕರ್ನಾಟಕದಲ್ಲಿ ಬ್ಯಾನ್​ ಮಾಡಬೇಕು ಎಂದು ಆಗ್ರಹಿಸಿ #RejectKFC ಎಂಬ ಹ್ಯಾಶ್​ಟ್ಯಾಗ್​ನ ಅಡಿಯಲ್ಲಿ ಪೋಸ್ಟ್​ಗಳನ್ನು ಶೇರ್​ ಮಾಡಲಾಗ್ತಿದೆ.

ಟ್ವಿಟರ್​ನಲ್ಲಿ ವೈರಲ್​ ಆಗಿರುವ ಮಾಹಿತಿಯ ಪ್ರಕಾರ ಔಟ್​ಲೆಟ್​ನ ಸಿಬ್ಬಂದಿಯೊಬ್ಬರು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ ಆಗಿರುವ ಕಾರಣ ಕನ್ನಡ ಹಾಡುಗಳನ್ನು ಇಲ್ಲಿ ಪ್ಲೇ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರಂತೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಕೂಡ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕೆ.ಎಫ್​.ಸಿ. ಆ್ಯಂಟಿ ಕನ್ನಡ ಮಳಿಗೆ ಎಂದು ಅನೇಕರು ಕಿಡಿಕಾರಿದ್ದಾರೆ. ಹೀಗಾಗಿ ಬಾಯ್ಕಾಟ್​ ಕೆಎಫ್​ಸಿ ಟ್ರೆಂಡ್​ ಜೋರಾಗಿ ಸದ್ದು ಮಾಡ್ತಿದೆ.

ಕನ್ನಡಿಗರು ಕೆ.ಎಫ್​.ಸಿ.ಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ಅನೇಕರು ಕೆ.ಎಫ್.​ಸಿ. ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ರಿವ್ಯೂವ್​ ನೀಡಿದ್ದಾರೆ. ತಮಿಳಿಗರು ಜೊಮ್ಯಾಟೋಗೆ ಪಾಠ ಕಲಿಸಿದಂತೆ ಕನ್ನಡಿಗರು ಕೆ.ಎಫ್.​ಸಿ.ಗೆ ಕಲಿಸುತ್ತಾರೆ ಎಂದು ಟ್ವೀಟ್​ ಮಾಡಲಾಗ್ತಿದೆ.

— ವಿನಯ್ ?? (@meVinayRW) October 23, 2021

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...