alex Certify JOB ALERT : ರೈಲ್ವೆ ಇಲಾಖೆಯಲ್ಲಿ 9,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಏ.8 ಲಾಸ್ಟ್ ಡೇಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

JOB ALERT : ರೈಲ್ವೆ ಇಲಾಖೆಯಲ್ಲಿ 9,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ, ಅರ್ಜಿ ಸಲ್ಲಿಸಲು ಏ.8 ಲಾಸ್ಟ್ ಡೇಟ್..!

ನವದೆಹಲಿ : ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳೇ ಗಮನಿಸಿ. ರೈಲ್ವೆ ಸಚಿವಾಲಯದಲ್ಲಿ 9,144 ತಂತ್ರಜ್ಞರ ಹುದ್ದೆಗಳ ನೇಮಕಾತಿಗೆ ಅರ್ಜಿ ಪ್ರಕ್ರಿಯೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ.

ಹುದ್ದೆಗಳ ವಿವರ: ಒಟ್ಟು 9,144 ಹುದ್ದೆಗಳು ಖಾಲಿ ಇವೆ. ಈ ಪೈಕಿ 1092 ಹುದ್ದೆಗಳು ಟೆಕ್ನಿಷಿಯನ್ ಗ್ರೇಡ್-1 ಸಿಗ್ನಲ್ ಗೆ ಮೀಸಲಾಗಿವೆ. ಟೆಕ್ನಿಷಿಯನ್ ಗ್ರೇಡ್ 3 ಹುದ್ದೆಗಳು 8,052

ವಯೋಮಿತಿ: ಜುಲೈ 1, 2024ಕ್ಕೆ ಅನ್ವಯವಾಗುವಂತೆ ಟೆಕ್ನಿಷಿಯನ್ ಗ್ರೇಡ್ 1 ಸಿಗ್ನಲ್ ಹುದ್ದೆಗಳಿಗೆ 18 ರಿಂದ 36 ವರ್ಷ. ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 33 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಎಸ್ಸಿ/ಎಸ್ಟಿ, ಒಬಿಸಿ, ಮಾಜಿ ಸೈನಿಕರು/ಅಂಗವಿಕಲರು. ಆಯಾ ವರ್ಗಗಳಿಗೆ ವಯಸ್ಸಿನ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ 500 ರೂ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ತೆಗೆದುಕೊಂಡ ನಂತರ 400 ರೂ.ಗಳನ್ನು ಮರುಪಾವತಿ ಮಾಡಲಾಗುತ್ತದೆ. ಎಸ್ಸಿ/ಎಸ್ಟಿ/ಮಾಜಿ ಸೈನಿಕರು/ಮಹಿಳೆಯರು/ತೃತೀಯ ಲಿಂಗಿಗಳು/ಅಲ್ಪಸಂಖ್ಯಾತರು/ಇಬಿಸಿಗಳು ತಲಾ 250 ರೂ.ಅರ್ಜಿ ಶುಲ್ಕವನ್ನು ಪಾವತಿಸಬೇಕು. ಪರೀಕ್ಷೆಯ ನಂತರ ಈ ಮೊತ್ತವನ್ನು ಮರುಪಾವತಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ಡಾಕ್ಯುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ವೇತನ: ಟೆಕ್ನಿಷಿಯನ್ ಗ್ರೇಡ್ -1 ಸಿಗ್ನಲ್ ಹುದ್ದೆಗಳಿಗೆ, ಏಳನೇ ಸಿಪಿಸಿಯಲ್ಲಿ ಲೆವೆಲ್ -5 ರ ಅಡಿಯಲ್ಲಿ ಆರಂಭಿಕ ವೇತನ 29,200 ರೂ. ಟೆಕ್ನಿಷಿಯನ್ ಗ್ರೇಡ್-3 ಹುದ್ದೆಗಳಿಗೆ ಲೆವೆಲ್-2ರ ಅಡಿಯಲ್ಲಿ ತಲಾ 19,990 ರೂ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 8 ರ ರಾತ್ರಿ 11.59 ರವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ರೈಲ್ವೇ ಇಲಾಖೆಯ ಅಧಿಕೃತ ವೆಬ್ ಸೈಟ್ ವೀಕ್ಷಿಸಬಹುದು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...