alex Certify ಕುಣಿದು ಕುಪ್ಪಳಿಸಿದ ಶಿವಸೇನೆ ಬಂಡಾಯ ಶಾಸಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಣಿದು ಕುಪ್ಪಳಿಸಿದ ಶಿವಸೇನೆ ಬಂಡಾಯ ಶಾಸಕರು

ಏಕನಾಥ್​ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆಯೇ ಶಿವಸೇನೆಯ ಬಂಡಾಯ ಶಾಸಕರು ಟೇಬಲ್​ ಮೇಲೆ ಡ್ಯಾನ್ಸ್​ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ.

ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್​ ಅವರು ಶಿವಸೇನೆ ನಾಯಕ ಏಕನಾಥ್​ ಶಿಂಧೆರನ್ನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ತಕ್ಷಣವೇ ಸೇನೆಯ ಎಲ್ಲಾ ಬಂಡಾಯ ಶಾಸಕರು ಸಂತೋಷದಿಂದ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದರು.

ಆಲಿಯಾ ಗರ್ಭದಿಂದ ಸುಶಾಂತ್​ ಸಿಂಗ್​ ಪುನರ್ಜನ್ಮ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ಬಂಡಾಯ ಶಾಸಕರು ಮರಾಠಿ ಹಾಡನ್ನು ಹಾಡುತ್ತಿರುವುದು ವೀಡಿಯೊ ಹೈಲೈಟ್​ ಎನಿಸಿದೆ. ಒಬ್ಬರು ಟೇಬಲ್​ ಮೇಲೆ ನೃತ್ಯ ಮಾಡಲು ಪ್ರಾರಂಭಿಸಿದರು. ಮಹಾರಾಷ್ಟ್ರ ತನ್ನ ನೂತನ ಮುಖ್ಯಮಂತ್ರಿಯಾಗಿ ಫಡ್ನವಿಸ್​ ಅವರನ್ನು ಸ್ವಾಗತಿಸಲು ಸಿದ್ಧವಾಗಿದ್ದರು, ಆದರೆ, ಶಿಂಧೆ ಸಿಎಂ ಎಂದು ಘೋಷಿಸಿದಾಗ ಬಂಡಾಯ ಶಾಸಕರು ತಮ್ಮ ಉತ್ಸಾಹ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗಲೇ ಇಲ್ಲ.

ಫಡ್ನವಿಸ್​ ಮತ್ತು ಶಿಂಧೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆಯಿತು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಪಡೆಯಲು 144 ಶಾಸಕರ ಬೆಂಬಲದ ಅಗತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...