alex Certify ಆಲಿಯಾ ಗರ್ಭದಿಂದ ಸುಶಾಂತ್​ ಸಿಂಗ್​ ಪುನರ್ಜನ್ಮ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಲಿಯಾ ಗರ್ಭದಿಂದ ಸುಶಾಂತ್​ ಸಿಂಗ್​ ಪುನರ್ಜನ್ಮ…? ಇಲ್ಲಿದೆ ವೈರಲ್‌ ಸುದ್ದಿ ಹಿಂದಿನ ಅಸಲಿ ಸತ್ಯ

ನಟಿ ಆಲಿಯಾ ಭಟ್ ಹಾಗೂ ನಟ ರಣ​​ಬೀರ್​ ಕಪೂರ್​ ಬಾಲಿವುಡ್​ನ ಹಾಟ್ ​ಫೇವರೇಟ್​ ಜೋಡಿ. ಇವರಿಬ್ಬರೂ ಜಸ್ಟ್ ಎರಡುವರೆ ತಿಂಗಳ ಹಿಂದಷ್ಟೆ ಸತಿ-ಪತಿಗಳಾಗಿ ಗ್ರಹಸ್ಥಾಶ್ರಮಕ್ಕೆ ಕಾಲಿಟ್ಟಿದ್ದರು. ಈಗ ಇದೇ ಜೋಡಿ ಅಭಿಮಾನಿಗಳಿಗೆ ಗುಡ್​​ನ್ಯೂಸ್​ ಕೊಟ್ಟಿದ್ದಾರೆ. ಆಲಿಯಾ ಭಟ್ ಮತ್ತು ರಣ್​​ಬೀರ್​ ಕಪೂರ್​ ಅಪ್ಪ-ಅಮ್ಮ ಆಗುತ್ತಿದ್ದಾರೆ ಅನ್ನೋ ಸುದ್ದಿ ಅದು.

ಸೋಶಿಯಲ್ ಮೀಡಿಯಾದಲ್ಲಿ ಖುದ್ದು ಆಲಿಯಾ ಭಟ್ ಈ​ ನ್ಯೂಸ್ ​​ನ್ನ ಪಬ್ಲಿಕ್ ಮಾಡಿದ್ದರು. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕೆಲ ಕಿಡಿಗೇಡಿಗಳು, ಆಲಿಯಾಭಟ್ ಗರ್ಭಧಾರಣೆಗೂ ಹಾಗೂ ಸುಶಾಂತ್ ಸಿಂಗ್ ರಜಪೂತ್ ಅವರ ಪುನರ್ಜನ್ಮದೊಂದಿಗೆ ಲಿಂಕ್​ ಮಾಡಿದ್ದಾರೆ. ಇದಕ್ಕಾಗಿ ಜೀ ನ್ಯೂಸ್ ಅನ್ನೋ ಖಾಸಗಿ ಸುದ್ದಿವಾಹಿನಿಯ ಹೆಸರನ್ನ ಬಳಸಿಕೊಳ್ಳಲಾಗಿದೆ. ಜೀ ನ್ಯೂಸ್ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ಫೋಟೋದಲ್ಲಿ ಆಲಿಯಾಭಟ್ ಮಗುವಿನ ರೂಪದಲ್ಲಿ ಸುಶಾಂತ್ ಪುನರ್ಜನ್ಮ ಎಂದು ಬರೆಯಲಾಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಸ್ಕ್ರೀನ್​ಶಾಟ್ ನ​​ಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋ ಮತ್ತು ಜೀ ನ್ಯೂಸ್ ಲೋಗೋ ಇದೆ. ಆದರೆ Zee News ಗೂ ಈ ಸ್ಕ್ರೀನ್​ಶಾಟ್​ಗೂ ಯಾವುದೇ ಸಂಬಂಧವಿಲ್ಲ ಅಂತ ಕ್ಲಿಯರ್​​ಕಟ್​​ ಆಗಿ ಹೇಳಿದೆ. ಜೀ ನ್ಯೂಸ್ ಅಂತಹ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡಿಲ್ಲ. ಇದು ಸಂಪೂರ್ಣ ನಕಲಿ ಸ್ಕ್ರೀನ್​ಶಾಟ್​ ಆಗಿದ್ದು. ಯಾವುದೋ ದುರುದ್ದೇಶದಿಂದ ಫೋಟೋಶಾಪ್ ಮಾಡಿ ಈ ಸುದ್ದಿ ಮಾಡಲಾಗಿದೆ ಎಂದು ಅಂದಾಜು ಮಾಡಲಾಗಿದೆ.

ಈ ನಕಲಿ ಸ್ಕ್ರೀನ್​ಶಾಟ್​​ನಲ್ಲಿ ಜೀ ನ್ಯೂಸ್ ನ ಯಾವ ಕಾರ್ಯಕ್ರಮದ ಫೋಟೋ ಬಳಸಲಾಗಿದೆಯೋ ಆ ಶೋವನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಜೀ ನ್ಯೂಸ್​ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಕಿಡಿಗೇಡಿಗಳ ಈ ಕೃತ್ಯದಿಂದ ಜೀ ನ್ಯೂಸ್ ಮುಜುಗರ ಪಡುವ ಹಾಗಾಗಿದೆ. ಇನ್ನು ಅಪ್ಪ-ಅಮ್ಮ ಆಗುವ ಖುಷಿಯಲ್ಲಿರುವ ಆಲಿಯಾ ಭಟ್ ಮತ್ತು ರಣಬೀರ್​ ಕಪೂರ್​ ಈ ಫೇಕ್ ನ್ಯೂಸ್ ಬಗ್ಗೆ ತಲೆಯೇ ಕೆಡಿಸಿಕೊಳ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...