alex Certify ಇಂದು ಬಿಡುಗಡೆಯಾಗುತ್ತಿದೆ ಬಹುನಿರೀಕ್ಷಿತ ರಿಯಲ್‍ ಮಿ ಪ್ಯಾಡ್ ಟ್ಯಾಬ್ಲೆಟ್, ಬೆಲೆ ಎಷ್ಟು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗುತ್ತಿದೆ ಬಹುನಿರೀಕ್ಷಿತ ರಿಯಲ್‍ ಮಿ ಪ್ಯಾಡ್ ಟ್ಯಾಬ್ಲೆಟ್, ಬೆಲೆ ಎಷ್ಟು ಗೊತ್ತಾ…?

ಚೀನಾ ಕಂಪನಿ ಆದರೂ ಕೂಡ ಸ್ಮಾರ್ಟ್‍ಫೋನ್ ಮತ್ತು ಸಾಧನಗಳ ಗುಣಮಟ್ಟದಲ್ಲಿ ಭಾರತೀಯರ ಮನಗೆದ್ದಿರುವ ರಿಯಲ್‍ ಮಿ ಕಂಪನಿಯು ಹೊಸ ಟ್ಯಾಬ್ಲೆಟ್ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ಮುಗಿಸಿದೆ. ಸೆ. 9ರಂದು 10.4 ಇಂಚಿನ, 2000 * 1200 ಪಿಕ್ಸಲ್‍ಗಳಷ್ಟು ರೆಸಲ್ಯೂಷನ್‍ಗಳ ರಿಯಲ್‍ ಮಿ ಪ್ಯಾಡ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಭಾರತಕ್ಕೆ ಬಂತು ಎಲೆಕ್ಟ್ರಿಕ್ ಟೂತ್ ಬ್ರಷ್

ಆಪಲ್‍ನ ಐಪ್ಯಾಡ್ ಏರ್‍ನಿಂದ ಸ್ಫೂರ್ತಿ ಪಡೆದು 7100 ಎಂಎಎಚ್ ಸಾಮರ್ಥ್ಯದ ಬ್ಯಾಟರಿ, ಒಟ್ಟಾರೆ ವಿನ್ಯಾಸವನ್ನು ರೂಪಿಸಲಾಗಿದೆ. ಈ ರಿಯಲ್‍ ಮಿ ಪ್ಯಾಡ್‍ನ ದಪ್ಪ ಕೇವಲ 6.9 ಮಿ.ಮೀ ಮಾತ್ರವಂತೆ.

4ಜಿ ರ್ಯಾಮ್, 2ಗಿಗಾ ಹರ್ಟ್ಜ್ ಡುಯಲ್ ಕೋರ್ ಪ್ರೊಸೆಸರ್, ಹಿಂಬದಿ-ಮುಂಬದಿಯಲ್ಲಿ 8 ಮೆಗಾ ಪಿಕ್ಸಲ್ ಕ್ಯಾಮೆರಾಗಳನ್ನು ಟ್ಯಾಬ್ಲೆಟ್ ಹೊಂದಿದೆ. ಕಂಪನಿಯ ಮೂಲಗಳ ಪ್ರಕಾರ ಟ್ಯಾಬ್ಲೆಟ್‍ನ ಬೆಲೆ 22,999 ರೂ.ಗೆ ನಿಗದಿಯಾಗುವ ಸಾಧ್ಯತೆ ಹೆಚ್ಚಿದೆ.

ಇದರೊಂದಿಗೆ ರಿಯಲ್‍‌ ಮಿ ಕಂಪನಿಯು 8ಎಸ್ ಸ್ಮಾರ್ಟ್‍ಫೋನ್ ಕೂಡ ಬಿಡುಗಡೆ ಮಾಡಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...