alex Certify ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಸಹಾಯಕಿಯರ ಗೌರವ ಸೇವೆಯ ಹುದ್ದೆಗಳಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

18 ರಿಂದ 35 ವರ್ಷದೊಳಗಿನ ಸಾಮಾನ್ಯ ವರ್ಗದವರು ಹಾಗೂ ಕಾರ್ಯಕರ್ತೆಯರ ಹುದ್ದೆಗೆ 18 ರಿಂದ 45 ವರ್ಷದೊಳಗಿನ ವಿಕಲಚೇತನ ವರ್ಗದ ಅರ್ಹ ಸ್ಥಳೀಯ ಅಂದರೆ ಅದೇ ಗ್ರಾಮದ ಮಹಿಳಾ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.  ಕಾರ್ಯಕರ್ತೆ ಹುದ್ದೆಗೆ ಕನಿಷ್ಟ ಎಸ್‍ಎಸ್‍ಎಲ್‍ಸಿ ತೇರ್ಗಡೆಯಾಗಿರಬೇಕು, ಸಹಾಯಕಿ ಹುದ್ದೆಗೆ ಕನಿಷ್ಠ 4ನೇ ತರಗತಿ ತೇರ್ಗಡೆಯಾಗಿದ್ದು, ಗರಿಷ್ಠ 9ನೇ ತರಗತಿ ತೇರ್ಗಡೆಯಾಗಿರಬೇಕು. ಸಂಬಂಧಿಸಿದ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ವಿವಿಧ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆ ಖಾಲಿ ಇರುವ ಗ್ರಾಮ ಹಾಗೂ ಮೀಸಲಾತಿ ವಿವರ ಇಂತಿದೆ.  ಹೆಚ್.ರಾಂಪುರ, ವಡೇರಹಳ್ಳಿ (ಮಿನಿ ಕೇಂದ್ರ), ಬಲ್ಲೂರು, ಲೋಕಿಕೆರೆ-ಎ, ಲೋಕಿಕೆರೆ-ಬಿ, ಬೆಳವನೂರು-ಎ, ಹುಳುಪಿನಕಟ್ಟೆ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆ ಹುದ್ದೆ ಇತರೆ ವರ್ಗಕ್ಕೆ ಮೀಸಲಿದೆ.  ಚಟ್ಟೋಬನಹಳ್ಳಿ ತಾಂಡದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹುದ್ದೆ ಪರಿಶಿಷ್ಟ ಜಾತಿ ಗೆ ಮೀಸಲಿದೆ.

ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಬರುವ  ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಸ್ಥಳ ಹಾಗೂ ಮೀಸಲಾತಿ ವಿವರ ಇಂತಿದೆ.  ಆಜಾದ್‍ನಗರ-ಐ, ಬಿಡಿ ಲೇಔಟ್-ಬಿ, ಎಸ್.ಓ.ಜಿ-ಬಿ, ಮಟ್ಟಿಕಲ್ಲು, ಕಾಡಜ್ಜಿ-ಬಿ, ಹಿಂಡಸಘಟ್ಟ-ಎ, ಬಸವೇಶ್ವರ ನಗರ-ಎ, ನಿಟ್ಟುವಳ್ಳಿ ಹೊಸಬಡಾವಣೆ-ಎ, ಟೀಚರ್ಸ್ ಕಾಲೋನಿ, ಸಿದ್ದನೂರು, ಹೊಸಬಿಸಲೇರಿ, ನಾಗರಸನಹಳ್ಳಿ, ಎಸ್.ಎಸ್.ಎಂ.ನಗರ-ಎ ಬ್ಲಾಕ್-ಡಿ ಹಾಗೂ ಎಸ್.ಎಸ್.ಎಂ.ನಗರ-ಎ ಬ್ಲಾಕ್-ಬಿ, ಅಂಗನವಾಡಿ ಕೇಂದ್ರದಲ್ಲಿನ ಸಹಾಯಕಿಯರ ಹುದ್ದೆ ಇತರೆ ವರ್ಗಕ್ಕೆ ಮೀಸಲಿದೆ.

ಯಲ್ಲಮ್ಮ ಮಿಲ್ ಕ್ವಾಟ್ರಸ್, ಪರಶುರಾಮ್‍ಪುರ, ಹಳೇ ಚಿಕ್ಕನಹಳ್ಳಿ-ಎ, ದೊಡ್ಡ ಓಬಜ್ಜಿಹಳ್ಳಿ, ಇಂದಿರಾನಗರ, ಗಂಗನಕಟ್ಟೆ ಪಿಸಾರಹಟ್ಟಿ, ಶಿವಪುರ, ಜಮ್ಮಾಪುರ, ಹಾಗೂ ಅಮರಪ್ಪನತೋಟ-ಎ ರಲ್ಲಿನ ಸಹಾಯಕಿ ಹುದ್ದೆಗಳು ಪರಿಶಿಷ್ಟ ಜಾತಿಗೆ ಮೀಸಲಿವೆ.  ಕಾಟೇಹಳ್ಳಿ ಮತ್ತು ಮಲ್ಲಾಪುರ ಕೇಂದ್ರದಲ್ಲಿನ ಸಹಾಯಕಿಯರ ಹುದ್ದೆ ಪರಿಶಿಷ್ಟ ಪಂಗಡಕ್ಕೆ ಮೀಸಲಿದೆ.

ಅರ್ಜಿಯನ್ನು ಅರ್ಹ ಅಭ್ಯರ್ಥಿಗಳು ಏ..8 ರಿಂದ ವೆಬ್‍ಸೈಟ್ http://davanagere.nic.in ಮುಖಾಂತರ ಆನ್ ಲೈನ್ ನಲ್ಲಿ ಸಲ್ಲಿಸಬಹುದು. ಮೇ.7 ಸಂಜೆ 5-30 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ದಾವಣಗೆರೆಯ ಶಿಶು ಅಭಿವೃದ್ದಿ ಯೋಜನಾಧಿಕಾರಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...