alex Certify ಮೃತಪಟ್ಟಿದ್ದಾನೆ ಎಂದು ತಿಳಿದು ಶವದ ಮರಣೋತ್ತರ ಪರೀಕ್ಷೆ ವೇಳೆ ಕುಟುಂಬಕ್ಕೆ ಕರೆ ಮಾಡಿದ ವ್ಯಕ್ತಿಯಿಂದ ಶಾಕಿಂಗ್ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತಪಟ್ಟಿದ್ದಾನೆ ಎಂದು ತಿಳಿದು ಶವದ ಮರಣೋತ್ತರ ಪರೀಕ್ಷೆ ವೇಳೆ ಕುಟುಂಬಕ್ಕೆ ಕರೆ ಮಾಡಿದ ವ್ಯಕ್ತಿಯಿಂದ ಶಾಕಿಂಗ್ ಮಾಹಿತಿ

ವಿಜಯವಾಡ: ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಸುಟ್ಟ ದೇಹವನ್ನು ಸಾಗಿಸಿದ ಗಂಟೆಗಳ ನಂತರ ‘ಮೃತ’ ವ್ಯಕ್ತಿಯ ಕುಟುಂಬಕ್ಕೆ ಬದುಕಿರುವುದಾಗಿ ಕರೆ ಬಂದಿದ್ದು, ಆಘಾತಕ್ಕೊಳಗಾಗಿದೆ.

ರಂಗಂಪೇಟೆ ಪೊಲೀಸ್ ಠಾಣೆಯ ಸಬ್ ಇನ್ಸ್‌ ಪೆಕ್ಟರ್ ಪಿ. ವಿಜಯ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ರಂಗಂಪೇಟೆ ಮಂಡಲದ ವೀರಂಪಲೆಮ್‌ ಗದ್ದೆಯಲ್ಲಿ ವ್ಯಕ್ತಿಯ ಸುಟ್ಟ ದೇಹ ಪತ್ತೆಯಾಗಿತ್ತು. ಜನವರಿ 26 ರಂದು ಬೆಳಿಗ್ಗೆ ಗ್ರಾಮಸ್ಥರು ಧಾನ್ಯದ ವ್ಯಾಪಾರಿ ಕೇತಮಲ್ಲ ಪೂಸಯ್ಯ ಎಂಬುವವರ ಒಡೆತನದ ಕೃಷಿ ಕ್ಷೇತ್ರದ ವಿದ್ಯುತ್ ಟ್ರಾನ್ಸ್‌ ಫಾರ್ಮರ್ ಬಳಿ ಸಂಪೂರ್ಣವಾಗಿ ಸುಟ್ಟ ಶವ ಕಂಡು ಮಾಹಿತಿ ನೀಡಿದ್ದಾರೆ. ಮೃತದೇಹದ ಬಳಿ ಪೂಸಯ್ಯನ ಪಾದರಕ್ಷೆಗಳು ಇದ್ದ ಕಾರಣ, ಗ್ರಾಮಸ್ಥರು ಅವರನ್ನು ಕೊಲೆ ಮಾಡಲಾಗಿದೆ ಎಂದು ಭಾವಿಸಿದ್ದಾರೆ.

ಕೂಡಲೇ ಗ್ರಾಮಸ್ಥರು ಪೊಲೀಸರಿಗೆ ಹಾಗೂ ಪೂಸಯ್ಯನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸ್ ತಂಡ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದೆ. ಕುಟುಂಬದವರು ಕಣ್ಣೀರಿಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಯುತ್ತಿರುವಾಗ, ಪೂಸಯ್ಯನ ಕುಟುಂಬದವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದೆ. ಸ್ವತಃ ಪೂಸಯ್ಯ ಅವರೇ ಮಾತನಾಡಿ, ಜೀವಂತವಾಗಿದ್ದೇನೆ ಎಂದು ತಿಳಿಸಿ, ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾರೆ. ಅವರ ಸಂಬಂಧಿಕರು ನೀಡಿದ ವಿಳಾಸಕ್ಕೆ ಧಾವಿಸಿದಾಗ ಥಳಿಸಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ಅವರು ಅನುಭವಿಸಿದ ಸಂಕಟವನ್ನು ವಿವರಿಸಿದ ಪೂಸಯ್ಯ ಅವರು, ಗುರುವಾರ ರಾತ್ರಿ ತನ್ನ ಜಮೀನಿನಲ್ಲಿ ಮೂರು ಅಪರಿಚಿತ ಯುವಕರು ವ್ಯಕ್ತಿಯೊಬ್ಬನ ದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದನ್ನು ನೋಡಿದೆ. ಅವರನ್ನು ತಡೆಯಲು ಮುಂದಾದಾಗ ಹಿಡಿದು ಹಲ್ಲೆ ನಡೆಸಿದ್ದಾರೆ. ಮೂವರು ಆತನ ಪಾದರಕ್ಷೆಗಳನ್ನು ಶವದ ಬಳಿ ಇಟ್ಟು ಆಟೋದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ಅವರು ಥಳಿಸುವಾಗ ಪ್ರಜ್ಞೆ ಕಳೆದುಕೊಂಡರು. ನಂತರ ಎಚ್ಚರಗೊಂಡು ನೋಡಿದಾಗ ರಾಜಮಹೇಂದ್ರವರಂ ಗ್ರಾಮಾಂತರ ಮಂಡಲದ ಪಿಡಿಂಗೊಯ್ಯ ಸಮೀಪದ ಕೃಷಿ ಗದ್ದೆಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೂಸಯ್ಯ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...