alex Certify ಆಫ್‌ ಲೈನ್‌ ಡಿಜಿಟಲ್ ಪಾವತಿ ಮಾಡುವ‌ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಫ್‌ ಲೈನ್‌ ಡಿಜಿಟಲ್ ಪಾವತಿ ಮಾಡುವ‌ ಮುನ್ನ ನಿಮಗೆ ತಿಳಿದಿರಲಿ ಈ ಬಹುಮುಖ್ಯ ಮಾಹಿತಿ

ಪ್ರಾಯೋಗಿಕ ರೂಪದಲ್ಲಿ 2020ರ ಸೆಪ್ಟೆಂಬರ್‌ನಿಂದ 2021ರ ಜೂನ್‌ವರೆಗೆ ದೇಶಾದ್ಯಂತ ಜಾರಿ ಮಾಡಲಾಗಿದ್ದ ಅಂತರ್ಜಾಲ ಸಂಪರ್ಕ ರಹಿತ ಡಿಜಿಟಲ್‌ ಪಾವತಿ ವ್ಯವಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌.ಬಿ.ಐ.) ನಿಯಂತ್ರಣ ಹೇರಿದೆ. ಇನ್ಮುಂದೆ, ಆಫ್‌ಲೈನ್‌ ಡಿಜಿಟಲ್‌ ಪಾವತಿಯ ಪ್ರತಿ ವಹಿವಾಟಿಗೆ ಗರಿಷ್ಠ 200 ರೂ. ಮಾತ್ರವೇ ವರ್ಗಾಯಿಸಬಹುದು.

ಪ್ರತಿ ಬ್ಯಾಂಕ್‌ ಖಾತೆಯಿಂದ ಒಟ್ಟಾರೆಯಾಗಿ 2000 ರೂ. ಮೊತ್ತದವರೆಗೆ ಮಾತ್ರವೇ ವಹಿವಾಟು ನಡೆಸಬಹುದಾಗಿದೆ.

ಎರಡನೇ ಟೆಸ್ಟ್‌ನಲ್ಲಿ ಅಯ್ಯರ್‌ ಬದಲಿಗೆ ವಿಹಾರಿ ಆಯ್ಕೆ ಮಾಡಿದ್ದರ ಹಿಂದಿದೆ ಈ ಕಾರಣ

ಈ ಆಫ್‌ಲೈನ್‌ ಹಣ ವರ್ಗಾವಣೆಗೆ ಹೆಚ್ಚುವರಿ ಅಧಿಕೃತ ಅನುಮೋದನೆ ಬೇಕಿಲ್ಲ ಹಾಗೂ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳು, ವ್ಯಾಲೆಟ್‌, ಮೊಬೈಲ್‌ ಸಾಧನಗಳಿಂದ ನಡೆಸಲಾಗುವ ಕಾರಣ ಅಕ್ರಮವಾಗಿ ಬಳಕೆಯನ್ನು ನಿಯಂತ್ರಿಸಲು ಆರ್‌.ಬಿ.ಐ. ವತಿಯಿಂದ ಪ್ರತಿ ವಹಿವಾಟಿಗೆ ಮಿತಿಯನ್ನು ಹೇರಲಾಗಿದೆ.

ಇನ್ನು, ಖಾತೆಯಲ್ಲಿನ ಬ್ಯಾಲೆನ್ಸ್‌ ತಿಳಿಯಬೇಕಿದ್ದಲ್ಲಿಆನ್‌ಲೈನ್‌ ಅಥವಾ ಇಂಟರ್‌ನೆಟ್‌ ಸೇವೆಯನ್ನು ಬಳಸುವುದು ಕಡ್ಡಾಯವಾಗಿದೆ. ಗ್ರಾಹಕರಿಂದ ಸೂಕ್ತ ರೀತಿಯಲ್ಲಿ ಅಧಿಕೃತ ಒಪ್ಪಿಗೆ ಪತ್ರವನ್ನು ಪಡೆಯುವ ನಂತರವಷ್ಟೇ ಅವರ ಖಾತೆಯನ್ನು ಆಫ್‌ಲೈನ್‌ ಡಿಜಿಟಲ್‌ ಪಾವತಿಗೆ ಬಳಸಲು ಅವಕಾಶವಿದೆ. ಈ ಬಗ್ಗೆ ಎಲ್ಲ ಬ್ಯಾಂಕ್‌ಗಳಿಗೆ ಆರ್‌.ಬಿ.ಐ. ಸುತ್ತೋಲೆ ಮೂಲಕ ಖಡಕ್‌ ಸೂಚನೆ ರವಾನಿಸಿದೆ.

ದೇಶದ ಕೆಲವು ಗ್ರಾಮೀಣ ಭಾಗ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿಅಂತರ್ಜಾಲ ಸೇವೆ ಹಾಗೂ ಮೊಬೈಲ್‌ ಸಂಪರ್ಕ ಇಂದಿಗೂ ಕೂಡ ಸಾಧ್ಯವಾಗದೆಯೇ, ಸವಾಲಿನ ಕೆಲಸವಾಗಿದೆ. ನಗರಗಳಲ್ಲಿ ಲಭ್ಯವಾಗುವ 4ಜಿ ವೇಗದ ಅಂತರ್ಜಾಲ ಸೇವೆಯನ್ನು ನಿತ್ಯ ನೀಡಲು ಟೆಲಿಕಾಂ ಸೇವಾ ಕಂಪನಿಗಳಿಗೆ ಆಗುತ್ತಿಲ್ಲ.

ಹಾಗಾಗಿ , ಇಂಥ ಸವಾಲಿನ ಪ್ರದೇಶಗಳಲ್ಲಿನ ಜನರನ್ನು ಡಿಜಿಟಲ್‌ ಪಾವತಿ ವ್ಯವಸ್ಥೆ ಬಳಸುವಂತೆ ಉತ್ತೇಜಿಸಲು ಆರ್‌.ಬಿ.ಐ.ನಿಂದ ಆಫ್‌ಲೈನ್‌ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಆದರೆ, ಈ ವ್ಯವಸ್ಥೆಯ ದುರ್ಬಳಕೆ ಹಾಗೂ ಕಪ್ಪುಹಣದ ವಹಿವಾಟಿಗೆ ಬಳಕೆಯಾಗದಂತೆ ನಿಯಂತ್ರಿಸಲು ಆರ್‌.ಬಿ.ಐ. ಸೂಕ್ತ ಮಿತಿಗಳನ್ನು ಹೇರುವ ಮೂಲಕ ಆಫ್‌ಲೈನ್‌ ಹಣ ವರ್ಗಾವಣೆಗೆ ಚೌಕಟ್ಟು ಹಾಕಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...