alex Certify 45.25 ಲಕ್ಷ ತೆರಿಗೆ ಪಾವತಿದಾರರಿಗೆ 74,158 ಕೋಟಿ ರೂ. ರೀಫಂಡ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

45.25 ಲಕ್ಷ ತೆರಿಗೆ ಪಾವತಿದಾರರಿಗೆ 74,158 ಕೋಟಿ ರೂ. ರೀಫಂಡ್‌

ಒಟ್ಟಾರೆಯಾಗಿ 2021-22ನೇ ಹಣಕಾಸು ಸಾಲಿನಲ್ಲಿ ಇದುವರೆಗೂ 43.6 ಲಕ್ಷ ತೆರಿಗೆ ಪಾವತಿದಾರರ ಅರ್ಜಿಗಳನ್ನು ಪರಿಶೀಲಿಸಿ, 18,873 ಕೋಟಿ ರೂ. ಆದಾಯ ತೆರಿಗೆ ರೀಫಂಡ್‌ಗಳನ್ನು ಕೊಡಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಹೇಳಿದೆ. ಜತೆಗೆ 1.55 ಲಕ್ಷ ತೆರಿಗೆ ಪಾವತಿ ಕಂಪನಿಗಳಿಗೆ ಕಾರ್ಪೊರೇಟ್ ತೆರಿಗೆ ರೀಫಂಡ್‌ ಆಗಿ 55,285 ಕೋಟಿ ರೂ. ಪಾವತಿ ಮಾಡಲಾಗಿದೆ.

ಎಲ್ಲ ಸೇರಿಸಿಕೊಂಡು 2021ರ ಏ.1 ರಿಂದ 2021ರ ಸೆ. 20ರವರೆಗೆ 74,158 ಕೋಟಿ ರೂ. ರೀಫಂಡ್‌ ಜನರನ್ನು ತಲುಪಿದೆ ಎಂದು ಐಟಿ ಇಲಾಖೆ, ಅಧಿಕೃತ ಟ್ವಿಟರ್‌ ಖಾತೆಯ ಮೂಲಕ ಮಾಹಿತಿ ನೀಡಿದೆ.

ರ್ಯಾಪ್ ಹಾಡಿನಲ್ಲಿ ಟಿಎಂಸಿ ನಾಯಕ ಮದನ್ ಮಿತ್ರಾ ಮಿಂಚಿಂಗ್

ಐಟಿಆರ್‌ ಸಲ್ಲಿಕೆಗೆ ಕೊನೆಯ ದಿನವನ್ನು ಕೆಲ ದಿನಗಳ ಮುನ್ನ ವಿಸ್ತರಿಸಿರುವ ಸಿಬಿಡಿಟಿಯು 2021ರ ಡಿ. 31ರವರೆಗೆ ಸಮಯಾವಕಾಶ ನೀಡಿದೆ. ಲೆಕ್ಕ ಪರಿಶೋಧನಾ ವರದಿ (ಆಡಿಟ್‌ ರಿಪೋರ್ಟ್‌) ಸಲ್ಲಿಕೆಯ ಅವಧಿಯನ್ನು ಕೂಡ ವಿಸ್ತರಿಸಲಾಗಿದೆ.

ಹೊಸ ಆದಾಯ ತೆರಿಗೆ ವೆಬ್‌ಸೈಟ್‌ನಲ್ಲಿ ಉಂಟಾಗಿರುವ ಹಲವು ತಾಂತ್ರಿಕ ದೋಷಗಳನ್ನು ಐಟಿ ಇಲಾಖೆಯ ಗಮನಕ್ಕೆ ಜನಸಾಮಾನ್ಯರು ಮತ್ತು ಕಂಪನಿಗಳು ತರುತ್ತಿವೆ. ಇದರಿಂದಾಗಿ ಸರಿಯಾದ ಸಮಯಕ್ಕೆ ಐಟಿ ರಿಟರ್ನ್ಸ್‌ ಸಲ್ಲಿಕೆ ಮಾಡಲಾಗುತ್ತಿಲ್ಲ ಎಂದು ದೂರು ನೀಡಲಾಗಿದೆ. ಈ ಕಾರಣ ಮತ್ತು ಕೊರೊನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಐಟಿಆರ್‌ ಸಲ್ಲಿಕೆಯ ಕೊನೆಯ ದಿನವನ್ನು ವಿಸ್ತರಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...