alex Certify ಬ್ಯಾಂಕ್ ಗ್ರಾಹಕರಿಗೆ RBI ಮುಖ್ಯ ಮಾಹಿತಿ: ನಿಮ್ಮ ಎಲ್ಲ ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಅವಧಿ, CVV ನೆನಪಿಟ್ಟುಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ RBI ಮುಖ್ಯ ಮಾಹಿತಿ: ನಿಮ್ಮ ಎಲ್ಲ ಡೆಬಿಟ್, ಕ್ರೆಡಿಟ್ ಕಾರ್ಡ್ ಸಂಖ್ಯೆ, ಅವಧಿ, CVV ನೆನಪಿಟ್ಟುಕೊಳ್ಳಿ

ಭಾರತೀಯ ರಿಸರ್ವ್ ಬ್ಯಾಂಕ್(RBI) ಜನವರಿ 2022 ರಿಂದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದರೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ಬಾರಿ ವಹಿವಾಟು ನಡೆಸಲು ಮುಂದಾದಾಗ ತಮ್ಮ 16-ಅಂಕಿಯ ಕಾರ್ಡ್ ಸಂಖ್ಯೆಯನ್ನು ಪಂಚ್ ಮಾಡಬೇಕಾಗುತ್ತದೆ.

16-ಅಂಕಿಗಳ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟದ ಕೆಲಸ. ವಿಶೇಷವಾಗಿ, ಒಂದಕ್ಕಿಂತ ಹೆಚ್ಚು ಕಾರ್ಡ್ ಬಳಸುವ ಜನರಿಗೆ ಇದು ಕಷ್ಟವೇ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್  ನೀವು ಅದನ್ನು ನೆನಪಿಟ್ಟುಕೊಳ್ಳಬೇಕೆಂದು ತಿಳಿಸಿದೆ. ಅದರೊಂದಿಗೆ ಮುಕ್ತಾಯ ದಿನಾಂಕ ಮತ್ತು ಸಿವಿವಿ ಕೂಡ ನೆನಪಿಟ್ಟುಕೊಳ್ಳಬೇಕಿದೆ. ಆನ್‌ಲೈನ್ ವ್ಯಾಪಾರಿಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಪಾವತಿ ಸಂಗ್ರಾಹಕರು ಗ್ರಾಹಕರ ಕಾರ್ಡ್ ವಿವರಗಳನ್ನು ಆನ್‌ಲೈನ್‌ನಲ್ಲಿ ಅಥವಾ ಅವರ ಸರ್ವರ್‌ಗಳು ಅಥವಾ ಡೇಟಾಬೇಸ್‌ಗಳಲ್ಲಿ ಸಂಗ್ರಹಿಸುವುದನ್ನು ತಡೆಯಲು ಇದೆಲ್ಲವೂ ಅಗತ್ಯವೆನ್ನಲಾಗಿದೆ.

ವರದಿಗಳ ಪ್ರಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಡೇಟಾ ಸಂಗ್ರಹಣಾ ನೀತಿಯ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಮುಂದಾಗಿದೆ. 2022 ರ ಜನವರಿಯಿಂದ ಆರಂಭಗೊಳ್ಳುವ ಹೊಸ ನಿಯಮಕ್ಕೆ ಸಂಬಂಧಿಸಿದಂತೆ ಪಾವತಿ ಗೇಟ್‌ ವೇ ಕಂಪನಿಗಳು ಮಾಡಿದ ಪ್ರಸ್ತಾವನೆಯನ್ನು ಆರ್‌ಬಿಐ ತಿರಸ್ಕರಿಸಿದೆ.

ಪರಿಷ್ಕೃತ ನಿಯಮಾವಳಿಗಳು ಪಾವತಿ ಅಗ್ರಿಗೇಟರ್‌ಗಳು, ಇ-ಕಾಮರ್ಸ್ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ವ್ಯಾಪಾರಿಗಳು ಅಮೆಜಾನ್‌ನಿಂದ ಗೂಗಲ್ ಪೇ, ಪೇಟಿಎಂನಿಂದ ನೆಟ್‌ಫ್ಲಿಕ್ಸ್‌ವರೆಗೆ ಗ್ರಾಹಕರ ಕಾರ್ಡ್‌ನ ಮಾಹಿತಿಯನ್ನು ತಮ್ಮ ಸರ್ವರ್ ಅಥವಾ ಡೇಟಾಬೇಸ್‌ನಲ್ಲಿ ಸಂಗ್ರಹಿಸುವುದನ್ನು ತಡೆಯುತ್ತದೆ.

ಬ್ಯಾಂಕ್ ಗ್ರಾಹಕರು ಮತ್ತು ಸಂಗ್ರಾಹಕರ ನಡುವಿನ ಪ್ರಮುಖ ಸಂಪರ್ಕಕಾರನಾಗಿ ಇದು ಕಾರ್ಯನಿರ್ವಹಿಸುತ್ತದೆ.

