alex Certify ರ್ಯಾಪ್ ಹಾಡಿನಲ್ಲಿ ಟಿಎಂಸಿ ನಾಯಕ ಮದನ್ ಮಿತ್ರಾ ಮಿಂಚಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರ್ಯಾಪ್ ಹಾಡಿನಲ್ಲಿ ಟಿಎಂಸಿ ನಾಯಕ ಮದನ್ ಮಿತ್ರಾ ಮಿಂಚಿಂಗ್

ತೃಣಮೂಲ ಕಾಂಗ್ರೆಸ್ ನ ಮದನ್ ಮಿತ್ರ ಮತ್ತೆ ಸುದ್ದಿಯಲ್ಲಿದ್ದಾರೆ. ಯಾವುದೇ ವಿವಾದಗಳಿಂದ ಸುದ್ದಿಯಾಗಿಲ್ಲ, ಬದಲಾಗಿ ರ್ಯಾಪ್ ಹಾಡಿನ ಮುಖಾಂತರ ಅವರು ನಿಮ್ಮ ಮುಂದೆ ಬಂದಿದ್ದಾರೆ.

ಹೌದು, ದುರ್ಗಾ ಪೂಜೆಗೆ ಮುಂಚಿತವಾಗಿ ದುರ್ಗಾದೇವಿಯನ್ನು ನೆನಪಿಸಿದ್ದಾರೆ. ʼಇಂಡಿಯಾ ವನ್ನಾ ಹ್ಯಾವ್ ಬೆತಿಯಾʼ ರ್ಯಾಪ್ ಹಾಡಿನ ಮುಖಾಂತರ ಮದನ್ ಮಿತ್ರಾ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ

ವಿಡಿಯೋದಲ್ಲಿ ಮಿತ್ರಾ ಹಲವಾರು ವರ್ಣರಂಜಿತ ಉಡುಪುಗಳನ್ನು ಧರಿಸಿದ್ದಾರೆ. “ನನ್ನ ಹೆಸರು ಗೊತ್ತಿಲ್ಲ….. ನಾನು ಎಂಎಂ, ಎಂಎಂ” ಎಂದು ಹಾಡು ಹಾಡಿದ್ದಾರೆ. ಸದ್ಯ ಈ ಹಾಡಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

ನಿರ್ದೇಶಕ ರಾಜಾ ಚಂದಾ ಅವರು ಹಲವಾರು ಬಾಕ್ಸ್ ಆಫೀಸ್ ಹಿಟ್ ಚಿತ್ರಗಳನ್ನು ಹೊಂದಿದ್ದಾರೆ. ಇದೀಗ ಮಿತ್ರನ ಮೇಲೆ ಈ ಚಿತ್ರವನ್ನು ಮಾಡುತ್ತಿದ್ದಾರೆ.

ಟಿಎಂಸಿಯ ಕಮರತಿ ಶಾಸಕರಾದ ಮಿತ್ರ, ಕಳೆದ ಎರಡು ವರ್ಷಗಳಿಂದ ಅವರ ಜೀವನಚರಿತ್ರೆಗಾಗಿ ನಿರ್ದೇಶಕ ಚಂದಾ ಸಂಪರ್ಕಿಸುತ್ತಿದ್ದಾರಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...