
ಏಕನಾಥ್ ಶಿಂಧೆ ಮಹಾರಾಷ್ಟ್ರದ ನೂತನ ಸಿಎಂ ಎಂದು ಘೋಷಣೆಯಾಗುತ್ತಿದ್ದಂತೆಯೇ ಶಿವಸೇನೆಯ ಬಂಡಾಯ ಶಾಸಕರು ಟೇಬಲ್ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಶಿವಸೇನೆ ನಾಯಕ ಏಕನಾಥ್ ಶಿಂಧೆರನ್ನು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿದ ತಕ್ಷಣವೇ ಸೇನೆಯ ಎಲ್ಲಾ ಬಂಡಾಯ ಶಾಸಕರು ಸಂತೋಷದಿಂದ ಕುಣಿದು ಕುಪ್ಪಳಿಸಲು ಪ್ರಾರಂಭಿಸಿದರು.
ಆಲಿಯಾ ಗರ್ಭದಿಂದ ಸುಶಾಂತ್ ಸಿಂಗ್ ಪುನರ್ಜನ್ಮ…? ಇಲ್ಲಿದೆ ವೈರಲ್ ಸುದ್ದಿ ಹಿಂದಿನ ಅಸಲಿ ಸತ್ಯ
ಬಂಡಾಯ ಶಾಸಕರು ಮರಾಠಿ ಹಾಡನ್ನು ಹಾಡುತ್ತಿರುವುದು ವೀಡಿಯೊ ಹೈಲೈಟ್ ಎನಿಸಿದೆ. ಒಬ್ಬರು ಟೇಬಲ್ ಮೇಲೆ ನೃತ್ಯ ಮಾಡಲು ಪ್ರಾರಂಭಿಸಿದರು. ಮಹಾರಾಷ್ಟ್ರ ತನ್ನ ನೂತನ ಮುಖ್ಯಮಂತ್ರಿಯಾಗಿ ಫಡ್ನವಿಸ್ ಅವರನ್ನು ಸ್ವಾಗತಿಸಲು ಸಿದ್ಧವಾಗಿದ್ದರು, ಆದರೆ, ಶಿಂಧೆ ಸಿಎಂ ಎಂದು ಘೋಷಿಸಿದಾಗ ಬಂಡಾಯ ಶಾಸಕರು ತಮ್ಮ ಉತ್ಸಾಹ ಮುಚ್ಚಿಟ್ಟುಕೊಳ್ಳಲು ಸಾಧ್ಯವಾಗಲೇ ಇಲ್ಲ.
ಫಡ್ನವಿಸ್ ಮತ್ತು ಶಿಂಧೆ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆಯಿತು.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಪಡೆಯಲು 144 ಶಾಸಕರ ಬೆಂಬಲದ ಅಗತ್ಯವಿದೆ.