ಇದರರ್ಥ ಪಾವತಿ ಮಾಡಲು ನಿಮ್ಮ CVV ಅನ್ನು ನಮೂದಿಸುವುದಕ್ಕಿಂತ ಬದಲಾಗಿ, ಗ್ರಾಹಕರು ನಿಮ್ಮ ಎಲ್ಲಾ ಕಾರ್ಡ್ ವಿವರಗಳನ್ನು ನಮೂದಿಸಬೇಕು-ಹೆಸರು, 16-ಅಂಕಿಯ ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕ, CVV-ಪ್ರತಿ ಬಾರಿ ಅವರು ಆನ್‌ಲೈನ್ ಪಾವತಿ ಮಾಡಲು ಬಯಸಿದಾಗ ನಮೂದಿಸಬೇಕಿದೆ.

ಇದು ಅನುಕೂಲವಾಗಿದ್ದರೂ, ನಿಧಾನವಾಗುತ್ತದೆ. ಆದರೆ ಈ ಬದಲಾವಣೆಯ ಗುರಿ ಕಾರ್ಡ್ ಮಾಹಿತಿಯನ್ನು ಭದ್ರಪಡಿಸುವುದು ಮತ್ತು ಪಾವತಿ ಆಪರೇಟರ್‌ಗಳು ಸಿಸ್ಟಂನಲ್ಲಿ ಡೇಟಾವನ್ನು ಸಂಗ್ರಹಿಸುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳುವುದಾಗಿದೆ.

ಭಾರತದ ಸೆಂಟ್ರಲ್ ಬ್ಯಾಂಕ್ ಮೂರನೇ ವ್ಯಕ್ತಿಗಳು ಕಾರ್ಡ್ ವಿವರಗಳನ್ನು ಸಂಗ್ರಹಿಸಲು ಬಿಡದಿರುವುದು ವಂಚನೆ ಮತ್ತು ಹಣಕಾಸಿನ ಕಳ್ಳತನದ ಹೆಚ್ಚುವರಿ ಅಪಾಯವನ್ನು ತಗ್ಗಿಸುವುದು ಎಂದು ಅಭಿಪ್ರಾಯಪಟ್ಟಿದೆ.

ಆದಾಗ್ಯೂ, ಫೆಬ್ರವರಿಯಲ್ಲಿ, ಫ್ಲಿಪ್‌ಕಾರ್ಟ್, ಅಮೆಜಾನ್, ನೆಟ್‌ಫ್ಲಿಕ್ಸ್, ಮೈಕ್ರೋಸಾಫ್ಟ್ ಮತ್ತು ಜೊಮಾಟೊಗಳಂತಹ 25 ಗ್ರಾಹಕರ ಅಂತರ್ಜಾಲ ಕಂಪನಿಗಳ ಗುಂಪು ಕೂಡ ಭಾರತದ ಕೇಂದ್ರೀಯ ಬ್ಯಾಂಕ್‌ಗೆ ಪತ್ರ ಬರೆದಿದೆ. ಈ ನಿಯಮಗಳು ಗ್ರಾಹಕರ ಆನ್‌ಲೈನ್ ಪಾವತಿ ಅನುಭವವನ್ನು ತೀವ್ರವಾಗಿ ಅಡ್ಡಿಪಡಿಸುತ್ತದೆ ಎಂದು ಅವರು ವಾದಿಸಿದ್ದಾರೆ. ಇದಲ್ಲದೆ, ಇದು ವಂಚನೆಯ ಅಪಾಯದ ಮೌಲ್ಯಮಾಪನದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.

ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಸಂಖ್ಯೆ ಮಾಹಿತಿ ಏಕೆ ನೆನಪಿಟ್ಟುಕೊಳ್ಳಬೇಕು?

ಭಾರತೀಯ ರಿಸರ್ವ್ ಬ್ಯಾಂಕ್  ಜನವರಿ 2022 ರಿಂದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದರೆ(ನಿರೀಕ್ಷೆಯಂತೆ) ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಪ್ರತಿ ಬಾರಿ ವಹಿವಾಟು ನಡೆಸಲು ಮುಂದಾದಾಗ ಅವರ 16 ಅಂಕಿಗಳ ಕಾರ್ಡ್ ಸಂಖ್ಯೆಯನ್ನು ಪಂಚ್ ಮಾಡಬೇಕಾಗುತ್ತದೆ.

ನೀವು ಇದನ್ನು ವ್ಯಾಪಾರಿ ವೆಬ್‌ಸೈಟ್ ಅಥವಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡುತ್ತಿರಲಿ ಎಲ್ಲಾ ಆನ್‌ಲೈನ್ ಪಾವತಿ ಪ್ಲಾಟ್‌ಫಾರ್ಮ್‌ಗಳಿಗೆ ಇದು ಅನ್ವಯವಾಗುತ್ತದೆ. ಇದು ಒಂದಕ್ಕಿಂತ ಹೆಚ್ಚು ಕಾರ್ಡ್ ಹೊಂದಿರುವ ಗ್ರಾಹಕರಿಗೆ ಬೇಸರವಾಗುವಂತೆ ಮಾಡಬಹುದು. ಆದರೆ ಸುರಕ್ಷತೆ ಮತ್ತು ಡೇಟಾ ಭದ್ರತೆಯ ಉದ್ದೇಶ ಇದರ ಹಿಂದಿದೆ ಎನ್ನುವುದು ಮುಖ್ಯವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...