alex Certify ʼಪದವಿʼ ಹೊಂದಿಲ್ಲದವರೂ ಲಕ್ಷಾಂತರ ರೂ. ಗಳಿಸಲು ಇಲ್ಲಿ ಸಿಗ್ತಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪದವಿʼ ಹೊಂದಿಲ್ಲದವರೂ ಲಕ್ಷಾಂತರ ರೂ. ಗಳಿಸಲು ಇಲ್ಲಿ ಸಿಗ್ತಿದೆ ಅವಕಾಶ

ಯಾವುದೇ ಪದವಿ ಇಲ್ಲದೇ ನಿಮಗೆ ಒಳ್ಳೆಯ ಸಂಬಳವುಳ್ಳ ಕೆಲಸ ಸಿಗೋದು ಕನಸಿನ ಮಾತೇ ಸರಿ. ಆದರೆ ಇಲ್ಲೊಂದು ಉದ್ಯೋಗದಾತರು ಈ ಮಾತಿಗೆ ಸಂಪೂರ್ಣ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ.

ಟಿಕ್​ಟಾಕ್​ ವಿಡಿಯೋವೊಂದರಲ್ಲಿ ಎಲೆನಿ ಎಂಬವರು ಇಂತಹದ್ದೊಂದು ವಿಶೇಷ ಸಂಗತಿಯನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಎಲೆನಿ, ಪದವಿಯನ್ನೇ ಪಡೆಯದವರಿಗೆ ಕೈ ತುಂಬಾ ಸಂಬಳ ನೀಡುವ ಕೆಲಸದ ಬಗ್ಗೆ ವಿವರಣೆ ನೀಡಿದ್ದಾರೆ.

ಇದೊಂದು ಡೇಟಾ ಅನಾಲಿಸ್ಟ್​ ಕೆಲಸವಾಗಿದೆ. ಈ ಕೆಲಸದಲ್ಲಿ ನೀವು ಯಾವುದಾದರೂ ಅಪ್ಲಿಕೇಶನ್​ ಅಥವಾ ಸಾಮಾಜಿಕ ಜಾಲತಾಣ ವೇದಿಕೆಯ ಯಶಸ್ಸನ್ನು ನೀವು ತುಲನೆ ಮಾಡುತ್ತೀರಾ. ಉದಾಹರಣೆಗೆ ನೀವು ಟಿಕ್​ಟಾಕ್​​ನಲ್ಲಿ ಕೆಲಸ ಮಾಡುವುದಾದರೆ ಅಪ್ಲಿಕೇಶನ್​​ನ ಯಾವ ಭಾಗವನ್ನು ಜನರು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ ಹಾಗೂ ಯಾವುದನ್ನು ಜನರು ಇಷ್ಟ ಪಡುತ್ತಿಲ್ಲ ಎಂಬದುರ ಬಗ್ಗೆ ಕಣ್ಣಿಡಬೇಕು.

ಯಾವ ಭಾಗವನ್ನು ಜನರು ಬಳಕೆ ಮಾಡಲು ಆಸಕ್ತಿ ತೋರುತ್ತಿಲ್ಲವೋ ಅದನ್ನು ಜನರು ಬಳಕೆ ಮಾಡುವಂತೆ ಮಾಡಲು ಯಾವ ರೀತಿಯಲ್ಲಿ ಅಪ್ಲಿಕೇಶನ್​ನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ನೀವು ಕಂಪನಿಗೆ ಸಲಹೆಗಳನ್ನು ನೀಡಬೇಕು.

ಈ ಕೆಲಸದ ಇನ್ನೊಂದು ದೊಡ್ಡ ವಿಶೇಷತೆ ಏನೆಂದರೆ ಈ ಉದ್ಯೋಗವನ್ನು ಪಡೆಯಲು ನೀವು ಯಾವುದೇ ಪದವಿಯನ್ನು ಹೊಂದಿರುವ ಅವಶ್ಯಕತೆ ಇರೋದಿಲ್ಲ. ಆದರೆ ಈ ಕೆಲಸವನ್ನು ಹೊಂದುವ ವ್ಯಕ್ತಿಯು 61 ಲಕ್ಷ ರೂಪಾಯಿಗಳವರೆಗೆ ಸಂಪಾದನೆ ಮಾಡಬಹುದಾಗಿದೆ. ಡೇಟಾ ಅನಾಲಿಸ್ಟ್​ ಕಡಿಮೆ ಎಂದರೂ 33 ಲಕ್ಷ ರೂಪಾಯಿಗಳನ್ನಂತೂ ಗಳಿಸುತ್ತಾರೆ. ಈ ಕೆಲಸಕ್ಕಾಗಿ ನೀವು ಉತ್ತಮ ಕೌಶಲ್ಯವನ್ನು ಹೊಂದಿದ್ದರೆ ಅಷ್ಟೇ ಸಾಕು ಎಂದು ಎಲಾನಿ ವಿವರಿಸಿದ್ದಾರೆ.

ಇದೊಂದು ಅನಾಲಿಸ್ಟ್​ ಕೆಲಸವಾದ್ದರಿಂದ ಇಲ್ಲಿ ಯಾವುದೇ ಪದವಿಯ ಅಗತ್ಯ ಇರೋದಿಲ್ಲ. ಉತ್ತಮ ಸಂವಹನ ಕೌಶಲ್ಯವೊಂದೇ ಈ ಕೆಲಸಕ್ಕೆ ಬೇಕಾದ ಪ್ರಮುಖ ಅಸ್ತ್ರ ಎಂದು ಎಲಾನಿ ಹೇಳಿದ್ದಾರೆ.

ಕಂಪನಿಗಳು ಈ ಕೆಲಸಕ್ಕೆ ಉದ್ಯೋಗಿಗಳನ್ನು 2020ರಲ್ಲೇ ನೇಮಿಸಿಕೊಳ್ಳಲು ಮುಂದಾಗಿದ್ದವು. ಆದರೆ ಕೊರೊನಾ ಕಾರಣದಿಂದ ಈ ಖರ್ಚನ್ನು ಹೊಂದಿಸಲು ಕಂಪನಿಗಳಿಗೆ ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷದಲ್ಲಿ ಈ ಕೆಲಸಕ್ಕೆ ನೇಮಕಾತಿ ನಡೆಯಲಿದೆ. ಕಾಲೇಜಿಗೆ ಹೋಗಲು ಬಯಸದೇ ಇರುವವರಿಗೆ ನಿಜಕ್ಕೂ ಇದೊಂದು ಉತ್ತಮ ಅವಕಾಶವೇ ಸರಿ ಎಂದು ಎಲಾನಿ ವಿವರಿಸಿದ್ದಾರೆ.

girls-face
girl-on-camera
job-recruiter

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...