alex Certify BIG NEWS: 40 ಲಕ್ಷ ರೂ. ಗಳಿಸುವ ಅವಕಾಶ ನೀಡ್ತಿದೆ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 40 ಲಕ್ಷ ರೂ. ಗಳಿಸುವ ಅವಕಾಶ ನೀಡ್ತಿದೆ RBI

ಭಾರತೀಯ ರಿಸರ್ವ್ ಬ್ಯಾಂಕ್  40 ಲಕ್ಷ ರೂಪಾಯಿ ಗಳಿಸುವ ಅವಕಾಶ ನೀಡುತ್ತಿದೆ. ಆರ್‌.ಬಿ.ಐ. ತನ್ನ ಮೊದಲ ಜಾಗತಿಕ ಹ್ಯಾಕಥಾನ್ ಆಯೋಜಿಸಿದೆ. ಡಿಜಿಟಲ್ ಪಾವತಿಗೆ ಪ್ರೋತ್ಸಾಹ, ಸುರಕ್ಷತೆ ಇದ್ರ ಮುಖ್ಯ ಉದ್ದೇಶವಾಗಿದೆ.

ಹ್ಯಾಕಥಾನ್ ಬಗ್ಗೆ ಮಾಹಿತಿ ನೀಡಿದ ಆರ್‌.ಬಿ.ಐ, ಡಿಜಿಟಲ್ ಪಾವತಿಗಳನ್ನು ಹೆಚ್ಚು ಚುರುಕು ಮತ್ತು ಪರಿಣಾಮಕಾರಿಯಾಗಿ ಮಾಡುವುದು ಇದ್ರ ಉದ್ದೇಶ ಎಂದಿದೆ. ಆರ್‌.ಬಿ.ಐ. ಪ್ರಕಾರ, HARBINGER 2021 ಹೆಸರಿನ ಈ ಹ್ಯಾಕಥಾನ್‌ನ ನೋಂದಣಿ ನವೆಂಬರ್ 15 ರಿಂದ ಪ್ರಾರಂಭವಾಗಲಿದೆ. ಮಂಗಳವಾರ ಆರ್‌.ಬಿ.ಐ. HARBINGER 2021-Innovation for Transformation ಅನ್ನು `ಸ್ಮಾರ್ಟರ್ ಡಿಜಿಟಲ್ ಪಾವತಿಗಳು’ ಥೀಮ್‌  ಘೋಷಿಸಿದೆ.

ಇಲ್ಲಿ ನಡೆಯುತ್ತೆ ವಿಚಿತ್ರ ಆಚರಣೆ: ಸಗಣಿ ಉಂಡೆಯಲ್ಲಿ ಹೊಡೆದಾಡಿಕೊಳ್ತಾರೆ ಜನ….!

ಹ್ಯಾಕಥಾನ್‌ನಲ್ಲಿ ಭಾಗವಹಿಸುವವರು, ಡಿಜಿಟಲ್ ಪಾವತಿಯ ಸುರಕ್ಷತೆ ಸಮಸ್ಯೆಯನ್ನು ಪತ್ತೆ ಮಾಡಬೇಕು. ಹಾಗೆ ಅದನ್ನು ಸರಿಪಡಿಸುವ ಹಾಗೂ ಡಿಜಿಟಲ್ ಪಾವತಿ ಸರಳಗೊಳಿಸುವ ವಿಧಾನವನ್ನು ಆರ್‌.ಬಿ.ಐ.ಗೆ ಹೇಳಬೇಕು. ತೀರ್ಪುಗಾರರು ಪ್ರತಿ ವಿಭಾಗದಲ್ಲಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಪ್ರಥಮ ಸ್ಥಾನ ಪಡೆದವರಿಗೆ 40 ಲಕ್ಷ ರೂಪಾಯಿ, ದ್ವಿತೀಯ ಸ್ಥಾನ ಪಡೆದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು. ಕೊರೊನಾ ನಂತ್ರ ದೇಶದಲ್ಲಿ ನಗದು ಬೇಡಿಕೆ ಹೆಚ್ಚಾಗಿದೆ. ಇದ್ರ ಜೊತೆಗೆ ಡಿಜಿಟಲ್ ವ್ಯವಹಾರ ಮತ್ತಷ್ಟು ಬೆಳೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...